ಬೆಂಗಳೂರು : ಹಿಂದೂ ವಿರೋಧಿ ಹೇಳಿಕೆಗಾಗಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಸಂಸತ್ತಿನ ಒಳಗೆ ಬಂಧಿಸಿ ಕಪಾಳಮೋಕ್ಷ ಮಾಡಬೇಕು ಎಂದು ಸುರತ್ಕಲ್ ಬಿಜೆಪಿ ಶಾಸಕ ಭರತ್ ಶೆಟ್ಟಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಆಕ್ರೋಶಹೊರಹಾಕಿದ್ದರೆ.
ಏರಂಡ ರಡ್ದು ಗೆಬ್ಬು ದಂಡೇ ದೀಂದ ಸರಿ ಆತು ಯಾರಾದ್ರೇ ಎರಡು ಕಪಾಳಕ್ಕೆ ಬಾರಿಸಿದರೆ ಸರಿಯಾಗುತ್ತದೆ ಎಂದು ರಾಜಕೀಯ ಒಂದು ಬಾಗ,ರಾಜಕೀಯ ಇಂಥದೇ ಆದರೆ ಹಿಂದೂ ಸಮಾಜದ ಬಗ್ಗೆ ಈ ರೀತಿ ಮಾತುಗಳನ್ನು ಆಡುತ್ತಾ ಬಂದರೆ ನಿನಗೆ ಎಲ್ಲಿ ಶಸ್ತ್ರ ಪೂಜೆ ಮಾಡಬೇಕೋ ಅಲ್ಲೇ ನಿನಗೆ ಶಸ್ತ್ರ ಪೂಜೆ ಮಾಡುತ್ತೇವೆ . ಸಂಸತ್ ನಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಮಾತು ಕೇಳಿ ಬಂದಿದೆ ಒಬ್ಬ ಕಾಂಗ್ರೆಸ್ ನವ ಕೂಡ ಮಾತನಾಡುದಿಲ್ಲ ಕೊನೇದಾಗಿ ಉತ್ತರವನ್ನಾದರೂ ಕೊಡಿ .ಏನೋ ಒಂದು ಬಾಯಿಗೆ ಬಂಡ ಹಾಗೆ ಮಾತಾಡ್ತಾನೆ ಈಶ್ವರನಿಗೆ ತ್ರಿಶೂಲ ಎಡಗೈ ಕಡೆ ಇದೆ ಅದರಿಂದ ಈಶ್ವರನಿಗೆ ಎಡದಿಂದ ಬಲಕ್ಕೆ ಶಾಂತಿ ಪ್ರಿಯ ಅಂತ ಆದರೆ ಈ ಲುಚ್ಚನಿಗೆ ಗೊತ್ತಿಲ್ಲ ಈಶ್ವರನಿಗೆ ಮೂರು ಕಣ್ಣು ಇದೆ ಮೂರನೇ ಕಣ್ಣು ಬಿಟ್ಟರೆ ಇವ ಸುಟ್ಟು ಬೂದಿಯಾಗುತ್ತಾನೆಂದು ಗೊತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು .ರಾಹುಲ್ ಗಾಂಧಿ ಮಂಗಳೂರಿಗೆ ಬಂದರೆ ಅವರಿಗೂ ವ್ಯವಸ್ಥೆ ಮಾಡುತ್ತೇವೆ ಎಂದು ಶಾಸಕ ಶೆಟ್ಟಿ ಹೇಳಿದರು.
ಅವರು ಹಿಂದೂ ವಿರೋಧಿ ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಒಬ್ಬ ಹುಚ್ಚ ಎಂಬುದು ಸ್ಪಷ್ಟವಾಗಿದೆ. ಹಿಂದೂಗಳು ತಮ್ಮ ಬಗ್ಗೆ ಏನು ಹೇಳಿದರೂ ಸದ್ದಿಲ್ಲದೆ ಕೇಳುತ್ತಾರೆ ಎಂದು ಅವರು ಭಾವಿಸುತ್ತಾರೆ. ಅವರು ಸಂಸತ್ತಿನಲ್ಲಿ ಬೊಗಳಿದರೆ, ಸ್ಥಳೀಯ ನಾಯಕರು ಇಲ್ಲಿ ಬಾಲ ಅಲ್ಲಾಡಿಸಲು ಪ್ರಾರಂಭಿಸುತ್ತಾರೆ, ”ಎಂದು ಶೆಟ್ಟಿ ಹೇಳಿದರು.


