ಮಂಗಳೂರು : ಸಾರ್ವಜನಿಕ ಸ್ಥಳದಲ್ಲಿ ಓಡಾಡಲು ಹಾಗೂ ವಾಹನಗಳ ಸುಗಮ ಸಂಚಾರಕ್ಕೆ ಅಡೆತಡೆ ಉಂಟು ಮಾಡಿದ ಅಪರಿಚಿತ ವ್ಯಕ್ತಿಗಳ ಮೇಲೆ ಐಪಿಸಿ ಕಲಂ 341, 283,143 ಹಾಗೂ 149ರಂತೆ ಪ್ರಕರಣ ದಾಖಲಿಸಿದ್ದರು ಆದರೆ ಸರಕಾರದ ಒತ್ತಡಕ್ಕೆ ಮಣಿದು ಪೊಲೀಸರು ದಾಖಲಿಸಿದ್ದ ಸ್ವಯಂ ಪ್ರೇರಿತ ಪ್ರಕರಣವನ್ನು ಹಿಂಪಡೆಯಲಾಗಿದೆ ಎಂದು ತಿಳಿದುಬಂದಿದೆ.
ಕಳೆದ ಶುಕ್ರವಾರ ಮಸೀದಿ ಪಕ್ಕದ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಅನೇಕರು ನಮಾಜ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು ಈ ಬಗ್ಗೆ ಬಹುತೇಕ ಜನರು ಆಕ್ರೋಶ ವ್ಯಕ್ತಪಡಿಸಿದ್ದರು ಆದರೆ ಇಂದು ಈ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದ್ದು ಪೊಲೀಸರು ಸರಕಾರ ಹಾಗೂ ಮುಸ್ಲಿಂ ನಿಯೋಗದ ಒತ್ತಡಕ್ಕೆ ಮಣಿದು ಪ್ರಕರಣವನ್ನು ಹಿಂಪಡೆದಿದ್ದು,ಕದ್ರಿ ಇನ್ಸ್ಪೆಕ್ಟರ್ ರವರನ್ನು ಕಡ್ಡಾಯವಾಗಿ ರಜೆಯ ಮೂಲಕ ಕಳುಹಿಸಿ S.P ದರ್ಜೆಯ ಅಧಿಕಾರಿಯನ್ನು ನೇಮಕಮಾಡಿ ಆದೇಶಿಸಿದ್ದಾರೆ ಎಂದು ತಿಳಿದಿದೆ.
ಮಂಗಳೂರಿನ ಕಂಕನಾಡಿ ಬಳಿ ಸಾರ್ವಜನಿಕರಿಗೆ ಉದ್ದೇಶ ಪೂರ್ವಕವಾಗಿ ತೊಂದರೆ ನೀಡಲು ಮಸೀದಿಯ ಸಂಬAಧಪಟ್ಟವರಿಗೆ ಈಗಾಗಲೇ ತಿಳಿಸಲಾಗಿದೆ. ಶುಕ್ರವಾರ ಮತ್ತೆ ಆ ಜಾಗದಲ್ಲಿ ನಮಾಜ್ ನಡೆಸಿದರೆ ಬಜರಂಗದಳ ಇದರ ವಿರುದ್ಧ ನೇರ ಕಾರ್ಯಾಚರಣೆ ನಡೆಸಿ ನಿಲ್ಲಿಸಲಾಗುದು ಎಂದು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ ಬಜರಂಗದಳ ಮುಖಂಡ ಶರಣ್ ಪಂಪವೆಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವಿಎಚ್.ಪಿ ಮುಖಂಡ ಶರಣ್ ಪಂಪ್‌ವೆಲ್ ‘ಸಾಮೂಹಿಕ ಹನುಮಾನ್ ಚಾಲೀಸಾ ಪಠಣೆ ಮಾಡುವುದಾಗಿ ಹೇಳಿದ್ದರು. ಈ ಹಿನ್ನಲೆ ಶರಣ್ ಪಂಪ್‌ವೆಲ್ ಮೇಲೆ ಮಂಗಳೂರು ನಗರ ಸೆನ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153(a), 506 ಅಡಿ ದೂರು ದಾಖಲಾಗಿದೆ. ಹಾಗೂ ರಸ್ತೆಯಲ್ಲಿ ನಮಾಜ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಕ್ಕೆ ಯಾವುದೇ ಅಡೆತಡೆ ಮಾಡುವ ಉದ್ದೇಶ ಇಲ್ಲದಿರುವುದರಿಂದ ಬಿ ರಿಪೋರ್ಟ್ ಸಲ್ಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.