Wednesday, March 4, 2026
Flats for sale
Homeಜಿಲ್ಲೆಮಂಗಳೂರು ; RCB ವಿಜಯೋತ್ಸವದಲ್ಲಿ ಕಾಲ್ತುಳಿತ ; ಪೋಲೀಸರ ತಲೆದಂಡದ ಬದಲು ಸಿ .ಎಂ ಸಿದ್ದರಾಮಯ್ಯ,ಡಿ.ಕೆ...

ಮಂಗಳೂರು ; RCB ವಿಜಯೋತ್ಸವದಲ್ಲಿ ಕಾಲ್ತುಳಿತ ; ಪೋಲೀಸರ ತಲೆದಂಡದ ಬದಲು ಸಿ .ಎಂ ಸಿದ್ದರಾಮಯ್ಯ,ಡಿ.ಕೆ ಶಿವಕುಮಾರ್,ಜಿ,ಪರಮೇಶ್ವರ್ ರವರು ರಾಜೀನಾಮೆ ನೀಡಲಿ : ಶಾಸಕ ವೇದವ್ಯಾಸ್ ಕಾಮತ್..!

ಮಂಗಳೂರು ; ರಾಜ್ಯ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿಯಿಂದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಆರ್‌ಸಿಬಿಯ ಸಂಭ್ರಮಾಚರಣೆಯ ವೇಳೆ ನಡೆದ ದುರಂತದಲ್ಲಿ 11 ಅಮಾಯಕ ಜೀವಗಳು ಬಲಿಯಾಗಿದ್ದು ದುರಂತದ ರೂವಾರಿ Indian National Congress – Karnataka ಸರ್ಕಾರದ ವಿರುದ್ಧ BJP Dakshina Kannada ವತಿಯಿಂದ ಮಂಗಳೂರಿನ ಪಿ.ವಿ.ಎಸ್ ವೃತ್ತದ ಬಳಿ ಪ್ರತಿಭಟನೆ ನಡೆಯಿತು.

ರಾಜ್ಯದಲ್ಲಿ ಕಾಂಗೆಸ್ಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ಅಶಾಂತಿಯ ವಾತಾವರಣ ಸೃಷ್ಟಿ, ಸೃಷ್ಟಿಯಾಗಿದೆ,ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ತಾಕತ್ತಿಲ್ಲದ ರಾಜ ಸರಕಾರ,ರಾಜಕಾರಣಿಗಳ ಕುಟುಂಸ್ಥರಿಗೆ ಕಪ್ ಮುಟ್ಟಿ ನೋಡಲು ಈ ದುಸ್ಸಾಹಸ,ಸಿದ್ದರಾಮಯ್ಯ ,ದಿಕೆಶಿ ರಾಜೀನಾಮೆ ಕೊಡಲಿ,ಈ ಅವಾಂತರ ಕ್ಕೆ ಕಾರಣವಾದ ಪರಮೇಶ್ವರ ರಾಜೀನಾಮೆ ಕೊಡಲಿ,ಒಳ್ಳೆಯ ಕೆಲಸಮಾಡುವವರನ್ನು ಮಾಡುತ್ತಾರೆ ಮಾಡುತ್ತಾರೆ ಯಾರೆಲ್ಲಾ ಕಾರಣಕರ್ತರಾದವರನ್ನು ಯಾವ ರೀತಿ ಕೇಸು ದಾಖಲು ಮಾಡುತ್ತಾರೆ, ಸಿದ್ದರಾಮಯ್ಯ, ಡಿಕೆಶಿ ಗಡಿಪಾರು ಮಾಡಬೇಕು ಎಂದು ಪ್ರತಿಭಟನೆಯಲ್ಲಿ ಸತೀಶ್ ಕುಂಪಾಲ ಅಕ್ರೋಶ ಹೊರಹಾಕಿದರು.

ಬಳಿಕ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿದ್ದು ನಡೆದಂತಹ ದುರ್ಘಟನೆಯ ಬಗ್ಗೆ ಆಕ್ರೋಶ ಹೊರಹಾಕಿದ್ದು, ಜೀವವನ್ನು ಕಳೆದುಕೊಂಡವರು ಸರಸುಮಾರು 25-32 ಯುವಕ ಯುವತಿಯರು,ಮುಂದೆ ಮನೆಯನ್ನು ನಿಭಾಯಿಸುವವರು,ಅವರಿಗೆ ಪರಿಹಾರ ಮೊತ್ತ ಕೊಡಬಹುದು ಆದರೆ ಜೀವ ಕೊಡಲು ಸಾಧ್ಯನಾ,ಜನರನ್ನು ಕರೆದವರು ಯಾರು X ಮೂಲಕ ಈ ಸಿದ್ದರಾಮಯ್ಯ, ಅಮಂತ್ರನ ಮಾಡಿದ್ದು ಇವರೇ,ಬಳಿಕ ಲಾಟಿಚಾರ್ಜ್ ಮಾಡಿ 11 ಜನರನ್ನು ಕೊಂದುಹಾಕಿದರು,ಯಾರೋ ಕಪ್ಪನ್ನು ಗೆದ್ದು ಅದರ ಉಪಯೋಗ ಪಡೆಯಲು ಈ ಕಾರ್ಯಕ್ರಮ ಏರ್ಪಡಿಸಿದಿರಿ ,ದೇಶದಲ್ಲಿ ಸಣ್ಣ ದುರಂತ ನಡೆದರೆ ರಾಜೀನಾಮೆ ಕೊಡಲು ಹೇಳುತ್ತಾರೆ,ಆದರೆ ಇಲ್ಲಿ ಯಾರು ರಾಜೀನಾಮೆ ಕೊಡ್ತಾರೆ,ಇವತ್ತು ಆರೋಪಿಗಳು ಯಾರೆಂದರೆ ಮುಖ್ಯಮಂತ್ರಿ, ಡಿಕೆಶಿ,ಪರಮೇಶ್ವರ, ಈ ಕಾರ್ಯಕ್ರಮ ದ ಪೂರ್ವ ಸಿದ್ದತೆ ಏನೂ?ಮಾನ ಮರ್ಯಾದೆ ಇದ್ದರೆ ರಾಜೀನಾಮೆ ಕೊಡಿ ಎಂದು ಅಕ್ರೋಶ ಹೊರಹಾಕಿದರು.

ಈ ಸಂದರ್ಭದಲ್ಲಿ ಬಿಜೆಪಿ ಅನೇಕ ಹಿರಿಯ ಬಿಜೆಪಿ ಮುಖಂಡರುಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular