ಮಂಗಳೂರು : ಈ ಪ್ರೀತಿಯೇ ಹೀಗೆ ಏನಾದರೂ ಒಂದು ಕಾರ್ಯಕ್ಕೆ ತಲುಪುವುದಕ್ಕೆ ಈ ಸುದ್ದಿನೇ ಸಾಕ್ಷಿ. ಪ್ರಿಯತಮೆ ಕೊಲೆಗೆ ಯತ್ನಿಸಿ ಬಳಿಕ ಆಕೆಯ ಮನೆಯಲ್ಲೇ ಪ್ರಿಯಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾರಿಪಳ್ಳಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಡ್ಮಾಣ್ ಗ್ರಾಮದ ನಿವಾಸಿ ಸುಧೀರ್(30) ಎಂದು ತಿಳಿದುಬಂದಿದೆ. ಮೃತ ಶ್ರೀಧರ್, ದಿವ್ಯಾ ಯಾನೆ ಎಂಬ ಯುವತಿಯನ್ನು ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಆದ್ರೆ, ಅದೇನಾಯ್ತೋ ಏನೋ ಕೆಲ ತಿಂಗಳ ಹಿಂದೆ ಇಬ್ಬರ ಮಧ್ಯೆ ಮನಸ್ತಾಪ ಉಂಟಾಗಿದ್ದು, ಇಂದು(ಜುಲೈ 07) ದಿವ್ಯಾಳ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಈ ವೇಳೆ ಆಕೆಯನ್ನು ಹತ್ಯೆಗೆ ಯತ್ನಿಸಿ ಬಳಿಕ ತಾನೂ ಸಹ ಅದೇ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದಿವ್ಯಾ ಯಾನೆ ಶ್ರೀಧರ್ನಿಂದ ಅಂತರ ಕಾಯ್ದುಕೊಂಡಿದ್ದಳು. ಆದರೂ ಬಿಡದ ಶ್ರೀಧರ್, ದಿವ್ಯಾಳಿಗೆ ಫೋನ್ ಮಾಡುವುದು, ಹಿಂಬಾಲಿಸುವುದು ಮಾಡುತ್ತಿದ್ದ. ಆದರೂ ದಿವ್ಯಾ ಕ್ಯಾರೇ ಎಂದಿಲ್ಲ. ಕೊನೆಗೆ ಶ್ರೀಧರ್ ಇಂದು(ಜುಲೈ 07) ದಿವ್ಯಾ ಇರುವ ಬಾಡಿಗೆ ಮನೆಗೆ ಆಗಮಿಸಿ ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದ್ದಾನೆ/ ಆ ಬಳಿಕ ಇಬ್ಬರ ನಡುವೆ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಶ್ರೀಧರ್, ದಿವ್ಯಾಳಿಗೆ ಚಾಕುವಿನಿಂದ ಇರಿದಿದ್ದಾನೆ. ಆಗ ದಿವ್ಯಾ ತಪ್ಪಿಸಿಕೊಂಡು ಹೋಗುವಾಗ ಮೂರ್ಛೆ ತಪ್ಪಿ ಬಿದ್ದಿದ್ದಾಳೆ.ಆದ್ರೆ ಆಕೆ ಮೃತಪಟ್ಟಿರಬಹುದೆಂದು ಭಾವಿಸಿ ಸುಧೀರ್ , ದಿವ್ಯಾ ಇದ್ದ ಬಾಡಿಗೆ ಮನೆಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.