ಮಂಗಳೂರು : MRPL ನಲ್ಲಿ ವಿಷಾನಿಲ ಸೋರಿಕೆಯಿಂದ ಇಬ್ಬರು ದುರ್ಮರಣ ಪ್ರಕರಣಕ್ಕೆ ಸಂಭಂದಿಸಿದಂತೆ ಮೃತದೇಹವನ್ನು ತವರೂರಿಗೆ ಕೊಂಡೊಯ್ದದ ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಐವರಿಗೆ ದಿಗ್ಬಂಧನ ಹಾಕಿದ ಘಟನೆ ನಡೆದಿದೆ.
ನಿನ್ನೆ ಮಂಗಳೂರಿನ MRPL ನಲ್ಲಿ ಸಿಬ್ಬಂದಿ ಮೃತಪಟ್ಟಿದ್ದು ಮೃತಪಟ್ಟ ದೀಪ್ ಚಂದ್ರ ಭಾರ್ತೀಯ ಗ್ರಾಮಸ್ಥರಿಂದ MRPL ಸಿಬ್ಬಂದಿಗೆ ದಿಗ್ಬಂಧಿಸಿದ್ದಾರೆ.
ದೀಪ್ ಚಂದ್ರ ಭಾರ್ತೀಯ ಮೃತದೇಹ ತಗೆದುಕೊಂಡು ಹೋಗಿದ್ದ ಸಹೋದ್ಯೋಗಿಗಳಾದ ಪ್ರಸಾದ್, ಬಲ್ಬೀರ್, ಸುರೇಂದ್, ಬಾಲನಾರಾಯಣ್, ಪಂಕಜ್ ಗೆ ದಿಗ್ಬಂಧನ ವರಿಸಿದ್ದು MRPL ನ ಮ್ಯಾನೇಜ್ಮೆಂಟ್ ಬರೋವರೆಗೂ ಮಂಗಳೂರಿಗೆ ಕಳಿಸಲ್ಲ ಅಂತಾ ಪಟ್ಟು ಹಿಡಿದಿದ್ದಾರೆ.
ನಿನ್ನೆ ವಿಮಾನದಲ್ಲಿ ಮೃತದೇಹ ತಗೆದುಕೊಂಡು ಹೋಗಿದ್ದ ಐವರು ಸಹೋದ್ಯೋಗಿಗಳು ಉತ್ತರ ಪ್ರದೇಶಕ್ಕೆ ತಲುಪಿದ್ದು MRPL ನ ಫ್ಯಾಕ್ಟರಿ ಮ್ಯಾನೇಜರ್ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿತ್ತು ಆದರೂ ಕ್ರಮ ಆಗಿಲ್ಲ, MRPL ತಮ್ಮ ನಿಲುವು ತಾಳಿಲ್ಲ ಅಂತಾ ಕುಟುಂಬಸ್ಥರು, ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಆದರೆ ಮೃತದೇಹ ರವಾನಿಸಲು ಹೊರಟ ಊರಿನಿಂದ ಕಾರ್ಮಿಕರು ನಮ್ಮನ್ನು ದಿಗ್ಬಂಧನ ಮಾಡಿದ್ದಾರೆ.ಐವರು ಸಿಬ್ಬಂದಿ ಕಾಪಾಡಿ ಅಂತಾ ವಿಡಿಯೋ ಮಾಡಿ MRPL ಗೆ ಮನವಿ ಮಾಡಿದ್ದು ಬಡ ಕಾರ್ಮಿಕರ ಪ್ರಾಣಕ್ಕೆ ಬೆಲೆ ಇಲ್ಲದಂತಾಗಿದೆಮ