Wednesday, November 5, 2025
Flats for sale
Homeಜಿಲ್ಲೆಮಂಗಳೂರು : SCDCC ಬ್ಯಾಂಕ್ ನ ಅಧ್ಯಕ್ಷ ರಾಜೇಂದ್ರ ಕುಮಾರ್ ನ ದುರಂಹಕಾರದ ವರ್ತನೆಗೆ ರಾಜ್ಯಾದ್ಯಂತ...

ಮಂಗಳೂರು : SCDCC ಬ್ಯಾಂಕ್ ನ ಅಧ್ಯಕ್ಷ ರಾಜೇಂದ್ರ ಕುಮಾರ್ ನ ದುರಂಹಕಾರದ ವರ್ತನೆಗೆ ರಾಜ್ಯಾದ್ಯಂತ ಪತ್ರಕರ್ತರ ಸಂಘ ಖಂಡನೆ, ಜಿಲ್ಲಾ ಸಂಘ,ಪ್ರೆಸ್ ಕ್ಲಬ್ ಪ್ರಮುಖರು ಜಂಟಿಯಾಗಿ ಸಭೆ ನಡೆಸಿ ಪ್ರಮುಖ ವಿಚಾರಗಳ ತೀರ್ಮಾನ..!

ಮಂಗಳೂರು : ರಾಜೇಂದ್ರ ಕುಮಾರ್ ಮಾಧ್ಯಮದವರಿಗೆ ಮಾಡಿರುವ ಅವಮಾನವನ್ನು ಪತ್ರಕರ್ತರು ಗಂಭಿರವಾಗಿ ಪರಿಗಣಿಸಿದ್ದಾರೆ. ಜಿಲ್ಲಾ ಸಂಘದ ಕಾರ್ಯಕಾರಿಣಿ ಹಾಗೂ ಪ್ರೆಸ್ ಕ್ಲಬ್ ಪ್ರಮುಖರು ಜಂಟಿಯಾಗಿ ಸಭೆ ನಡೆಸಿ ಈ ವಿಚಾರವನ್ನು ಚರ್ಚಿಸಿದ್ದಾರೆ. ಚರ್ಚೆಯ ಸಮಯದಲ್ಲಿ ರಾಜೇಂದ್ರ ಕುಮಾರ್ ಅವರ ದುರಂಹಕಾರದ ವರ್ತನೆಯನ್ನು ಖಂಡಿಸಿ ಕೆಲವೊಂದು ಪ್ರಮುಖ ತೀರ್ಮಾನವನ್ನು ಕೂಡಾ ತೆಗೆದುಕೊಂಡಿದ್ದಾರೆ.

ಮೊದಲನೆಯದಾಗಿ ರಾಜೇಂದ್ರ‌ಕುಮಾರ್ ಜೊತೆ ಪತ್ರಕರ್ತರ ಜಿಲ್ಲಾ ಸಂಘವಾಗಲಿ, ಪ್ರೆಸ್ ಕ್ಲಬ್ ಆಗಲಿ ಯಾವುದೇ ರೀತಿಯಾದ ವ್ಯಾವಹಾರಿಕ ಒಡನಾಟ ಇಟ್ಟುಕೊಳ್ಳಬಾರದು ಹಾಗೂ ಪತ್ರಕರ್ತರ ಎಲ್ಲಾ ಕಾರ್ಯಕ್ರಮಗಳಿಂದಲೂ ಅವರನ್ನು ಹೊರಗಿಡುವ ತೀರ್ಮಾನ ಮಾಡಲಾಗಿದೆ. ಸಂಘದ ಸೇವಾ ಕಾರ್ಯಗಳಿಗೆ ಜಿಲ್ಲಾ ಸಹಕಾರಿ ಬ್ಯಾಂಕ್ ಆಗಲಿ ವ್ಯಯಕ್ತಿಕವಾಗಿ ರಾಜೇಂದ್ರ ಕುಮಾರ್ ನಿಂದಾಗಲಿ ಆರ್ಥಿಕ ಸಹಕಾರ ಪಡೆಯದಿರಲು ತೀರ್ಮಾನಿಸಲಾಗಿದೆ ಎಂದು ತಿಳಿದಿದೆ.

ಇನ್ನು ಇದೇ ಸಭೆಯಲ್ಲಿ ಬಹಳ ಮುಖ್ಯವಾದ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

  1. ಯಾವುದೇ ಪ್ರೆಸ್ ಮೀಟ್ ನಡೆದರೂ ಅಲ್ಲಿ ಕೊಡುವ ಗಿಫ್ಟ್ ವೋಚರ್, ಅಥವಾ ನಗದು ರೂಪದಲ್ಲಿ ನೀಡುವ ಹಣಕ್ಕೆ ನಿರ್ಬಂಧ ಹಾಕಲಾಗಿದೆ. ಪ್ರೆಸ್ ಮೀಟ್ ಆಯೋಜಕರಿಗೆ ಈ ವಿಚಾರವನ್ನು ಮೊದಲೇ ತಿಳಿಸುವ ಮೂಲಕ ಈ ಸಂಸ್ಕೃತಿಗೆ ಕಡಿವಾಣ ಹಾಕಲಾಗಿದೆ.
  2. ಅ‌್ಯಡ್ ಎಜೆನ್ಸಿಗಳು ಆಯೋಜಿಸುವ ಪ್ರೆಸ್ ಮೀಟ್ ಗಳಿಗೂ ಇದು ಅನ್ವಯ ಆಗಲಿದ್ದು ಅವರಿಗೂ ಈ ಬಗ್ಗೆ ಮನವರಿಕೆ ಮಾಡಲು ತೀರ್ಮಾನಿಸಲಾಗಿದೆ.
  3. ಸೆಲೆಬ್ರಿಟಿ ಪ್ರೆಸ್ ಮೀಟ್ ಗಳಿಗೂ ಈ ವಿಚಾರವನ್ನು ಮನವರಿಕೆ ಮಾಡಿ ಗಿಫ್ಟ್ ವೊಚರ್ ಅಥವಾ ಗಿಫ್ಟ್ ನೀಡದಂತೆ ಪತ್ರಿಕಾಗೋಷ್ಠಿ ಆಯೋಜನೆಯ ಮಾಹಿತಿ ಬಂದ ತಕ್ಷಣ ತಿಳಿಸಿ ಅವರಿಗೆ ಮ‌ನವರಿಕೆ ಮಾಡಲು ತೀರ್ಮಾನಿಸಲಾಗಿದೆ.

ಇಂದು ರಾಜೇಂದ್ರ ಕುಮಾರ್ ಮಾಡಿದ್ದನ್ನು ಮುಂದೆ ಯಾರೂ ಮಾಡದಂತೆ ಈ ಮೇಲಿನ ಕ್ರಮಗಳು ಅಗತ್ಯವಾಗಿದೆ ಎಂದು ಜಿಲ್ಲಾ ಸಂಘದ ಕಾರ್ಯಕಾರಿಣಿ ಹಾಗೂ ಪ್ರೆಸ್ ಕ್ಲಬ್ ನ ಜಂಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ದೊರೆತಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular