Saturday, February 22, 2025
Flats for sale
Homeಕ್ರೈಂಮಂಡ್ಯ : ಆಸ್ತಿಗಾಗಿ ತಮ್ಮನ ಕೊಲೆಗೆ ಸುಪಾರಿ ನೀಡಿ ಮಹಾ ಕುಂಭಮೇಳದಲ್ಲಿ ಅಣ್ಣನ ಪುಣ್ಯಸ್ನಾನ..!

ಮಂಡ್ಯ : ಆಸ್ತಿಗಾಗಿ ತಮ್ಮನ ಕೊಲೆಗೆ ಸುಪಾರಿ ನೀಡಿ ಮಹಾ ಕುಂಭಮೇಳದಲ್ಲಿ ಅಣ್ಣನ ಪುಣ್ಯಸ್ನಾನ..!

ಮಂಡ್ಯ : ಮದ್ದೂರು ತಾಲೂಕಿನ ಲಕ್ಷ್ಮಿ ಗೌಡನದೊಡ್ಡಿಯ ಬಳಿಯ ಜಮೀನಿನಲ್ಲಿ ಕಳೆದ ಫೆ.೧೧ರಂದು ಬೆಳಗ್ಗೆ ನಡೆದ ರೈತ ಕೃಷ್ಣೇಗೌಡ (45) ಭೀಕರ ಹತ್ಯೆ ಕೊಲೆ ಪ್ರಕರಣವನ್ನು ಬೇಧಿಸಿರುವ ಜಿಲ್ಲಾ ಪೊಲೀಸರು ಆಸ್ತಿಗಾಗಿ ಸಹೋದರನೇ ಸುಪಾರಿ ನೀಡಿ ಕೊಲೆಮಾಡಿಸಿರುವುದನ್ನು ಪತ್ತೆಹಚ್ಚಿದ್ದಾರೆ.

ಕಳೆದ ಫೆಬ್ರವರಿ 11 ರ ಬೆಳಗ್ಗೆ 6 ಸುಮಾರಿಗೆ ಮನೆಯಿಂದ ಜಮೀನನ ಬಳಿ ಎಮ್ಮೆಗಳನ್ನು ಕಟ್ಟಲು ಹೋಗಿದ್ದ ಕೃಷ್ಣೇಗೌಡರನ್ನು ಬೈಕ್?ನಲ್ಲಿ ಬಂದಿದ್ದ ದುಷ್ಕರ್ಮಿಗಳು ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಕೂಗಾಟ, ಕಿರುಚಾಟ ಕೇಳಿ ಸ್ಥಳಕ್ಕೆ ಬಂದಿದ್ದ ಸ್ಥಳೀಯರ ಮೇಲೆ ಲಾಂಗ್ ಬೀಸಿದ್ದರು. ಗ್ರಾಮದಲ್ಲಿ ಬೆಳಗ್ಗೆ ಕೃಷ್ಣೇಗೌಡರ ಕೊಲೆ ಗ್ರಾಮಸ್ಥರ ಆತಂಕಕ್ಕೂ ಕಾರಣವಾಗಿತ್ತು. ಕೊಲೆ ಪ್ರಕರಣ ಸಂಬAಧ ಪ್ರಕರಣ ದಾಖಲಿಸಿಕೊಂಡಿದ್ದ ಕೆಎಂ ದೊಡ್ಡಿ ಠಾಣೆ ಪೊಲೀಸರು ಕೊನೆಗೆ ಕೊಲೆ ಪ್ರಕರಣವನ್ನು ಭೇದಿಸಿ, ಮೃತ ಕೃಷ್ಣೇಗೌಡನ ಸಹೋದರ ಶಿವನಂಜೇಗೌಡನನ್ನು ಬಂಧಿಸಿದ್ದಾರೆ.

ಕೊಲೆಗೆ ಐದು ಲಕ್ಷ ರೂ ಸುಪಾರಿ ಪಡೆದಿದ್ದ ಚಂದ್ರಶೇಖರ್, ಸುನೀಲ್,ಉಲ್ಲಾಸ್, ಪ್ರತಾಪ್, ಅಭಿಷೇಕ್, ಶ್ರೀನಿವಾಸ, ಕನಕಪುರ ಮೂಲದ ಹನುಮೇಗೌಡ ಸೇರಿ ಎಂಟು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಆರೋಪಿಗಳ ಬಂಧನದ ಬಳಿಕ ಬಳಿಕ ಕೊಲೆಯ ಸ್ಫೋಟಕ ವಿಚಾರ ಬೆಳಕಿಗೆ ಬಂದಿದ್ದು, ಆಸ್ತಿ ವಿಚಾರವಾಗಿ ಮೃತನ ಸಹೋದರ ಶಿವನಂಜೇಗೌಡನೇ ೫ ಲಕ್ಷ ರೂಪಾಯಿ ಸುಪಾರಿ ನೀಡಿ ಹತ್ಯೆ ಮಾಡಿಸಿರುವುದು ಪತ್ತೆಯಾಗಿದೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. ವ್ಯವಸಾಯ, ಹೈನುಗಾರಿಕೆ ಜೊತೆಗೆ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದ ಕೃಷ್ಣೇಗೌಡ, ಇತ್ತೀಚೆಗೆ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಸಾಲದ ಹಣವನ್ನು ಸಹೋದರ ಶಿವನಂಜೇಗೌಡ ತೀರಿಸಿ ಆತನ ಜಮೀನನ್ನು ತನ್ನ ಹೆಂಡತಿ ಹೆಸರಿಗೆ ಬರೆಸಿಕೊಂಡಿದ್ದ. ಜಮೀನು ಬರೆದುಕೊಟ್ಟರೂ ಕೃಷ್ಣೇಗೌಡ ತನ್ನ ಸಹೋದರ ಶಿವನಂಜೇಗೌಡನಿಗೆ ಜಮೀನು ಬಿಟ್ಟುಕೊಟ್ಟಿರಲಿಲ್ಲ.
ಜೊತೆಗೆ ತನ್ನ ಸಹೋದರಿಯರನ್ನೇ ಎತ್ತಿಕಟ್ಟಿ ಜಮೀನನ ವಿಚಾರದಲ್ಲಿ ಕೇಸ್ ಹಾಕಿಸಿದ್ದ. ಈ ವಿಚಾರವಾಗಿ ಕೃಷ್ಣೇಗೌಡನ ಮೇಲೆ ಶಿವನಂಜೇಗೌಡನಿಗೆ ಸಾಕಷ್ಟು ಕೋಪವಿತ್ತು. ಈತನನ್ನ ಹೀಗೆ ಬಿಟ್ಟರೇ ಆಗುವುದಿಲ್ಲ ಎಂದು ತಾನು ಆರ್ಚಕನಾಗಿ ಕೆಲಸ ಮಾಡುತ್ತಿದ್ದ ಮದನಹಟ್ಟಿಯಮ್ಮ ದೇವಸ್ಥಾನಕ್ಕೆ ಬರುತ್ತಿದ್ದ ಚಂದ್ರಶೇಖರ್ ನಿಗೆ ಎರಡು ತಿಂಗಳ ಹಿಂದೇಯೆ ಐದು ಲಕ್ಷ ರೂ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದಾನೆ.

ಹತ್ಯೆಯ ಬಗ್ಗೆ ಮೊದಲೇ ತಿಳಿದಿದ್ದ ಆರೋಪಿ ಶಿವನಂಜೇಗೌಡ, ತನ್ನ ಮೇಲೆ ಯಾವುದೇ ಅನುಮಾನ ಬರಬಾರದು ಎಂದು ಕೊಲೆಯಾಗುವ ಹಿಂದಿನ ದಿನವೇ ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದ್ದಾರೆ. ಅಂದ ಹಾಗೆ ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿ ಚಂದ್ರಶೇಖರ್, ಎರಡು ತಿಂಗಳಿAದ ಹತ್ಯೆಗೆ ಸ್ಕೇಚ್ ಹಾಕಿದ್ದ. ತನ್ನ ಜೊತೆಗೆ ಕೆಲ ಯುವಕರನ್ನು ಸೇರಿಸಿಕೊಂಡು, ಕೃಷ್ಣೇಗೌಡನ ಚಲನವಲನವನ್ನು ಶಿವನಂಜೇಗೌಡನ ಬಳಿ ಪಡೆದು ಫೆಬ್ರವರಿ 9 ರಂದೇ ಬೆಳಗ್ಗೆ ಹತ್ಯೆಗೆ ಮುಂದಾಗಿದ್ದರು. ಆದರೆ ಅಂದು ದೇವಸ್ಥಾನದ ಬಳಿ ಭಕ್ತರು ಇದ್ದ ಕಾರಣ ಹತ್ಯೆ ಮಾಡಿರಲಿಲ್ಲ. ಒಟ್ಟಾರೆ ಆಸ್ತಿಗಾಗಿ ಸಹೋದರರನ್ನೇ ಭೀಕರವಾಗಿ ಹತ್ಯೆ ಮಾಡಿಸಿದ ಅಣ್ಣ ಸೇರಿ ಎಂಟು ಬಂಧಿಯನ್ನು ಕೆಎಂ ದೊಡ್ಡಿ ಠಾಣೆ ಪೊಲೀಸರು ಬಂಧಿಸಿ, ಜೈಲಿಗೆ ಅಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular