ಮಂಗಳೂರು : ಇತ್ತೀಚಿನ ದಿನಗಳಲ್ಲಿ ಸ್ವಸಹಾಯ ಸಂಘದ ಸದಸ್ಯರ ದೌರ್ಜನ್ಯ ಹೆಚ್ಚಾಗುತ್ತಿದ್ದು ಕೇವಲ ೪೦ ಸಾವಿರಕ್ಕೆ ಅಮಾಯಕ ಪ್ರಾಣತೆತ್ತಿದ್ದಾನೆ. ಜಿಲ್ಲೆಯಲ್ಲಿ ಒಡಿಯೂರು,ಧರ್ಮಸ್ಥಳ ಹಾಗೂ ಇನ್ನಿತರ ಸ್ವಸಹಾಯ ಸಂಘಗಳಿದ್ದು ಇವರುಗಳು ಅತಿ ಹೆಚ್ಚು ಬಡ್ಡಿ ಹಾಕಿ ಜನಸಾಮನ್ಯರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿರುವುದು ಕಂಡುಬಂದಿದೆ. ಇಬ್ಬರು ಮಕ್ಕಳ ತಂದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉಳ್ಳಾಲ ಸಮೀಪದ ಕುಂಪಲ ಹನುಮಂತನಗರದಲ್ಲಿ ನಡೆದಿದೆ. ಪತಿಯ ಕೃತ್ಯದಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಪತ್ನಿಯನ್ನು ಸ್ಥಳೀಯರು ಮಧ್ಯಪ್ರವೇಶಿಸಿ ರಕ್ಷಿಸಿದ್ದಾರೆ. ಹಣಕಾಸಿನ ಸಮಸ್ಯೆಯೇ ಈ ವಿಪರೀತ ಕೃತ್ಯಕ್ಕೆ ಕಾರಣ ಎಂದು ತಿಳಿದಿದೆ .
ಮೃತರನ್ನು ಯೋಗೀಶ್ (44) ಎಂದು ಗುರುತಿಸಲಾಗಿದ್ದು, ಕುಂಪಲ ಹನುಮಂತನಗರ ನಿವಾಸಿಯಾಗಿದ್ದು, ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು . ತನ್ನ ಮನೆಯ ಪಕ್ಕದ ವಾಶ್ ರೂಂ ಛಾವಣಿಯ ಮೇಲೆ ಮರದ ದಿಮ್ಮಿಯಿಂದ ನೇಣು ಬಿಗಿದುಕೊಂಡಿದ್ದಾರೆ.
ಯೋಗೀಶ್ ಸ್ವಸಹಾಯ ಸಂಘದ ಸದಸ್ಯನಾಗಿದ್ದು, ಬ್ಯಾಂಕಿನಲ್ಲಿ ಠೇವಣಿ ಇಡದೆ ಗುಂಪಿನಿಂದ 40 ಸಾವಿರ ರೂ. ಇತರೆ ಅಗತ್ಯಕ್ಕಾಗಿ ಉಪಯೋಗಿಸಿದ್ದರು. ಭಾನುವಾರ ಬೆಳಗ್ಗೆ ಗುಂಪಿನ ಇತರ ಸದಸ್ಯರು ಯೋಗೀಶ್ ಅವರ ನಿವಾಸಕ್ಕೆ ಭೇಟಿ ನೀಡಿ 40,000 ರೂ.ಗಳನ್ನು ಬ್ಯಾಂಕ್‌ಗೆ ಜಮಾ ಮಾಡುವಂತೆ ಒತ್ತಾಯಿಸಿದರು. ಇದರಿಂದ ಮನನೊಂದ ಯೋಗೀಶ್ ಅವಮಾನದಿಂದ ತನ್ನ ಜೀವನವನ್ನು ಅಂತ್ಯಗೊಳಿಸಿದ್ದಾರೆ.
ಉಳ್ಳಾಲ ಪೊಲೀಸರು ಯೋಗೀಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಯೋಗೀಶ್ ಪತ್ನಿ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಆದರೆ, ಸ್ಥಳದಲ್ಲಿದ್ದ ಸ್ಥಳೀಯರು ಆಕೆಗೆ ಹಾನಿಯಾಗದಂತೆ ತಡೆದು ಸಾಂತ್ವನ ಹೇಳಿದರು. ಯೋಗೀಶ್ ಅವರು ಪತ್ನಿ, ಇಬ್ಬರು ಪುಟ್ಟ ಮಕ್ಕಳು ಹಾಗೂ ತಾಯಿಯನ್ನು ಅಗಲಿದ್ದಾರೆ.