Tuesday, October 21, 2025
Flats for sale
Homeಜಿಲ್ಲೆಮಂಗಳೂರು ; ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ನಲ್ಲಿ ಆಗಸ್ಟ್ 4 ರಂದು "ಡ್ರಗ್ ಫ್ರೀ...

ಮಂಗಳೂರು ; ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ನಲ್ಲಿ ಆಗಸ್ಟ್ 4 ರಂದು “ಡ್ರಗ್ ಫ್ರೀ ಕ್ಯಾಂಪಸ್” ಕಾರ್ಯಕ್ರಮ – ವಿದ್ಯಾರ್ಥಿಗಳಿಗಾಗಿ ಕಡ್ಡಾಯ ಡ್ರಗ್ ಟೆಸ್ಟ್..!

ಮಂಗಳೂರು ; ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ವಿದ್ಯಾರ್ಥಿ ಪರಿಷತ್ತು ಮತ್ತು NSS ಘಟಕವು, ಮಂಗಳೂರು ನಗರ ಪೊಲೀಸ್ ಇಲಾಖೆ, CEN ಪೊಲೀಸ್ ಸ್ಟೇಷನ್ ಮತ್ತು ಕೆ.ಎಸ್. ಹೆಗ್ಡೆ, ಮೆಡಿಕಲ್ ಅಕಾಡೆಮಿ ನಿಟ್ಟೆ, ಸಹಯೋಗದೊಂದಿಗೆ “ಡ್ರಗ್ ಫ್ರೀ ಕ್ಯಾಂಪಸ್’ ಎಂಬ ಮಹತ್ವಪೂರ್ಣ ಕಾರ್ಯಕ್ರಮವು ಯಶಸ್ವಿಯಾಗಿ ಎರಡನೇ ವರ್ಷ ನಡೆಯಲಿದ್ದು, ಆಗಸ್ಟ್ 04- 2025ರಂದು ಬೆಳಿಗ್ಗೆ 11:30ಕ್ಕೆ ಕಾರ್ಯಕ್ರಮವನ್ನು ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌, ಉರ್ವಾ ಸ್ಕೋರ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಡಾ. ರಾಘವೇಂದ್ರ ಹೊಳ್ಳರವರು ತಿಳಿಸಿದ್ದಾರೆ.

ಮೊದಲ ವರ್ಷದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಮತ್ತು ಹೆತ್ತವರಿಂದ ಉತ್ತಮ ಸ್ಪಂದನೆ ಲಭಿಸಿರುತ್ತದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಡ್ರಗ್ ಪರೀಕ್ಷೆಗೆ ಒಳಗಾಗುತ್ತಾರೆ ಈ ಮೂಲಕ ಕಾಲೇಜು ಆವರಣವನ್ನು ನಶಾಮುಕ್ತನಾಗಿಸುವ ಗುರಿ ಯೊಂದಿಗೆ ಒಂದು ನಿಸ್ವಾರ್ಥ ಸೇವೆಯನ್ನು ಮಾಡಲಾಗುತ್ತಿದೆ ಎಂದರು.

ಈ ಕಾರ್ಯಕ್ರಮವನ್ನು ಪತ್ರಕರ್ತರಾದ ಶ್ರೀ ಹರೀಶ್ ರೈ ಉದ್ಘಾಟಿಸಲಿದ್ದು. ಮುಖ್ಯ ಅತಿಥಿಯಾಗಿ ಶ್ರೀ ರವೀಶ್ ಎಸ್ ನಾಯಕ್, ಸಹಾಯಕ ಪೊಲೀಸ್ ಆಯುಕ್ತರು (ಸೈಬರ್ ಎಕನಾಮಿಕ್ ಮತ್ತು ನಾರ್ಕೋಟಿಕ್ಸ್ ಕ್ರೈಂ ವಿಭಾಗ) ಪಾಲ್ಗೊಳ್ಳುತ್ತಾರೆ. ಡ್ರಗ್ ವ್ಯಸನದ ಬಗ್ಗೆ ವಿಶೇಷ ಉಪನ್ಯಾಸವನ್ನು ನಿಮ್ಮ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ. ಮಹಾಬಲೇಶ ಶೆಟ್ಟಿ ನೀಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಡಾ. ರಾಘವೇಂದ್ರ ಹೊಳ್ಳ ಎನ್. ವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರವೀಶ್ ನಾಯಕ್ ACP- CEN ಪೋಲಿಸ್ ಠಾಣೆ ಮಂಗಳೂರು ,ವಿಧ್ಯಾ ಶೆಟ್ಟಿ,Dr. ಸೂರಾಜ್, Dep.Forensic Medicine and Toxicology ಕೆ.ಎಸ್ ಹೆಗ್ಡೆ ಹಾಗೂ ನಮೃತ ,ಸಾಥ್ವಿಕ್ ರವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular