Thursday, September 18, 2025
Flats for sale
Homeಜಿಲ್ಲೆಮಂಗಳೂರು : ಸ್ವಿಗ್ಗಿ, ಝೊಮಾಟೋ ಇನ್ನಿತರ ಸಂಸ್ಥೆಗಳಲ್ಲಿ ಡೆಲಿವರಿ ಕೆಲಸ ಮಾಡುವ ಕಾರ್ಮಿಕರಿಗೆ ನೋಂದಣಿ ಅಭಿಯಾನ…!

ಮಂಗಳೂರು : ಸ್ವಿಗ್ಗಿ, ಝೊಮಾಟೋ ಇನ್ನಿತರ ಸಂಸ್ಥೆಗಳಲ್ಲಿ ಡೆಲಿವರಿ ಕೆಲಸ ಮಾಡುವ ಕಾರ್ಮಿಕರಿಗೆ ನೋಂದಣಿ ಅಭಿಯಾನ…!

ಮಂಗಳೂರು : ದೇಶದಾದ್ಯಂತ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸಲು ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಮಂತ್ರಾಲಯವು ಇ-ಶ್ರಮ್ ಪೋರ್ಟಲ್ ಅಭಿವೃದ್ಧಿಪಡಿಸಿದ್ದು, ಇದರಲ್ಲಿ ಸ್ವಿಗ್ಗಿ, ಝೊಮಾಟೋಗಳಂತಹ ಸಂಸ್ಥೆಗಳಲ್ಲಿ ಪುಢ್ ಡೆಲಿವರಿ ಮಾಡುವ ಹಾಗೂ ಅಮೆಜಾನ್, ಫ್ಲಿಪ್‍ಕಾರ್ಟ್, ಪೋರ್ಟರ್, ಫಾರ್ಮಸಿ, ಬ್ಲಿಂಕಿಟ್, ಜೆಪ್ಟೋ, ಬಿಗ್‍ಬಾಸ್ಕೆಟ್, ಡಾಮಿನೋಸ್ ಮುಂತಾದ ಸಂಸ್ಥೆಗಳಲ್ಲಿ ಡೆಲಿವರಿ ಕೆಲಸ ನಿರ್ವಹಿಸುವ ಪ್ಲಾಟ್‍ಫಾರ್ಮ್ ಕಾರ್ಮಿಕರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಂದಾಯಿಸಲು ಸೆಪ್ಟೆಂಬರ್ 5 ರವರೆಗೆ ವಿಶೇಷ ಅಭಿಯಾನವನ್ನು ನಡೆಸಲಾಗುತ್ತಿದೆ.

ಇದರಲ್ಲಿ 16 ರಿಂದ 59 ವರ್ಷದೊಳಗಿನ ಇ.ಎಸ್.ಐ ಮತ್ತು ಪಿ.ಎಫ್ ಸೌಲಭ್ಯ ಹೊಂದಿರದ, ಆದಾಯ ತೆರಿಗೆದಾರರಲ್ಲದ ಡೆಲಿವರಿ ಪ್ಲಾಟ್‍ಫಾರ್ಮ್ ಕಾರ್ಮಿಕರು ಯೆಯ್ಯಾಡಿ ಶರ್ಬತ್‍ಕಟ್ಟೆಯಲ್ಲಿರುವ ಕಾರ್ಮಿಕ ಭವನ ಕಛೇರಿಯಲ್ಲಿ ಅಥವಾ ವೆಬ್‍ಸೈಟ್ ಮೂಲಕ ನೋಂದಾಯಿಸಿಕೊಂಡು ಯೋಜನೆಯ ಸೌಲಭ್ಯವನ್ನು ಪಡೆಯುವಂತೆ ಉಪವಿಭಾಗ-1 ಮತ್ತು 2 ರ ಕಾರ್ಮಿಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular