ಮಂಗಳೂರು : ಸುಮಾರು 800 ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿರುವ ಪುರಾಣ ಪ್ರಸಿದ್ಧ ಕಾವೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮವು ಮಾರ್ಚ್ 1ರಿಂದ 9 ರವರೆಗೆ ಜರುಗಲಿದ್ದು ಈ ಪ್ರಯುಕ್ತ ಕಾವೂರಿನ ಯುವ ತಂಡವೊಂದು ನಿರ್ಮಿಸಿದ ಮಹಾಲಿಂಗೇಶ್ವರ ದೇವರ ಭಕ್ತಿಗೀತೆಯು ಫೆಬ್ರವರಿ 23ರಂದು ದೇಗುಲ ವಠಾರದಲ್ಲಿ ಬಿಡುಗಡೆಗೊಳ್ಳಲಿದೆ. ಭರತ್ ಗಟ್ಟಿ ಹಾಗೂ ವಿಕಾಸ್ ಶೆಟ್ಟಿ ಅವರ ಅದ್ಭುತ ಕಂಠದಿಂದ ಮೂಡಿ ಬಂದಿರುವ ಹಾಡಿಗೆ, ಸಂದೀಪ್ ದೇವಾಡಿಗ ಅತ್ಯುತ್ತಮ ಸಾಹಿತ್ಯವನ್ನು ಒದಗಿಸಿದ್ದಾರೆ ಎಂದು ತಂಡ ಮಾಹಿತಿ ನೀಡಿದ್ದಾರೆ.
ನಿಖಿಲಾ ಡೆಕೋರ್ ನಿರ್ಮಾಣದಲ್ಲಿ ಮೂಡಿ ಬಂದ ಭಕ್ತಿಗೀತೆಯನ್ನು ಮಹಾಲಿಂಗೇಶ್ವರ ದೇವರ ಭಕ್ತರಿಗೆ ತಲುಪಿಸುವ ನಿಟ್ಟಿನಲ್ಲಿ ದೀಕ್ಷಿತ್ ಬೈದ್ಯ ಸಂಕಲನ ಮತ್ತು ಡಿಓಪಿ ಆಗಿ ಹಾಗೂ ನಿತೇಶ್ ಆಚಾರ್ಯ ಪೋಸ್ಟರ್ ಡಿಸೈನ್ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಡ್ರೋಣ್ ನಲ್ಲಿ ಸಿದ್ದು ಅವರು ತಮ್ಮ ಕೈಚಳಕದ ಮೂಲಕ ಗೀತೆಗೆ ಬೇಕಾದ ಅದ್ಭುತ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ ಎಂದು ತಿಳಿಸಿದ್ದಾರೆ.