Tuesday, October 21, 2025
Flats for sale
Homeಜಿಲ್ಲೆಮಂಗಳೂರು : ಸಿದ್ದಿಕ್ ಪಾಂಡವರ ಕಲ್ಲು ಮುಸ್ಲಿಂ ಯುವತಿಯರಿಗೆ ಮದುವೆ ಮಾಡಿಸುವ ನೆಪದಲ್ಲಿ ಪ್ರೌಡ್ ಫಂಡ್‌...

ಮಂಗಳೂರು : ಸಿದ್ದಿಕ್ ಪಾಂಡವರ ಕಲ್ಲು ಮುಸ್ಲಿಂ ಯುವತಿಯರಿಗೆ ಮದುವೆ ಮಾಡಿಸುವ ನೆಪದಲ್ಲಿ ಪ್ರೌಡ್ ಫಂಡ್‌ ಸಂಗ್ರಹ ಮಾಡುವುದಲ್ಲದೆ, ಮೊಬೈಲ್ ನಂಬರ್ ಪಡೆದು ಆನೈತಿಕ ಸಂಬಂಧಕ್ಕೆ ಬಳಕೆ : ಅಬ್ದುಲ್ ರವೂಫ್ ಗಂಭೀರ ಆರೋಪ…!

ಮಂಗಳೂರು : ಆಲ್ ಮರೀನಾ ಬಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿದ್ದಿಕ್ ಪಾಂಡವರ ಕಲ್ಲು ಎಂಬಾತ ಮುಸ್ಲಿಂ ಯುವತಿಯರಿಗೆ ಮದುವೆ ಮಾಡಿಸುವ ನೆಪದಲ್ಲಿ ಪ್ರೌಡ್ ಫಂಡ್‌ ಸಂಗ್ರಹ ಮಾಡುವುದಲ್ಲದೆ ಇದರ ಜತೆ ಯುವತಿಯರ ಮೊಬೈಲ್ ನಂಬರ್ ಪಡೆದು ಆ ಬಳಿಕ ತನ್ನ ಆನೈತಿಕ ಸಂಬಂಧಕ್ಕೆ ಬಳಸಿಕೊಳ್ಳಲು ಅವರಿಗೆ ಕಿರುಕುಳ ನೀಡುತ್ತಿದ್ದ ಎಂದು ಇನ್ನೊಂದು ಸಂಸ್ಥೆಯವರು ನನಗೆ ತಿಳಿಸಿ ಸಹಾಯ ಯಾಚಿಸಿದಾಗ ಸತ್ಯಾಸತ್ಯತೆಯನ್ನು ತಿಳಿಯಲು ಸಿದ್ದೀಕ್ ನನ್ನು ಕರೆದು ವಿಚಾರಿಸಿದಾಗ ಆತ ತನ್ನ ತಪ್ಪನ್ನು ಮರೆಮಾಡಲು ಅತ್ಮಹತ್ಯೆಗೆ ಪ್ರಯತ್ನಿಸಿದ್ದು ವಿಫಲವಾದಾಗ ಅವರಿಗೆ ಮುಖ ತೋರಿಸಲು ನಾಚಿಕೆ ಪಟ್ಟು ನನ್ನ ವಿರುದ್ಧವೇ ಪೊಲೀಸ್ ಠಾಣೆಯಲ್ಲಿಸುಳ್ಳು ಕೇಸ್ ದಾಖಲಿಸಿರುವುದಾಗಿ ಡಿ ವಾಯ್ಸ್ ಬ್ಲಡ್ ಡೊನೊರ್ಸ್ ಮಂಗಳೂರು ಇದರ ಸ್ಥಾಪಕ ಅಬ್ದುಲ್ ರವೂಫ್ ಬಂದ‌ರ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.

ವಾಯ್ ಆಪ್ ಬ್ಲಡ್ ಡೋನರ್ನ್ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ಮೂಲಕ ವಿವಿಧ ಪ್ರದೇಶಗಳಲ್ಲಿ ರಕ್ತದಾನ ಶಿಬಿರಗಳನ್ನು ವಬಾಡಿಸಿ ದಾಖಲೆಯ ಮಟ್ಟದಲ್ಲಿ ರಕ್ತದಾನ ಮಾಡಿಸಿ, ಸಮಾಜಕ್ಕೆ ಉಚಿತ ಆಂಬುಲೆನ್ ಸೇವೆ ಕಲ್ಪಿಸಿ ವಿಕಲಚೇತನರಿಗೆ ವೀಲ್ ಚೇರ್ ಮುಂಡಾದ ಪರಿಕರಗಳನ್ನು ನೀಡುತ್ತಾ ನಿರಂತರವಾಗಿ ಸಮಾಜ ಸೇವೆ ಮಾಡುತ್ತಾ ಬಂದಿರುವ ರವೂಫ್ ರೊಂದಿಗೆ ನೂರಾರು ಗಣ್ಯರು ಯುವಕರು ಕೈಜೋಡಿಸಿದ್ದಾರೆ ಸಮಾಜದಲ್ಲಿ ತನ್ನದೇ ಸ್ಥಾನಮಾನ ಹೊಂದಿರುವ ರವೂಫ್ ತನ್ನಲ್ಲಿ ಸಹಾಯ ಕೇಳಿ ಬಂದ ಮೇರೆಗೆ ನೆರವು ನೀಡಿರುವುದು ಮಾತ್ರವಲ್ಲದೆ ಬೇರೆ ಯಾವುದೇ ದುರುದ್ದೇಶದಿಂದಲ್ಲ ಎಂದು ಹೇಳಿದರು.

ಸಿದ್ದೀಕ್ ಪಾಂಡವರ ಕಲ್ಲು ಮುಸ್ಲಿಂ ಸಮುದಾಯದ ಅಮಾಯಕ ಯುವತಿಯರನ್ನು ತನ್ನ ತೀಟೆ ತೀರಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದ ಮತ್ತು ಬಡ ಹಣ್ಣು ಮಕ್ಕಳಿಗೆ ಮದುವೆ ಸಹಾಯಾರ್ಥ ಎಂದು ಹಣ ಸಂಗ್ರಹಿಸಿ ಆ ಹಣದಲ್ಲಿ ಮುಕ್ಕಾಲು ಪಾಲು ತಾನು ಇಟ್ಟುಕೊಂದು ಬಾಕಿ ಕಾಲು ಭಾಗವನ್ನು ಮಾತ್ರ ಅವರಿಗೆ ನೀಡುತ್ತಿದ್ದ ಎಂದು ತನ್ನ ಬಳಿಗೆ ಬಂದ ಸಂಘಟನೆಯವರು ಹೇಳಿದರು ಎಂದು ರವೂಫ್ ತಿಳಿಸಿದರು.

ಸಮಾಜದ ಪ್ರತಿಷ್ಠಿತ ವ್ಯಕ್ತಿಗಳನ್ನು ಹನಿ ಟ್ರ್ಯಾಪ್ ಮೂಲಕ ಸಿಲುಕಿಸಿ ಅವರಲ್ಲಿ ಹಣಕ್ಕಾಗಿ ಬ್ಲಾಕ್ ಮೇಲ್ ಮಾಡುವ ಪಾಂಡವರ ಕಲ್ಲು ಮಾಡುತ್ತಿದ್ದ ಈತ ಸಮಾಜಕ್ಕೊಂದು ಪಿಡುಗಾಗಿ ಪರಿಣಮಿಸಿದ್ದಾನೆ, ಆದುದರಿಂದ ತಾವು ನಮಗೆ ಸಹಾಯ ಮಾಡಬೇಕು ಎಂದಾಗ ನಾನು ಪ್ರಾಮಾಣಿಕವಾಗಿ ವಿಚಾರಿಸಿದ್ದ ಅಷ್ಟೇ ಅದಕ್ಕಾಗಿ ನನ್ನ ವಿರುದ್ಧ ಸುಳ್ಳು ಕೆಲಸು ದಾಖಲಿಸಿದ್ದಾನೆ ಎಂದು ಕೂಡ ರವೂಫ್ ಸ್ಪಷ್ಟಿಕರಣ ನೀಡಿದರು. ಈತನ ನೀಚ ಕುತಂತ್ರಗಳಿಗೆ ತಲೆಬಾಗುವ ಪ್ರಶ್ನೆಯೇ ಇಲ್ಲ, ಕಾನೂನಾತ್ಮಕವಾಗಿ ಈತ ಮಾಡುತ್ತಿರುವ ಅನ್ಯಾಯವನ್ನು ಸಮಾಜದ ಮುಂದೆ ಬಿಚ್ಚಿಡುತ್ತೇನೆ ಮಾತ್ರವಲ್ಲ ಯುವತಿಯರಿಗೆ ಅನ್ಯಾಯ ಮಾಡಿರುವುದನ್ನು ಕೂಡ ಜನರ ಮುಂದೆ ಇಡಬಯಸುತ್ತೇನೆ. ಮಾಧ್ಯಮ ಮಿತ್ರರು ಸತ್ಯ ಸತ್ಯತೆಯನ್ನು ಪರಿಶೀಲಿಸಿ ಈತ ಮಾಡುತ್ತಿರುವ ಅನ್ಯಾಯದ ವಿರುದ್ಧ ಸಾರ್ವಜನಿಕರಿಗೆ ಜಾಗೃತರಾಗುವಂತೆ ಮಾಡಬೇಕು ಎಂಬುದು ಈ ಸುದ್ದಿಗೋಷ್ಠಿಯ ಉದ್ದೇಶ ಜನರು ಕೊಟ್ಟ ಹಣವನ್ನು ಯಾವ ಉದ್ದೇಶಕ್ಕೆ ಬಳಸುತಿದ್ದಾನೆ ಎಂಬುದನ್ನು ದಾನಿಗಳೇ ಪ್ರಶ್ನಿಸಬೇಕು. ಹಾಗೂ ಯುವತಿಯರೂ ಕೂಡ ಈತನಿಗೆ ವೈಯುಕ್ತಿಕ ಮೊಬೈಲ್ ನಂಬರ್ ಕೊಡದೆ ಜಾಗೃತರಾಗಿರಬೇಕು ಎಂದು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ದ ವಾಯ್ಸ್‌ ಆಫ್‌ ಬ್ಲಡ್‌ ಡೋನರ್ಸ್‌ ಉಪಾಧ್ಯಕ್ಷ ಸಾದಿಕ್‌ ಸಾಲೆತ್ತೂರು, ಕಾರ್ಯದರ್ಶಿ ರುಬಿಯಾ ಅಕ್ತರ್‌  ಉಪಸ್ಥಿತರಿದ್ದರು .

RELATED ARTICLES

LEAVE A REPLY

Please enter your comment!
Please enter your name here

Most Popular