ಮಂಗಳೂರು : ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಜಪ್ಪಿನ ಮೊಗರು ಮಂಗಳೂರು ಇದರ ಆಶ್ರಯದಲ್ಲಿ 16 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಇದೇ ದಿನಾಂಕ ತಾ.06.09.2024ನೇ ಶುಕ್ರವಾರದಿಂದ ತಾ.08.09.20024ನೇ ಆದಿತ್ಯವಾರದವರೆಗೆ ಊರ ಹಾಗೂ ಪರಊರ ಭಕ್ತಾಭಿಮಾನಿಗಳ ಸಹಕಾರದಿಂದ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಸಮೀತಿಯ ಅಧ್ಯಕ್ಷರು ನಾಗೇಂದ್ರ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ತಾ. 06.09.2024ನೇ ರಂದು ಸಂಜೆ 4.00 ಗಂಟೆಗೆ ಪೂರ್ಣಕುಂಭ ಸ್ವಾಗತದೊಂದಿಗೆ ಜಪ್ಪಿನಮೊಗರು ಶ್ರೀ ವೈದ್ಯನಾಥ ಮಹಾದ್ವಾರದಿಂದ ಶ್ರೀ ವಿಘ್ನೇಶ್ವರನ ವಿಗ್ರಹವನ್ನು ಶ್ರೀ ಗಣೇಶ ಮಂಟಪಕ್ಕೆ ತರಲಾಗುವುದು. ಆನಂತರ ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಭಾ ಕಾರ್ಯಕ್ರಮವನ್ನು ಶ್ರೀಮತಿ ಶ್ವೇತಾ ಮತ್ತು ಶ್ರೀ ದೀಪಕ್ ಹೆಚ್ ಕೆ. ಕಂರ್ಬೆಟ್ಟು ಮಂಗಳೂರು ಇವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದು ಸಭಾಧ್ಯಕ್ಷತೆಯನ್ನು ಶ್ರೀ ಸದಾಶಿವ ಉಳ್ಳಾಲ್ (ಅಧ್ಯಕ್ಷರು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಉರ್ವಸ್ಟೋರ್) ವಹಿಸಲಿದ್ದಾರೆ. ಶ್ರೀ ಅರುಣ್ ಐತಾಳ್ ಆಡಳಿತ ಮೊಕೇಸರರು, ಶ್ರೀ ಮಂಗಳಾದೇವಿ ದೇವಸ್ಥಾನ ಇವರು ಆಶೀರ್ವದಿಸಲಿದ್ದು, ಶ್ರೀ ನಳೀನ್ ಕುಮಾರ್ ಕಟೀಲ್ (ಮಾಜಿ ಲೋಕಸಭಾ ಸದಸ್ಯರು) ಉದ್ಯಮಿ ಎ.ಜೆ.ಶೆಟ್ಟಿ ಮೊದಲಾದ ಗಣ್ಯರು ಭಾಗವಹಿಸಲಿರುವರು.
ರಾತ್ರಿ 9.00 ಗಂಟೆಗೆ ಡಾ| ದೇವದಾಸ್ ಕಾಪಿಕಾಡ್‌ರವರು ರಚಿಸಿ, ನಿರ್ದೇಶಿಸಿದ ‘ಏರ್ಲಾ ಗ್ಯಾರಂಟಿ ಅತ್ತ್..! ಈ ವರ್ಷದ ಹೊಸ ತುಳು ಹಾಸ್ಯ ನಾಟಕ ನಡೆಯಲಿರುವುದು. ತಾ: 07.09.2024 ರಂದು ಬೆಳಿಗ್ಗೆ 7.00 ಗಂಟೆಗೆ ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿಗಳು, ದೇರೆಬೈಲ್ ಇವರ ಪೌರೋಹಿತ್ಯದಲ್ಲಿ ಶ್ರೀ ಮಹಾಗಣಪತಿ ದೇವರ ಪ್ರತಿಷ್ಠಾಪನೆ ನಡೆಯಲಿರುವುದು, ಶ್ರೀಮತಿ ಸಪ್ನ ಮತ್ತು ಶ್ರೀ ದೇವರಾಜ್ ಅಂಗಡಿಮಾರು ಹಾಗೂ ಶ್ರೀಮತಿ ವನಿತಾ ಜಿ.ಶೆಟ್ಟಿ ಮತ್ತು ಜೆ. ಗಣೇಶ್ ಶೆಟ್ಟಿ ಇವರು ನಂದಾದೀಪ ಬೆಳಗಿಸಲಿರುವರು. ಬೆಳಿಗ್ಗೆ ಗಂಟೆ 9.00ಕ್ಕೆ ಪ್ರತಿಷ್ಠಾಪನಾ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕೃಷ್ಣ ಜೆ. ಪಾಲೆಮಾರ್, (ಮಾಜಿ ಸಚಿವರು, ಕರ್ನಾಟಕ ಸರಕಾರ) ಇವರು ನಡೆಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಪ್ರದೀಪ ಕುಮಾರ್ ಕಲ್ಕೂರ, ಶ್ರೀ ದಿನೇಶ್ ಆಳ್ವ ಮೊದಲಾದ ಗಣ್ಯರು ಭಾಗವಹಿಸಲಿರುವರು.
8-09-2024 ಬೆಳಿಗ್ಗೆ 9.30 ಗಂಟೆಗೆ ಹಸಿರು ತೆನೆ ವಿತರಣೆ, ನಂತರ ಭಜನಾ ಕಾರ್ಯಕ್ರಮ, ಮಧ್ಯಾಹ್ನದ ಮಹಾಪೂಜೆಯ ನಂತರ ಮಧ್ಯಾಹ್ನ 2.00 ಗಂಟೆಗೆ ‘ಶ್ರೀ ಭೋಜರಾಜ್ ವಾಮಂಜೂರು ಹಾಗೂ ಅರವಿಂದ ಬೋಳಾರ್ ಅವರ ಅಭಿನಯದಲ್ಲಿ ತಿರುಮಲೆತ ತಿಮ್ಮಪ್ಪೆ’ ಎಂಬ ತುಳು ಯಕ್ಷಗಾನ ಹಾಗೂ ಇನ್ನಿತರ ಸಾಂಸ್ಕತಿಕ ಕಾರ್ಯಕ್ರಮಗಳು ನಡೆಯಲಿದೆ.
ಕಾರ್ಯಕ್ರಮದ ವಿವರ …
ಸಂಜೆ 5.30ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ, ದೀಪ ಪ್ರಜ್ವಲನೆಯನ್ನು ಶ್ರೀಮತಿ ನಿಖಿತಾ ಕೋಟ್ಯಾನ್ ಮತ್ತು ಶ್ರೀ ನಿಶಾನ್ ಪೂಜಾರಿ ಇವರು ಮಾಡಲಿದ್ದು, ವಿಧಾನಸಭೆಯ ಗೌರವಾನ್ವಿತ ಸಭಾಧ್ಯಕ್ಷರಾದ ಜನಾಬ್ ಶ್ರೀ ಯು.ಟಿ. ಖಾದರ್‌ರವರು, ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಲೋಕಸಭಾ ಸದಸ್ಯ ಕ್ಯಾ ಬ್ರಿಜೇಶ್ ಚೌಟ, ಅಲ್‌ಜ್ ಯೆನೆಪೋಯಾ ಅಬ್ದುಲ್ಲಾ ಕುಂಞ ಹಾಗೂ ವಿಧಾನಪರಿಷತ್ ಸದಸ್ಯ ಶ್ರೀ ಐವನ್ ಡಿ’ಸೋಜಾ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿರುವರು. ಸಂಜೆ 7.30ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಸಾರ್ವಜನಿಕ ರಂಗಪೂಜೆ ಹಾಗೂ ಮಹಾಪೂಜೆ, ಆನಂತರ ಅನ್ನಸಂತರ್ಪಣೆ ನಡೆಯಲಿರುವುದು.
ರಾತ್ರಿ 9.೦೦ ಗಂಟೆಗೆ ಕಲಾ ಸಿಂಧೂ ಕಲಾವತಿ ದಯಾನಂದ ಉಡುಪಿ ಇವರ ತಂಡದಿಂದ ‘ಸಂಗೀತ ಸಂಜೆ’ ಸುಗಮ ಸಂಗೀತ ಕಾರ್ಯಕ್ರಮ. ತಾ. 08.09.2024ನೇ ಆದಿತ್ಯವಾರ ಬೆಳಿಗ್ಗೆ 7.30 ರಿಂದ 108 ತೆಂಗಿನಕಾಯಿಯ ಮಹಾಗಣಯಾಗ ಪ್ರಾರಂಭ, ನಂದಾದೀಪ ಬೆಳಗಿಸುವವರು ಶ್ರೀಮತಿ ಅಕ್ಷತಾ ಎಸ್. ಆಳ್ವ ಮತ್ತು ಶ್ರೀ ಸಂತೋಷ್ ಆಳ್ವ ತೋಚಿಲ. ಬೆಳಿಗ್ಗೆ 9.30ಕ್ಕೆ ಪೂರ್ಣಾಹುತಿ, ಬೆಳಿಗ್ಗೆ 11.00ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮ ದೀಪ ಪ್ರಜ್ವಲಿಸುವವರು ಶ್ರೀಮತಿ ರೇಷ್ಮಾ ಮತ್ತು ಶ್ರೀ ಸುಶಾಂತ್ ಜೆಪ್ಪಿನ ಮೊಗರು,ಸಭಾಧ್ಯಕ್ಷತೆಯನ್ನು ಶ್ರೀ ದಿವಾಕರ್ ಕದ್ರಿ (ಮಾಜಿ ಮೇಯರ್) ವಹಿಸಲಿದ್ದು, ಶಾಸಕರಾದ ಶ್ರೀ ಡಿ. ವೇದವ್ಯಾಸ್ ಕಾಮತ್, ಶ್ರೀ ಶೆಡ್ಡೆ ಮಂಜುನಾಥ ಭಂಡಾರಿ ಇನ್ನಿತರ ಗಣ್ಯರು ಉಪಸ್ಥಿತರಿರುವರು. ಮಧ್ಯಾಹ್ನ 1.00 ಗಂಟೆಗೆ ಮಹಾಪೂಜೆ ಆನಂತರ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 2.00 ಗಂಟೆಗೆ ‘ತೆಲಿಕೆದ ಕಮ್ಮೆನ’ ಎಂಬ ತುಳು ಹಾಸ್ಯ ಕಾಠ್ಯಕ್ರಮ, ಸಂಜೆ 4.30ರಿಂದ ಶ್ರೀ ವಿಶ್ವೇಶ್ವರ ದೇವರ ಭವ್ಯವಾದ ಶೋಭಾಯಾತ್ರೆ ರಾತ್ರಿ 11.00 ಗಂಟೆಗೆ ನೇತ್ರಾವತಿ ನದೀ ತೀರದ ಕಡೆಕಾರ್‌ನಲ್ಲಿ ಜಲಾಧಿವಾಸ ಮಾಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಉದಯ್ ಕೊಟ್ಟಾರಿ,ಸುಧಾಕರ್ ,ಶ್ರೀಧರ್ ರಾಜ್ ಶೆಟ್ಟಿ. ಶುಭಾಷ್ ವಿ ಅಡಪ,ಪ್ರಾಣೇಶ್ ರಾವ್, ಬಾಲಕೃಷ್ಣನ್ ಶೆಟ್ಟಿ ಉಪಸ್ಥಿತರಿದ್ದರು.


