Saturday, March 14, 2026
Flats for sale
Homeಜಿಲ್ಲೆಮಂಗಳೂರು: ಹವಾಮಾನ ವೈಪ್ಯರೀತ್ಯದಿಂದ ಮತ್ಸ್ಯ ಕ್ಷಾಮ, ಸಂಕಷದಲ್ಟಿ ಕರಾವಳಿಯ ಮೀನುಗಾರರು.

ಮಂಗಳೂರು: ಹವಾಮಾನ ವೈಪ್ಯರೀತ್ಯದಿಂದ ಮತ್ಸ್ಯ ಕ್ಷಾಮ, ಸಂಕಷದಲ್ಟಿ ಕರಾವಳಿಯ ಮೀನುಗಾರರು.

ಮಂಗಳೂರು: ಮೀನುಗಾರಿಗೆ ಅಂದರೆ ಕರಾವಳಿಯ ಬೃಹತ್ ಉದ್ಯಮ ಇದನ್ನು ನಂಬಿ ಎಷ್ಟೋ ಕುಟುಂಬಗಳಿವೆ ಆದರೆ ಈಗ ಕರಾವಳಿ ಆರ್ಥಿಕತೆಯ ಜೀವನಾಡಿ ಮೀನುಗಾರಿಕೆ ಸಂಕಷ್ಟದಲ್ಲಿದೆ. ಮತ್ಸ್ಯ ಕ್ಷಾಮದಿಂದಾಗಿ ಮೀನುಗಾರಿಕೆಗೆ ಹೊರಟ ಬೋಟ್‌ಗಳು ಡೀಸೆಲ್ ವೆಚ್ಚ ಭರಿಸಲಾಗದೆ ದಡದಲ್ಲಿ ಲಂಗರು ಹಾಕಿವೆ.ಇದರಿಂದ ಮೀನುಗಾರರರು ಸಮಸ್ಯೆಯಲ್ಲಿದ್ದಾರೆ.

ಬೆಳಗಿನ ಜಾವಾ ಸುಮಾರು 3 ಗಂಟೆಗಿಂದ ಪ್ರಾರಂಭವಾಗುವ ಈ ಉದ್ಯಮ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಆರ್ಥಿಕ ವಹಿವಾಟಿಗೆ ಮಸತ್ಯೋದ್ಯಮ `ಟಾನಿಕ್’. ವಾರ್ಷಿಕವಾಗಿ ಸಾವಿರಾರು ಕೋಟಿ ರೂ. ವ್ಯವಹಾರ ನಡೆಸುವ ಮೀನುಗಾರಿಕೆ ಸಮೃದ್ಧವಾಗಿರುವ ಅವಧಿಯಲ್ಲಿಯೇ ಕ್ಷೀಣಿಸಿದೆ. ಮಂಗಳೂರಿನ ದಕ್ಕೆ ಮೂಲಕವೇ ಸುಮಾರು 1400 ಮೀನುಗಾರಿಕಾ ಬೋಟ್‌ಗಳು ಮೀನುಗಳ ಬೇಟೆಯಲ್ಲಿ ತೊಡಗಿವೆ. ಮೀನುಗಾರಿಕೆ ಋತು ಆರಂಭವಾದಾಗ ಅತಿ ಉತ್ಸಾಹದಲ್ಲಿದ್ದ ಕಡಲ ಮಕ್ಕಳು ಈಗ ಮೀನು ದೊರೆಯದೆ ನಿರಾಸೆಗೊಂಡಿದ್ದಾರೆ.ಕೋಟಿಗಟ್ಟಲೆ ಸಾಲ ಮಾಡಿ ಬೋಟ್ ಗಳನ್ನೂ ಖರೀದಿ ಮಾಡಿದ ವಾರಸುದಾರರಿಗಂತೂ ಬರೆಯೆಳೆದಂತಾಗಿದೆ.

ಪ್ರಸ್ತುತ ಮೀನುಗಾರರಿಗೆ ಹೆಚ್ಚು ಲಾಭ ತರುವ ದುಬಾರಿ ಮೀನುಗಳಾದ ಅಂಜಲ್, ಸಿಗಡಿ, ಮಾಂಜಿ ಮೊದಲಾದವುಗಳು ನಿರೀಕ್ಷಿತ ಪ್ರಮಾಣದಲ್ಲಿ ಬಲೆಗೆ ಬೀಳುತ್ತಿಲ್ಲ. ಈ ಮೀನನ್ನು ಜಾಸ್ತಿಯಾಗಿ ಕೇರಳದಿಂದ ಆಮದುಮಾಡಿಕೊಳ್ಳಲಾಗುತ್ತದೆ ಆದರೆ ಮೀನುಗಾರಿಕಾ ಬೋಟ್‌ಗಳಿಗೆ ಬಂಗುಡೆ, ಕೊಡ್ಡಾಯಿ ಮೀನುಗಳು ಸಿಗುತ್ತಿದೆಯಾದರೂ ಇದರ ಬೆಲೆ ಕಡಿಮೆಯಾಗಿರುವುದರಿಂದ ಮೀನುಗಾರರಿಗೆ ಲಾಭವಾಗುತ್ತಿಲ್ಲ.

ಈಗ ಸದ್ಯದ ಸ್ಥಿತಿಯಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಬೋಟ್‌ಗಳಿಗೆ ಮೀನು ಸಿಗದೆ ಡೀಸೆಲ್ ದುಡ್ಡು ಕೂಡಾ ಬರುತ್ತಿಲ್ಲ. ಆರ್ಥಿಕ ನಷ್ಟದಿಂದಾಗಿ ಶೇ.50ಕ್ಕೂ ಅಧಿಕ ಬೋಟ್‌ಗಳು ಕಡಲಿಗಿಳಿಯದೆ ದಡದಲ್ಲಿ ಲಂಗರು ಹಾಕಿದೆ.

ವಾಯುಭಾರ ಕುಸಿತದಿಂದ ಆಗ್ಗಾಗ್ಗೆ ಬರುವ ಚೆಂದಮಾರುತದಿಂದ ಮತ್ಸ್ಯ ಕ್ಷಾಮಕ್ಕೆ ಹವಾಮಾನ ವೈಪ್ಯರೀತ್ಯ ಕಾರಣ ಎಂದು ತಿಳಿಸಿದ್ದಾರೆ . ದಿಢೀರ್ ಆಗಿ ಏರಿರುವ ಸೆಖೆ ಮತ್ತು ಹವಾಮಾನದಲ್ಲಾಗಿರುವ ಏರಿಳಿತದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಮೀನು ದೊರೆಯದೆ ಮೀನಿಗೆ `ಬರ’ ಎದುರಾಗಿದೆ.ವಾತಾವರಣ ವಿಪರೀತ ಬಿಸಿಯಾಗಿರುವ ಕಾರಣ ಮೀನುಗಳು ಹುಡುಕಿದರೂ ಸಿಗುತ್ತಿಲ್ಲ. ಈಚೆಗೆ ಶೇ.80 ರಷ್ಟು ಮೀನಿನ ಕೊರತೆ ಉಂಟಾಗಿದೆ ಎನ್ನುತ್ತಾರೆ ಸ್ಥಳೀಯ ಮೀನುಗಾರರು.

RELATED ARTICLES

LEAVE A REPLY

Please enter your comment!
Please enter your name here

Most Popular