Thursday, March 12, 2026
Flats for sale
Homeಜಿಲ್ಲೆಮಂಗಳೂರು: ಸೆಂಟ್ರಿಂಗ್ ಶೀಟ್ ಕಳವು ಪ್ರಕರಣ - ಆರೋಪಿ ಬಂಧನ.

ಮಂಗಳೂರು: ಸೆಂಟ್ರಿಂಗ್ ಶೀಟ್ ಕಳವು ಪ್ರಕರಣ – ಆರೋಪಿ ಬಂಧನ.

ಮಂಗಳೂರು : ಕಳವು ಮಾಡಿದ್ದ ಸೆಂಟ್ರಿಂಗ್ ಶೀಟ್‌ಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿ ಆತನಿಂದ 120 ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳು ಮತ್ತು ಮೂರು ಸೆಟ್ ಕಬ್ಬಿಣದ ರಾಡ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಮೂಡುಬಿದಿರೆಯ ತೋಡಾರ್ ನಿವಾಸಿ ಇಲ್ಯಾಸ್ ಅಲಿಯಾಸ್ ಮೊಹಮ್ಮದ್ ಇಲ್ಯಾಸ್ (23) ಎಂದು ಗುರುತಿಸಲಾಗಿದೆ.

ಉಳ್ಳಾಲ ಪೊಲೀಸ್ ಠಾಣೆಯ ಪಿಎಸ್‌ಐ ಸಂತೋಷ್ ಕುಮಾರ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಶನಿವಾರ ಆ.26ರಂದು ಕರ್ತವ್ಯ ನಿರ್ವಹಿಸುತ್ತಿದ್ದರು. ಪಿಲಿಕೂರಿನಿಂದ ಕೆ ಸಿ ರಸ್ತೆ ಕಡೆಗೆ ರಿಟ್ಜ್ ಕಾರು ಮತ್ತು ಪಿಕಪ್ ವಾಹನಗಳು ಚಲಿಸುತ್ತಿದ್ದವು. ವಾಹನಗಳನ್ನು ನಿಲ್ಲಿಸಿದಾಗ ರಿಟ್ಜ್ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಕೆಳಗಿಳಿದು ಓಡಿ ಹೋಗಿದ್ದಾರೆ. ಪೊಲೀಸರು ಪಿಕಪ್ ವಾಹನದ ಚಾಲಕನನ್ನು ವಿಚಾರಿಸಿದಾಗ 120 ಸೆಂಟ್ರಿಂಗ್ ಶೀಟ್‌ಗಳು ಮತ್ತು ಕಬ್ಬಿಣದ ರಾಡ್‌ಗಳ ಮೂರು ಬಾಕ್ಸ್‌ಗಳು ಪತ್ತೆಯಾಗಿವೆ.

ಆಗಸ್ಟ್ 7 ರಂದು ರಾತ್ರಿ ಕೊಲ್ಯದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಿಂದ ಶೀಟ್‌ಗಳು ಮತ್ತು ರಾಡ್‌ಗಳನ್ನು ಕದ್ದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಮಾರಾಟ ಮಾಡಿದರೆ ಸಿಕ್ಕಿಬೀಳುತ್ತೇವೆ ಎಂಬ ಭಯದಿಂದ ಆರೋಪಿಗಳು ಪಿಲಿಕೂರಿನ ನಿರ್ಜನ ಸ್ಥಳದಲ್ಲಿ ಸಂಗ್ರಹಿಸಿಟ್ಟಿದ್ದರು. ಕಳವಾದ ಮಾಲು ಮೌಲ್ಯ 3.75 ಲಕ್ಷ ರೂ.

ಉಳ್ಳಾಲ ಠಾಣೆ ಇನ್ಸ್ ಪೆಕ್ಟರ್ ಸಂದೀಪ್ ಜಿ ಎಸ್, ಪಿಎಸ್ ಐ ಸಂತೋಷ್ ಕುಮಾರ್, ಕೃಷ್ಣ, ಶೀತಲ್, ಧನರಾಜ್, ಶೇಖರ್ ಗಟ್ಟಿ, ರಂಜಿತ್, ರಿಯಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
RELATED ARTICLES

LEAVE A REPLY

Please enter your comment!
Please enter your name here

Most Popular