Tuesday, October 21, 2025
Flats for sale
Homeಜಿಲ್ಲೆಮಂಗಳೂರು : X ಖಾತೆಯಲ್ಲಿ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆಯಿಂದ ಹಿಂದೂ ಧರ್ಮ ವಿರೋಧಿ,ದೇಶ ವಿರೋಧಿ ಪೋಸ್ಟ್...

ಮಂಗಳೂರು : X ಖಾತೆಯಲ್ಲಿ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆಯಿಂದ ಹಿಂದೂ ಧರ್ಮ ವಿರೋಧಿ,ದೇಶ ವಿರೋಧಿ ಪೋಸ್ಟ್ : ಆಸ್ಪತ್ರೆಯ ಕೆಲಸದಿಂದ ವಜಾ,ಎಫ್ಐಆರ್ ದಾಖಲು..!

ಮಂಗಳೂರು : ಮಂಗಳೂರು ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಡಾ . ಆಫೀಫ ತಮ್ಮ ಸಾಮಾಜಿಕ ಜಾಲತಾಣದ X ಖಾತೆಯಲ್ಲಿ “HELP STINKY HINDUS BEHIND ME “( ಕಾಪಾಡಿ,ಕೊಳಕು ಹಿಂದುಗಳು ನನ್ನ ಹಿಂದೆ ಇದ್ದಾರೆ ).” IM I INDIAN – YES, DO I HATE INDIA – YES” ( ಹೌದು ನಾನು ಭಾರತೀಯಳು, ಹೌದು ನಾನು ಭಾರತವನ್ನು ದ್ವೇಷಿಸುತ್ತೇನೆ ) ಎಂಬ ಹವೇಳನಕಾರಿ POST ಅನ್ನು ಹಾಕಿದ್ದಳು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ವೈದ್ಯೆಯ ತನಿಖೆ ನಡೆಸಿದ್ದಾರೆ.

ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ವೈದ್ಯೆ ಅಫೀಫ ಫಾತಿಮಾ ಎಂಬಾಕೆ ದೇಶ ವಿರೋಧಿ ಸಂದೇಶ ಪ್ರಕಟಿಸಿದ್ದು, ಸದ್ಯ ಆಕೆಯ ವಿರುದ್ಧ ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ. ಹೈಲ್ಯಾಂಡ್ ಆಸ್ಪತ್ರೆ ಹೆಚ್​ಆರ್​ ಮೊಹಮ್ಮದ್ ಅಸ್ಲಾಂ ದೂರು ಆಧರಿಸಿ ಬಿಎನ್​ಎಸ್​​ ಕಲಂ 196(1)(a), 353(2) ಅಡಿಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.

ಮಂಗಳೂರು CAA ಗಲಭೆ ಸಮಯದಲ್ಲೂ ಕೂಡ ಗಲಭೆ ಕೋರರು HIGHLAND ಆಸ್ಪತ್ರೆಯೊಳಗೆ ಅವಿತಿದ್ದು ಹಾಗೂ ಅದರ ಎದುರು ಬಸ್ಸನ್ನು ಹಾನಿ ಮಾಡಿದ್ದರು. ಪದೇ ಪದೇ ಐಲ್ಯಾಂಡ್ ಆಸ್ಪತ್ರೆ ದೇಶದ್ರೋಹಿಗಳ ಅಡ್ದೆ ಯಾಗುತ್ತಿದೆ. ವೈದ್ಯಕೀಯ ಸಂಸ್ಥೆಯಲ್ಲಿ ಹಿಂದುಗಳು ಹಾಗೂ ದೇಶದ ಮೇಲೆ ಇಷ್ಟೊಂದು ದ್ವೇಷ ಆತಂಕಕಾರಿಯಾಗಿದೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದರು.

ಅಫೀಫ ಫಾತಿಮಾ ಪೋಸ್ಟ್​ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಆಕೆಯನ್ನು ಹೈಲ್ಯಾಂಡ್ ಆಸ್ಪತ್ರೆ ಆಡಳಿತ ಮಂಡಳಿ ವಜಾಗೊಳಿಸಿದೆ. ನಂತರ ಆಸ್ಪತ್ರೆಯ ಹೆಚ್​ಆರ್ ಆಕೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ

RELATED ARTICLES

LEAVE A REPLY

Please enter your comment!
Please enter your name here

Most Popular