ಮಂಗಳೂರು : ಮಂಗಳೂರಿನಲ್ಲಿ ಹಿಂದೂ ಮುಖಂಡ ಸುಹಾಸ್ ಶೆಟ್ಟಿ ಕೊಲೆಯ ನಂತರ ಪ್ರತೀಕಾರದ ಬೆದರಿಕೆಗಳು ಹೆಚ್ಚಾದ ಹಿನ್ನೆಲೆ ಸಾಮಾಜಿಕಜಾಲತಾಣದಲ್ಲಿ ಹಿಂದೂ ಮುಖಂಡರನ್ನು ಕೊಲ್ಲುವ ಬೆದರಿಕೆಗಳು ಹೆಚ್ಚಾಗಿದೆ ಈ ಹಿನ್ನೆಲೆ ಪೊಲೀಸರು ಹೈ ಅಲರ್ಟ್ ಆಗಿದ್ದು ರಾತ್ರೆ 9:30 ರ ನಂತರ ಅಂಗಡಿಗಳು ಮತ್ತು ವ್ಯಾಪಾರ ಮಳಿಗೆಗಳನ್ನು ಮುಚ್ಚಿಸುವಂತೆ ಆದೇಶಿಸಿದ್ದಾರೆ.
ಪದೇ ಪದೇ ಸಾಮಾಜಿಕ ಜಾಲತಾಣದಲ್ಲಿ ಇನ್ನಿತರ ಹುಂಡು ಮುಖಂಡರು ಶರಣ್ ಪಂಪವೆಲ್ಲ್ಈ,ಭಾರತ್ ಕುಂಡೆಲ್ ರವರಿಗೆ ಜೀವ ಬೆದರಿಕೆ ಹಿನ್ನೆಲೆ ಕ್ರಮ ಕೆಲ ದಿನಗಳ ವರೆಗೂ ಮುಂದುವರಿಯಬಹುದು ಎನ್ನಲಾಗಿದ್ದು ರಾತ್ರೆ ಹೊತ್ತು ಪ್ರಯಾಣಿಸದಂತೆ ಪೊಲೊಸ್ ಇಲಾಖೆ ಸೂಚಿಸಿದೆ.ಸುಹಾಸ್ ಶೆಟ್ಟಿ ಕೊಲೆ ನಂತರ ಮಂಗಳೂರಿನ ಮೂರು ಕಡೆ ಚಾಕು ಇರಿತ ಪ್ರಕರಣಗಳು ವರದಿಯಾಗಿದ್ದವು. ಒಟ್ಟಾರೆಯಾಗಿ 7 ಮಂದಿಯನ್ನು ಬಂಧಿಸಲಾಗಿತ್ತು. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ, ಮಂಗಳೂರಿನಲ್ಲಿ ಮತ್ತಿಬ್ಬರು ಹಿಂದೂ ಮುಖಂಡರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಬೆದರಿಕೆ ಹಾಕಲಾಗಿತ್ತು.
ವಿಶ್ವ ಹಿಂದೂ ಪರಿಷತ್ ಮುಖಂಡ ಭರತ್ ಕುಮ್ಡೇಲ್ ಅವರನ್ನು“ಮೇ 5 ರಂದು ರಾತ್ರಿ 9:30ಕ್ಕೆ ನಿನ್ನ ಸ್ಥಳದಲ್ಲೇ ಕೊಲ್ಲುತ್ತೇವೆ” ಎಂದು ಭರತ್ ಕುಮ್ಡೇಲ್ ಹೆಸರು ಉಲ್ಲೇಖಿಸಿ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆದ ಬೆನ್ನಲ್ಲೇ ಪೊಲೀಸರು ಅಲರ್ಟ್ ಆಗಿದ್ದಾರೆ.ಆದರೆ ಆ ಪೋಸ್ಟ್ ಗೆ ಸಂಬಂಧಪಟ್ಟಂತೆ ಇದು ವರೆಗೂ ಯಾರನ್ನು ಬಂದಿಸದೆ ಇರುವುದು ತಿಳಿದಿದೆ.ಒಟ್ಟಿನಲ್ಲಿ ಶಾಂತ ವಾಗಿದ್ದ ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಉದ್ವಿಗ್ನ ಗೊಂಡಿದೆ.