ಮಂಗಳೂರು : 2012ರಲ್ಲಿ ನಡೆದ ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಿಂದೂ ಸಂಘಟನೆ ಕಾರ್ಯಕರ್ತರು ದಾಳಿ ನಡೆಸಿ ಹಲ್ಲೆ ನಡೆಸಿದ ಹೋಂಸ್ಟೇ ಪ್ರಕರಣ ಕೊನೆಗೂ ಸುಖಾಂತ್ಯಗೊಂಡಿದೆ.
ಒಟ್ಟು 44 ಆರೋಪಿಗಳ ಪೈಕಿ ಮೂವರು ವಿಚಾರಣೆ ವೇಳೆ ಮೃತಪಟ್ಟಿದ್ದು, ಪತ್ರಕರ್ತ ನವೀನ್ ಸೂರಿಂಜೆ ಅವರನ್ನು ಈ ಹಿಂದೆ ಪ್ರಕರಣದಿಂದ ಬಿಡುಗಡೆಗೊಳಿಸಲಾಗಿತ್ತು. ಐವರು ಹುಡುಗಿಯರು ಸೇರಿದಂತೆ ಪಾರ್ಟಿಯಲ್ಲಿದ್ದ 12 ವ್ಯಕ್ತಿಗಳನ್ನು ಥಳಿಸಿ, ಬಟ್ಟೆ ಬಿಚ್ಚಿ, ಕಿರುಕುಳ ನೀಡಿದ್ದಾರೆ ಎಂದು ವರದಿಯಾಗಿದೆ. ಕೆಲವು ಹುಡುಗಿಯರ ಮುಖ ಕಪ್ಪಾಗಿತ್ತು. ಯುವಕರು ಮದ್ಯ ಸೇವಿಸಿ ಅಸಭ್ಯ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಕಾರ್ಯಕರ್ತರು ಆರೋಪಿಸಿದ್ದರು.
“ಹಾಕೊಡ್ಚಿ ಅಣ್ಣಾ.. ಬರ್ತ್ ಡೇ ಎನ್ನಾ” ಎಂಬ ಡೈಲಾಗ್ ಹೆಸರುವಾಸಿಯಾಗಿತ್ತು.ಎಲ್ಲಾರ ಬಾಯಲ್ಲೂ ಇದೆ ಮಾತು ಬರ್ತಾ ಇತ್ತು.ಹಿಂದೂ ಸಂಘಟನೆಯ ಕಾರ್ಯಕರ್ತರು ಪಡೀಲ್ ಸುಭಾಷ್ ಪಡೀಲ್ ನೇತೃತ್ವದಲ್ಲಿ ನಡೆದ ಹೋಂಸ್ಟೇ ದಾಳಿ ಪ್ರಪಂಚದಲ್ಲಿ ಸುದ್ದಿಯಾಗಿತ್ತು ಪಡೀಲ್ ಹೋಂ ಸ್ಟೇಗೆ ದಾಳಿ ಮಾಡಿ ಅಲ್ಲಿ ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆ ಆ.6ರಂದು ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ತೀರ್ಪು ಹೊರಬಂದಿದೆ.
2012ರ ಜುಲೈ 28 ರಂದು ಹೋಂ ಸ್ಟೇಗೆ ದಾಳಿ ಮಾಡಿ ಅಲ್ಲಿ ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆ ಆ.6ರಂದು ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ತೀರ್ಪು ಹೊರಬಂದಿದೆ. ಘಟನೆ ನಡೆದು ಸುದೀರ್ಘ 12 ವರ್ಷ ವಿಚಾರಣೆ ಬಳಿಕ ಇಂದು ಅಂತಿಮ ತೀರ್ಪು ಹೊರಬಿದ್ದಿದೆ. ಸದ್ಯ ಈ ಪ್ರಕರಣ ಖುಲಾಸೆ ಆಗಿದೆ. ಆರೋಪಿತರನ್ನು ನಿರಪರಾಧಿಗಳು ಎಂದು 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಮಂಗಳೂರು ನ್ಯಾಯಾಲಯ ತೀರ್ಪು ನೀಡಿದೆ.ಕೊನೆಗೂ ಆರೋಪಿಗಳು ನಿಟ್ಟುಸಿರುಬಿಟ್ಟಂತಾಗಿದೆ.
ಇದೀಗ ಉಳಿದ 40 ಆರೋಪಿಗಳನ್ನು ನ್ಯಾಯಾಲಯ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದೆ. ವಕೀಲರಾದ ಶಂಭು ಶರ್ಮಾ ಮತ್ತು ಕಿಶೋರ್ ಕುಮಾರ್ ಅವರನ್ನೊಳಗೊಂಡ ರಕ್ಷಣಾ ತಂಡ ಆರೋಪಿಗಳ ಪರ ವಾದ ಮಂಡಿಸಿದರು.