ಮಂಗಳೂರು : ರಾಜ್ಯದ ವಿರೋಧ ಪಕ್ಷದ ಮುಖ್ಯ ಸಚೇತಕ ಮಂಗಳೂರಿನಲ್ಲಿ ಬಿಜೆಪಿ ಎಂ .ಎಲ್ .ಸಿ ರವಿಕುಮಾರ್ ರವರು ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇಂದು ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಂಬರ್ 1 ದೇಶ ಭಕ್ತ ಸಂಘಟನೆ RSS ಬಗ್ಗೆ ಅತ್ಯಂತ ಹಗುರವಾಗಿ RSS ನ ಬಗ್ಗೆ ಸ್ವಲ್ಪವೂ ಗೌರವವಿಲ್ಲದೆ ಅಜ್ಞಾನ ಅಂಧಕಾರದಿಂದ ಮಾತನಾಡಿರುವುದು ದುರಂತ. ದೇಶದಲ್ಲಿ ಜನ ಬದಲಾವಣೆಯಾದರೆ ಮಾತ್ರ ಎಲ್ಲಾ ವಿಚಾರದಲ್ಲಿ ಬದಲಾವಣೆ ಯಾಗ್ತದೆ. ದೇಶದಲ್ಲಿ ದುರಂತ ಸಂಭವಿಸುವಾಗ RSS ತಮ್ಮ ನಿಶ್ವಾರ್ಥಮನೊಬಾವದಿಂದ ತಮ್ಮ ಸೇವೆಯಲ್ಲಿ ತೊಡಗಿದ್ದಾರೆ ಪ್ರೀಯಾಂಕ ಖರ್ಗೆ ಒಬ್ಬ ಅಜ್ಞಾನಿ ಸಚಿವ ಎಂದು ಆಕ್ರೋಶ ಹೊರಹಾಕಿದ್ದಾರೆ.
ದೇಶಕ್ಕೆ ಎರಡು ಮುತ್ತು ರತ್ನಗಳನ್ನು ಕೊಟ್ಟದ್ದು RSS, ಅಧಿಕಾರದ ಮದ ಏರಿದರಿಂದ ಪ್ರಿಯಂಕ್ ಖರ್ಗೆ ಈ ರೀತಿ ಮಾತಾಡುತ್ತಾರೆ,ಇವರಿಗೆ ತಾಕತ್ ಇದ್ದಾರೆ ಎಸ್ ಡಿಪಿಐಯನ್ನು ಬ್ಯಾನ್ ಮಾಡಲಿ,ಕೆ.ಜೆ ಹಳ್ಳಿ ಡಿಜೆ ಹಳ್ಳಿ ಪ್ರಕರಣಗಳಲ್ಲಿ ಪಾತ್ರವಹಿಸಿದ ಕ್ರಿಮಿನಲ್ ಗಾಲ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಸಮಾಜದಲ್ಲಿ ಭಯ ನಿರ್ಮಾಣ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳಲಿ.ಅದು ಬಿಟ್ಟು ದೇಶ ಸೇವೆ ಮಾಡುತ್ತಿದ್ದ RSS ವಿರುದ್ಧ ಈ ಮಾತು ಖಂಡನೀಯ ಎಂದರು.
ಬ್ಯಾನ್ ಮಾಡಬೇಕಾಗಿರುವುದು ಉಗ್ರ ಸಂಘಟನೆಗಳನ್ನು,ಅದು ಬಿಟ್ಟು ಇತರರ ಮೇಲೆ ದೌರ್ಜಮಾಡುವುದು ಅಲ್ಲ. ಪಾಕಿಸ್ತಾನ ಜಿಂದಾಬಾದ್ ಎಂದವರಿಗೆ ಈ ಸರಕಾರ ಬೆಂಬಲ ನೀಡುತ್ತಿದೆ ,ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದಿರಿ. ಗಾಂದಿಜಿಯವರು ಅಂಬೇಡ್ಕರ್ ರ್ಸ್ಬ್ಯಾಗ್ಗೆ ಅಧ್ಯಯನ ಮಾಡಿದ್ದಾರೆ,ಯುವಕರ ಚಾರಿತ್ರ್ಯವನ್ನು ನಿರ್ಮಾಣಮಾಡುವಂಹ ಸಂಘಟನೆ ಮೊದಲು ಖರ್ಗೆಯವರು ತಿಳಿದುಕೊಳ್ಳಲಿ ಎಂದರು.
ಪರ್ಮಿಶಮ್ ತೆಗೆಕೊಳ್ಳದೆ ಪತಸಂಚಲನ ಮಾಡುತ್ತಿದ್ದಾರೆ ಎಂಬ ಮಾತನ್ನು ಹೇಳ್ತಿದ್ದಾರೆ ಈ ವ್ಯಕ್ತಿ ಯಾವ ಊರ ದೊಣ್ಣೆ ನಾಯಕ,ಇವರನ್ನು ಮೊದಲು ಸಚಿವ ಸಂಪುಟದಿಂದ ಕೈಬಿಡಬೇಕೆಂದು ಅಗ್ರಹಿಸಿದ್ದು ನಿಮಗಿರುವಂತಹ ಅಜ್ಞಾನವನ್ನು ತಿಳಿಯಲು ಪುಸ್ತಕ ಬೇಕಾದರೆ ಕೇಳಿ ನಾನೇ ಕೊಡ್ತೇನೆ,ಯಾವ್ಯಾವ ಪುಸ್ತಕಗಳನ್ನು ಓದಿದರೆ ಈ ರೀತಿಯೇ ಆಗೋದು ಎಂದು ಹೇಳಿದರು.
ಕಾಂಗ್ರೆಸ್ ನಲ್ಲಿ RSS ನಿಂದ ಬಂದವರು ಯಾರೆಲ್ಲ ಇದ್ದರೆ ಸ್ವಲ್ಪ ಕಣ್ಣು ಬಿಟ್ಟು ನೋಡಿ. ಕೋವಿಡ್ ಸಂಧರ್ಭದಲ್ಲಿ, ಭೂಕಂಪ ಸಂದರ್ಭದಲ್ಲಿ, ಸ್ವಾತಂತ್ರ್ಯ ಸಂದರ್ಭದಲ್ಲೂ RSS ಸೇವೆ ಸಲ್ಲಿಸಿದೆ. ಬಿ.ಕೆ ಹರಿಪ್ರಸಾದ್ ತಾಲಿಬಾನ್ ಎಂದು ಹೇಳಿದಕ್ಕೆ,ಅವರಿಗೆ ಈ ವರೆಗೂ ಒಂದು ಮಂತ್ರಿ ಸ್ಥಾನ ಸಿಗಲಿಲ್ಲ ಕಾಂಗ್ರೆಸ್ ನ ಮನೆಯಲ್ಲಿದ್ದ ತಾಯಂದಿರೆ ಇದ್ದಾರೆ,ಅವರೇ ಸಂಘಾಕ್ಕೆ ಹಣ ಕೊಡ್ತಾರೆ ಅಂಥದರಲ್ಲಿ ಇದೆಲ್ಲ ಇಂತಹ ಮಾತು, ತಾಕತ್ತ್ ಇದ್ದರೆ ಆರ್ಎಸ್ಎಸ್ ನ್ನು ಬ್ಯಾನ್ ಮಾಡಲಿ ಎಂದು ಅಕ್ರೋಶ ಹೊರಹಾಕಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ,ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್,ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭಾರತ್ ಶೆಟ್ಟಿ,ಎಂಎಲ್.ಸಿ ಪ್ರತಾಪ್ ಸಿಂಹ ನಾಯಕ್,ರವಿಂದ್ ಮಾಜಿ ಶಾಸಕ ಸಂಜೀವ ಮಾಟ0ಡೂರ್,ರವೀಂದ್ರ ಶೆಟ್ಟಿ ಉಳಿದೊಟ್ಟು ಹಾಗೂ ಇನ್ನಿತರರು ಉಪಸ್ಥಿತರಿದ್ದರು.