Thursday, September 18, 2025
Flats for sale
Homeಜಿಲ್ಲೆಮಂಗಳೂರು : 79 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ.ಆಪರೇಟಿವ್ ಸೊಸೈಟಿ...

ಮಂಗಳೂರು : 79 ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ.ಆಪರೇಟಿವ್ ಸೊಸೈಟಿ ತೊಕ್ಕೊಟ್ಟು ಶಾಖೆ ವತಿಯಿಂದ ವೃಧ್ಧಾಶ್ರಮದ ಹಿರಿಯರಿಗೆ ಅಗತ್ಯ ವಸ್ತುಗಳ ವಿತರಣೆ…!

ಮಂಗಳೂರು : 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಸೈoಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ.ಆಪರೇಟಿವ್ ಸೊಸೈಟಿ ತೊಕ್ಕೊಟ್ಟು ಶಾಖೆ ವತಿಯಿಂದ ದೇರಳಕಟ್ಟೆ ಬೆಳ್ಮ, ಸೇವಾಶ್ರಮ ವೃದ್ಧಾಶ್ರಮದಲ್ಲಿ ಹಿರಿಯರಿಗೆ ಅಗತ್ಯ ವಸ್ತುಗಳ ವಿತರಣಾ ಕಾರ್ಯಕ್ರಮ ಆಗಸ್ಟ್ 30 ರಂದು ನಡೆಯಿತು.

ಈ ಕಾರ್ಯಕ್ರಮವನ್ನು ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ರವರು ಉದ್ಘಾಟಿಸಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸೈoಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ.ಆಪರೇಟಿವ್ ಸೊಸೈಟಿ ತೊಕ್ಕೊಟ್ಟು ಶಾಖೆ ಸೇವಾಶ್ರಮಗೆ ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ಸಮಾಜದಲ್ಲಿ ಕೋ.ಆಪರೇಟಿವ್ ಸೊಸೈಟಿ ಸಂಸ್ಥೆಗಳು ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜದ ಏಳಿಗೆಗೆ ಕೈಜೋಡಿಸಿಕೊಂಡಿರುವುದು ಆದರ್ಶಪ್ರಾಯವೆಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶ್ರೀ ಯು.ಟಿ. ಖಾದರ್ ಉದ್ಘಾಟಿಸಿದರು. ಶ್ರೀ ಸಾಗರ್ ಡಿ ಕಾರ್ಯಕ್ರಮವನ್ನು ನಿರೂಪಿಸಿದರು.
ಸಂಸ್ಥೆಯ ಪರಿಚಯವನ್ನು ಶ್ರೀಮತಿ ಸೂರ್ಯಕಾಂತಿ ನೀಡಿದರು. ಶ್ರೀ ಮಿಥುನ್ ಕುಮಾರ್ ಸ್ವಾಗತ ಭಾಷಣ ಮಾಡಿದರು. ಕುಮಾರಿ ಪ್ರಮಿತಾ ಲೋಬೋ ಧನ್ಯವಾದ ಅರ್ಪಿಸಿದರು.

ಈ ಸಂದರ್ಭದಲ್ಲಿ ಅತಿಥಿಗಳಾಗಿ: ಅಖಿಲ ಭಾರತ ಕ್ರಿಶ್ಚಿಯನ್ ಒಕ್ಕೂಟ ರಾಜ್ಯಾಧ್ಯಕ್ಷ ಶ್ರೀ ಅಲ್ವಿನ್ ಜೆರೋಮ್ ಡಿಸೋಜಾ

ಅಭಿವೃದ್ಧಿ ವ್ಯವಸ್ಥಾಪಕರು ಶ್ರೀ ನಾಗರಾಜ್ ಮಡಿವಾಳ್

ತೊಕ್ಕೊಟ್ಟು ಶಾಖಾ ವ್ಯವಸ್ಥಾಪಕರಾದ ಶ್ರೀ ವಿಷ್ಣು ಸಿ.ಕೆ. ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular