ಮಂಗಳೂರು ; ಸುಹಾಸ್ ಶೆಟ್ಟಿ ಹತ್ಯೆ ಸಂಭಂದಿಸಿದಂತೆ ಹತ್ಯೆಯ ತನಿಖೆಯನ್ನು NIA ಗೆ ಹಸ್ತಾಂತರಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರಾದ ಶ್ರೀ Amit Shah ಅವರಿಗೆ ಧನ್ಯವಾದಗಳು ಎಂದು ದ.ಕ ಜಿಲ್ಲೆಯ ಸಂಸದ ಕ್ಯಾಟ್ಟನ್ ಬ್ರಿಜೇಶ್ ಚೌಟರವರು ತಿಳಿಸಿದ್ದಾರೆ.
ನಿಷೇಧಿತ PFI ಸಂಘಟನೆಯ ಕಾರ್ಯಕರ್ತರು ಈಗ ಎಸ್‌ಡಿಪಿಐ ನ ಕಾರ್ಯಕರ್ತರಾಗಿ ತಮ್ಮ ಚಟುವಟಿಕೆಗಳನ್ನು ಮುಂದುವರೆಸಿದ್ದು ಇಂತಹ ದೇಶ ವಿರೋಧಿ ಶಕ್ತಿಗಳನ್ನು ಕಿತ್ತುಹಾಕುವಂತೆ ಹತ್ಯೆ ನಡೆದ ತಕ್ಷಣ ಕೇಳಿಕೊಂಡಿದ್ದೆನು ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ವಿಕಸಿತ ಭಾರತದ ಸಂಕಲ್ಪವನ್ನು ಸಾಕಾರಗೊಳಿಸುವಲ್ಲಿ ನಾವುಗಳು ಸಕ್ರಿಯವಾಗಿ ಪಾಲ್ಗೊಳ್ಳಲು ಇಂತಹ ಅಂಶಗಳನ್ನು ಬುಡ ಸಮೇತ ಕಿತ್ತು ಹಾಕುವುದು ಅತ್ಯಗತ್ಯ ಎಂದು ಪತ್ರಿಕಪ್ರಕಟಣೆಯಲ್ಲಿ ತಿಳಿಸಿದ್ದಾರೆ.