Sunday, July 13, 2025
Flats for sale
Homeಜಿಲ್ಲೆಮಂಗಳೂರು ; ಸುಳ್ಳು ಸುದ್ದಿ - ದ್ವೇಷ ಭಾಷಣದ ವಿರುದ್ಧ ವಿಶೇಷ ಕಾಯಿದೆ ಶೀಘ್ರದಲ್ಲಿ ಜಾರಿ...

ಮಂಗಳೂರು ; ಸುಳ್ಳು ಸುದ್ದಿ – ದ್ವೇಷ ಭಾಷಣದ ವಿರುದ್ಧ ವಿಶೇಷ ಕಾಯಿದೆ ಶೀಘ್ರದಲ್ಲಿ ಜಾರಿ : ಗೃಹ ಸಚಿವ ಜಿ.ಪರಮೇಶ್ವರ್….!

ಮಂಗಳೂರು ; ಮಂಗಳೂರು ಶಾಂತಿ ಸಭೆ ಬಳಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸುದ್ದಿಗೋಷ್ಟಿ ನಡೆಸಿದ್ದು ಬಳಿಕ ಮಾತನಾಡಿದ ಅವರು ಇದೊಂದು ಯಶಸ್ವಿ ಮತ್ತು ಸೌಹಾರ್ದತೆಯ ಶಾಂತಿ ಸಭೆ ಎಂದರು.

ಅನೇಕ ಪಾಸಿಟಿವ್ ಸಲಹೆಗಳು ಬಂದಿದೆ, ಯಾರೂ ವಿರುದ್ದವಾಗಿ ಮಾತನಾಡಿಲ್ಲ ಅದನ್ನ ನಾವು ಸಂಬಂಧಪಟ್ಟವರ ಜೊತೆ ಚರ್ಚಿಸಿ ಪರಿಹಾರ ಕಂಡುಕೊಳ್ತೇವೆ ನಾವು ಮುಂದೆ ಕ್ರಮ ತೆಗೋತಿವಿ, ಆದರೆ ಕಠಿಣ ಕ್ರಮಗಳಿಗೆ ಅವಕಾಶ ಕೊಡಬೇಡಿ ಎಂದರು.

ಪೊಲೀಸ್ ಇಲಾಖೆ ತನ್ನ ಕೆಲಸ ಮಾಡ್ತಾ ಇದೆ, ಜೊತೆಗೆ ಜನರು ಕೂಡ ಕೆಲಸ ಮಾಡಬೇಕು ದ್ವೇಷ ಭಾಷಣ ಹಾಗೂ ಸುಳ್ಳು ಸುದ್ದಿಗಳ ವಿರುದ್ದ ಕಾಯಿದೆ ತರ್ತೇವೆ,ನಾವು ಕಾನೂನು ಪ್ರಕಾರ ಏನ್ ಮಾಡಿದರೂ ಕೇಳಲ್ಲ, ಉಲ್ಲಂಘನೆ ಆದರೆ ಬಿಡಲ್ಲ ಎಂದರು.

ದನ ಸಾಗಾಟದ ವೇಳೆ ನೈತಿಕ ಪೊಲೀಸ್ ಗಿರಿ ಮಾಡಬಾರದು ಎಂದಾದರೆ ಅಂಥ ಅಕ್ರಮ ಇದ್ದರೆ ಪೊಲೀಸರಿಗೆ ತಿಳಿಸಿ, ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದರು. ಕಾನೂನು ಉಲ್ಲಂಘನೆ ಅಗಬಾರದು, ಅದು ಬಹಳ ಮುಖ್ಯವೆಂದರು.ಮರಳು ಮತ್ತು ಕಲ್ಲಿನ ವಿಚಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ಮಾಡಿದ್ದಾರೆ ಎಂದು ಹೇಳಿದರು.

ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಇಲ್ಲ, ಕೆಲ ಶಾಸಕರು ಅವರ ಕ್ಷೇತ್ರದ ವಿಚಾರದಲ್ಲಿ ಮಾತ್ರ ಮಾತನಾಡಿದ್ದಾರೆ,ಕ್ಷೇತ್ರಕ್ಕೆ ಹಣ ಬಿಡುಗಡೆ ಆಗಿಲ್ಲ ಅಂತ ಅವರ ಕ್ಷೇತ್ರದ ಬಗ್ಗೆ ಮಾತನಾಡಿದ್ದಾರೆ ಗ್ಯಾರಂಟಿ ಯೋಜನೆಗಳ ವಿಚಾರದಲ್ಲಿ ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular