Sunday, March 15, 2026
Flats for sale
Homeಜಿಲ್ಲೆಮಂಗಳೂರು : MCC ತ್ಯಾಜ್ಯ ವಿಲೇವಾರಿಗೆ 30 ಕೋಟಿ ವೆಚ್ಚದಲ್ಲಿ ಖರೀದಿಸಿದ ವಾಹನಗಳಿಗೆ ಕೇಳೋ ಗತಿಯಿಲ್ಲ!

ಮಂಗಳೂರು : MCC ತ್ಯಾಜ್ಯ ವಿಲೇವಾರಿಗೆ 30 ಕೋಟಿ ವೆಚ್ಚದಲ್ಲಿ ಖರೀದಿಸಿದ ವಾಹನಗಳಿಗೆ ಕೇಳೋ ಗತಿಯಿಲ್ಲ!

ಮಂಗಳೂರು : ಆ್ಯಂಟನಿ ವೇಸ್ಟ್ ರವರಿಗೆ ಸಡ್ಡು ಹೊಡೆಯಲು ಮಂಗಳೂರು ನಗರ ಪಾಲಿಕೆಯು ಈ ಪಾಲಿಕೆ ವ್ಯಾಪ್ತಿಯ ವಾರ್ಡ್‌ಗಳ ತ್ಯಾಜ್ಯ ವಿಲೇವಾರಿ ಹೊಣೆಯನ್ನು ಖುದ್ದು ಪಾಲಿಕೆಯೇ ವಹಿಸಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ. ಇದಕ್ಕಾಗಿ 30 ಕೋಟಿ ವೆಚ್ಚದಲ್ಲಿ ಹೊಸ ವಾಹನಗಳ ಖರೀದಿ ನಡೆದಿದೆ.ಮಾಹಿತಿ ಪ್ರಕಾರ ಪಾಲಿಕೆಯ ಅಧಿಕಾರಿಯೊಬ್ಬರು ಸೇರಿ ಈ ಯೋಜನೆ ಪ್ರಾರಂಭ ಮಾಡಲು ಹೊರಟು ತಾಂತ್ರಿಕ ಸಮಸ್ಯೆ ಉಂಟಾಗಿ ಈ ಪರಿಸ್ಥಿತಿ ಬಂದಿದೆ ಎಂಬುದು ಸಿಬ್ಬಂದಿಗಳ ಮಾತು.

ಆದರೆ ಆರು ತಿಂಗಳೇ ಕಳೆದರೂ ವಾಹನಗಳು ನಿಂತಲ್ಲೇ ನಿಂತು ತುಕ್ಕು ಹಿಡಿಯುವಂತಾಗಿದೆ.ಸಾಲಿನಲ್ಲಿ ನಿಲ್ಲಿಸಿರುವ ಈ ವಾಹನಗಳನ್ನು ನೋಡುವಾಗ ನಿಮಗೆ ಬಳಕೆ ಮಾಡಿರುವ ವಾಹನದಂತೆ ಕಾಣಿಸಬಹುದು. ಆದ್ರೆ ಇದು ಬಳಕೆ ಮಾಡಿರುವ ವಾಹನವಲ್ಲ. ಬದಲಾಗಿ ಶೋ ರೂಂನಿಂದ ನೇರವಾಗಿ ತಂದು ಬಳಕೆ ಮಾಡದೆ ತೆರೆದ ಪ್ರದೇಶದಲ್ಲಿ ಇಟ್ಟಿರುವುದರಿಂದ ಈ ಹೊಸ ವಾಹನಗಳು ಹಳೆ ವಾಹನಗಳಂತಾಗಿವೆ. ತ್ಯಾಜ್ಯ ವಿಲೇವಾರಿಗೆ ಬಳಸುವ ಈ ವಾಹನಗಳು ಮಂಗಳೂರು ಮಹಾನಗರ ಪಾಲಿಕೆಗೆ ಸೇರಿರುತ್ತದೆ.

ಮದುವೆ ಮಾಡಲೇ ಶೋಭನ ಮಾಡಿದಂಗೆ ಆಯಿತು ಈ ಮಹಾನಗರ ಪಾಲಿಕೆಯ ಸ್ಥಿತಿ,ಕೇಂದ್ರ ಸರ್ಕಾರದ ಸ್ವಚ್ಛ ಭಾರತ್ ಮಿಷನ್ ಅಡಿ ಮಂಗಳೂರು ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳಲ್ಲಿ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ 30 ಕೋಟಿ ರೂ ವೆಚ್ಚದಲ್ಲಿ ಈ ವಾಹನಗಳನ್ನು ಖರೀದಿ ಮಾಡಲಾಗಿದೆ. 107 ಸಣ್ಣ ವೆಹಿಕಲ್, 30 ಟಿಪ್ಪರ್, 16 ಕಾಂಪ್ಯಾಕ್ಟರ್ ಸೇರಿದಂತೆ 153 ಈ ನೂತನ ವಾಹನಗಳನ್ನು ಖರೀದಿಸಿ ಆರು ತಿಂಗಳು ಕಳೆದಿದೆ. ಆದ್ರೆ ಈ ವಾಹನಗಳಿಗೆ ಡ್ರೈವರ್, ಲೋಡರ್ ಕೆಲಸ, ವರ್ಕ್‌ಶಾಪ್ ಹಾಗೂ ಮೂರು ವರ್ಷದ ನಿರ್ವಹಣೆಗಾಗಿ ಟೆಂಡರ್ ಕರೆಯುವ ಪ್ರಕ್ರಿಯೆ ತಡವಾಗಿರುವ ಹಿನ್ನೆಲೆಯಲ್ಲಿ ವಾಹನಗಳು ನಿಂತಲ್ಲೇ ನಿಂತು ತುಕ್ಕು ಹಿಡಿಯುವ ಪರಿಸ್ಥಿತಿ ಎದುರಾಗಿದೆ.

ಆ್ಯಂಟನಿ ವೇಸ್ಟ್ ಸಂಸ್ಥೆ ಕಳೆದ ಏಳು ವರ್ಷಗಳಿಂದ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ವಾರ್ಡ್‌ಗಳ ತ್ಯಾಜ್ಯ ವಿಲೇವಾರಿ ಹೊಣೆಯನ್ನು ಹೊಂದಿತ್ತು .ಆದ್ರೆ ಈ ಸಂಸ್ಥೆಯ ಟೆಂಡರ್ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಆ್ಯಂಟನಿ ಸಂಸ್ಥೆಯ ಬದಲು ಮಹಾನಗರ ಪಾಲಿಕೆಯೇ ಸ್ವತಃ ತ್ಯಾಜ್ಯ ವಿಲೇವಾರಿ ಮಾಡಲು ಯೋಜನೆ ಹಾಕಿಕೊಂಡಿದೆ.

ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ತರಹ ಈ ಮಂಗಳೂರು ಮಹಾನಗರ ಪರಿಸ್ಥಿಯಾಗಿದೆ. ಬಿಜೆಪಿ ಆಡಳಿತದ ಅವಧಿಯಲ್ಲಿ ಖರೀದಿಸಲಾದ ಈ ವಾಹನಗಳ ನಿರ್ವಹಣೆಯ ಟೆಂಡರ್‌ ಕರೆಯುವ ವಿಚಾರದಲ್ಲಿ ಗೊಂದಲ ಉಂಟಾಗಿರುವುದರಿಂದ ಟೆಂಡರ್ ಪ್ರಕ್ರಿಯೆ ವಿಳಂಬವಾಗಿದೆ. ಈ ವಿಚಾರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿಯೂ ಚರ್ಚೆಯಾಗಿದ್ದು ವಿಪಕ್ಷ ಸದಸ್ಯರು ಶೀಘ್ರ ಈ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular