Saturday, March 7, 2026
Flats for sale
Homeಜಿಲ್ಲೆಮಂಗಳೂರು : ಹಗಲು ರಾತ್ರಿ ಎನ್ನದೆ ಬೆಹುಗಾರಿಕಾ ನೆಟ್ವರ್ಕ್ ಮೂಲಕ ಎಗ್ಗಿಲ್ಲದೆ ಸಾಗುತ್ತಿರುವ ಮರಳು ಮಾಫಿಯಾ,ಮಟ್ಟ...

ಮಂಗಳೂರು : ಹಗಲು ರಾತ್ರಿ ಎನ್ನದೆ ಬೆಹುಗಾರಿಕಾ ನೆಟ್ವರ್ಕ್ ಮೂಲಕ ಎಗ್ಗಿಲ್ಲದೆ ಸಾಗುತ್ತಿರುವ ಮರಳು ಮಾಫಿಯಾ,ಮಟ್ಟ ಹಾಕಲು ಜಿಲ್ಲಾಡಳಿತ ವಿಫಲ ..!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗುತ್ತಿರುವ ಮರಳು ಮಾಫಿಯಾಕ್ಕೆ ಕಡಿವಾಣ ಹಾಕಲು ಗಣಿ ಇಲಾಖೆ ಹಾಗೂ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ. ಹಗಲು ರಾತ್ರಿ ಎನ್ನದೆ ಎಗ್ಗಿಲ್ಲದೆ ಸಾಗುತ್ತಿರುವ ಈ ಮಾಫಿಯಾ ದೊಡ್ಡದೊಂದು ಬೆಹುಗಾರಿಕಾ ನೆಟ್ವರ್ಕ್ ಹೊಂದಿರುವುದೇ ಇದಕ್ಕೆ ಕಾರಣ. ಹೀಗಾಗಿ ಅಧಿಕಾರಿಗಳು ಎಲ್ಲಿ ಎಷ್ಟೊತ್ತಿಗೆ ದಾಳಿ ಮಾಡ್ತಾರೆ ಅನ್ನೋ ಎಲ್ಲಾ ವಿಷಯ ಇವರಿಗೆ ಸಿಕ್ಕಿ ದಾಳಿಗೂ ಮೊದಲು ಎಸ್ಕೇಪ್ ಆಗುತ್ತಿರುವುದು ಪೊಲೀಸ್ ಇಲಾಖೆಯ ವೈಫಲ್ಯ ಅಂತಾನೆ ಹೇಳಬಹುದು.

ಇಂಟಲಿಜೆನ್ಸ್ಗಿಂತಲೂ ಸ್ಟ್ರಾಂಗ್ ಇದೆ ಇವರ ನೆಟ್ವರ್ಕ್ ಅಧಿಕಾರಿಗಳ ವಾಹನದ ಮೇಲೆ ಬೇಹುಗಾರರ ಹದ್ದಿನ ಕಣ್ಣು ಅಧಿಕಾರಿಗಳ ದಾಳಿಯ ಮಾಹಿತಿ ಪಡೆದು ಸ್ಥಳದಿಂದ ಎಸ್ಕೇಪ್ ಆಗುತ್ತಿರುವುದು ಕಂಡುಬರುತ್ತಿದೆ. ಆದರೆ ರಾಜಕೀಯ ಕೈವಾಡ ಎಲ್ಲಾ ಪಕ್ಷದವರು ಜೊತೆಸೇರಿ ಮರಳು ದೋಚುತ್ತಿರುವುದು ಇಲ್ಲಿ ತಿಳಿದ ವಿಚಾರ. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ಮಾಡಬೇಕು ಎಂಬ ಹಲವು ವರ್ಷದ ಬೇಡಿಕೆ ಇಂದಿಗೂ ಈಡೇರಲಿಲ್ಲ. ಇದೇ ಕಾರಣದಿಂದ ಜಿಲ್ಲೆಯ ನದಿಗಳ ಒಡಲು ಬಗೆದು ಮರಳು ತೆಗೆಯುವ ಅಕ್ರಮ ಕೂಡಾ ನಿಂತಿಲ್ಲ. ಹಾಗಂತ ಈ ಅಕ್ರಮ ಮರಳುಗಾರಿಕೆ ಕಣ್ಣಿಗೆ ಕಾಣಿಸಿದ್ರೂ ಹಲವೆಡೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಇನ್ನು ಕ್ರಮಕ್ಕೆ ಮುಂದಾಗಿ ದಾಳಿ ಮಾಡಿದ್ರೂ ಅಧಿಕಾರಿಗಳು ಹೋಗುವಷ್ಟರಲ್ಲಿ ಅಲ್ಲಿ ಏನೂ ಇರೋದಿಲ್ಲ. ಅಷ್ಟೊಂದು ಚಾಲಕಿತನದಿಂದ ಈ ಅಕ್ರಮ ಮರಳುಗಾರಿಕೆಯನ್ನು ನಡೆಸುವ ಮಾಫಿಯಾ ಜಿಲ್ಲೆಯಲ್ಲಿ ಸಕ್ರೀಯವಾಗಿದೆ. ಎಲ್ಲಾ ಅಕ್ರಮ ಮರಳು ಸಾಗಾಟಗಾರರು ಕೂಡಾ ಒಗ್ಗಟ್ಟಾಗಿ ಜಿಲ್ಲಾಡಳಿತಕ್ಕೇ ಸಡ್ಡು ಹೊಡೆದಿದ್ದಾರೆ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಒಂದಷ್ಟು ಆಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ಸಾಕಷ್ಟು ಕುತೂಹಲ ಮೂಡಿಸಿದೆ. ಅದು ಯಾವ ರೇಂಜ್ನಲ್ಲಿ ಅಧಿಕಾರಿಗಳನ್ನೇ ಬೇಹುಗಾರಿಕೆ ಮಾಡುತ್ತಿದ್ದಾರೆ ಅನ್ನೋದು ಈ ಆಡಿಯೋದಿಂದ ಗೊತ್ತಾಗಿದೆ ಆದರೆ ಇಲ್ಲಿ ಮರಳು ಮಾಫಿಯಾದ ಜೊತೆ ಪೊಲೀಸರು ಕೈಜೋಡಿಸುತ್ತಿರುವುದು ಸ್ಥಳೀಯರ ಮಾತು.

ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಗಾರ್ ಜಾಲತಾಣದಲ್ಲಿ ಮರಳು ಮಾಫಿಯಾದ ಖದೀಮರು ಯಾವರೀತಿ ನೆಟ್ವರ್ಕ್ ಹೊಂದಿರುತ್ತೇನೆಂಬುದನ್ನು ವಿಡಿಯೋ ಹರಿಯಬಿಟ್ಟಿದ್ದರು ಅದರಲ್ಲಿ ಎಲ್ಲ ಅಧಿಕಾರಿಗಳು ಶಾಮೀಲಾದಂತೆ ಎತ್ತಿ ತೋರುತಿತ್ತು. ಈ ಅಡಿಯೋ ಕೇಳಿದ್ರೆ ಮರಳು ಮಾಫಿಯಾದ ಜಾಲ ಎಷ್ಟು ಆಳವಾಗಿದೆ ಅನ್ನೋದು ಗೊತ್ತಾಗುತ್ತದೆ. ಹಾಗಂತ ಜಿಲ್ಲೆಯಲ್ಲಿ ನಡಿತಾ ಇರುವ ಈ ಮಾಫಿಯಾ ಮಟ್ಟ ಹಾಕಲು ಅಸಾದ್ಯವಾದ ಕೆಲಸವೇನು ಅಲ್ಲ. ಆದ್ರೆ ಜನಸಾಮನ್ಯರ ಕಣ್ಣಿಗೆ ಕಾಣುವ ಈ ಅಕ್ರಮ ಅಧಿಕಾರಿಗಳ ಕಣ್ಣಿಗೆ ಯಾಕೆ ಕಾಣ್ತಾ ಇಲ್ಲಾ ಅನ್ನೋದೇ ಅನುಮಾನ. ಹಾಗಂತ ಅಲ್ಲೊಂದು ಇಲ್ಲೊಂದು ಕಡೆ ಸಣ್ಣ ಸಣ್ಣ ದಾಳಿ ಮಾಡಿ ಕೇಸ್ ಹಾಕುವ ಅಧಿಕಾರಿಗಳಿಗೆ ನದಿಗೆ ಡ್ರಜ್ಜಿಂಗ್ ಮೆಷಿನ್ ಇಳಿಸಿ ಮರಳು ತೆಗೆಯುವುದು ಗೊತ್ತಿರದ ವಿಚಾರ ಆಗಿರಲಾರದು. ಆದರೆ ಕಣ್ಣಿದ್ದು ಕುರುಡಾಗಿರುವ ಅಧಿಕಾರಿಗಳಿಗೆ ತಮ್ಮ ಮೇಲೆಯೇ ಈ ಮಾಫಿಯಾದವರು ಜನ ಬಿಟ್ಟಿದ್ದಾರೆ ಎಂಬ ಸತ್ಯದ ಅರಿವಾಗಿಲ್ಲ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತಾದ ಆಡಿಯೊ ಹರಿದಾಡುತ್ತಿದ್ದು, ತಾವೆಷ್ಟು ಜಾಣರು ಅಂತ ಮಾಫಿಯಾ ಮಂದಿ ತೋರಿಸಿಕೊಟ್ಟಿದ್ದಾರೆ. ಗಣಿ ಇಲಾಕೆಯ ವಾಹನ ಯಾವ ಊರಲ್ಲಿ ಇದೆ ಎಲ್ಲಿ ಪಾಸ್ ಆಗ್ತಾ ಇದೆ ಅಂತ ವ್ಯಾಟ್ಸಾಪ್ ಗ್ರೂಪ್ನಲ್ಲಿ ವಾಯ್ಸ್ ಮೆಸೆಜ್ ಮೂಲಕವೇ ಅಪ್ಡೇಟ್ ಆಗುತ್ತಿದೆ. ಹೀಗಾಗಿ ಗಣಿ ಇಲಾಕೆ ವಾಹನ ಬಂದ ದಾರಿಯ ಲಾರಿಗಳು, ಮರಳು ತೆಗೆಯುವವರು ಎಲ್ಲರೂ ಅಲರ್ಟ್ ಆಗುತ್ತಿದ್ದಾರೆ ಎಂಬುದು 100 % ನಿಜ .

ಜಿಲ್ಲೆಯಲ್ಲಿ ಮರಳು ತೆಗೆಯಲು ನಿಶೇಧ ವಿಧಿಸಿದ್ರೂ ಸಿಆರ್ಜೆಡ್ ವಲಯ ಸೇರಿದಂತೆ ಎಲ್ಲಂದರಲ್ಲಿ ಮರಳುಗಾಗಿ ಅವ್ಯಾಹತವಾಗಿ ನಡಿತಾ ಇದೆ. ಇದನ್ನು ಮಟ್ಟ ಹಾಕಲು ಜಿಲ್ಲಾಡಳಿತದಿಂದ ಸಾಧ್ಯವಾಗಿಲ್ಲ ಅನ್ನೋದು ನಾಚಿಕೆಗೇಡಿನ ವಿಚಾರ.ಆದರೆ ಎಲ್ಲರಿಗೆ ಬಹಳ ದೊಡ್ಡ ಪ್ರಮಾಣದಲ್ಲಿ ಮಾಮೂಲಿ ಸಲ್ಲಿಕೆಯಾಗುತ್ತೀಯೆಂದು ಬಲ್ಲಮೂಲಗಳಿಂದ ಮಾಹಿತಿ . ತಮ್ಮ ಇಲಾಖೆಯ ಅಧಿಕಾರಿಗಳ ಮೇಲೆಯೇ ಹದ್ದಿನ ಕಣ್ಣಿಟ್ಟಿರುವ ಇವರನ್ನು ಇನ್ನಾದ್ರೂ ಮಟ್ಟ ಹಾಕಲು ಜಿಲ್ಲಾಡಳಿತ ಮುಂದಾಗತ್ತದಾ ಕಾದು ನೋಡಬೇಕಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular