Wednesday, December 3, 2025
Flats for sale
Homeಜಿಲ್ಲೆಮಂಗಳೂರು : ಸಹಿಷ್ಣುತೆ ಸಹಬಾಳ್ವೆ ಎಲ್ಲಾರಲ್ಲಿ ಬೆಳೆಯಲಿ,ಯಾವುದೇ ಧರ್ಮ ಪರಸ್ಪರ ಪ್ರೀತಿ ಮಾಡುತ್ತದೆಂದು ಹೇಳುತ್ತದೆ ಹೊರತು,ದ್ವೇಷ...

ಮಂಗಳೂರು : ಸಹಿಷ್ಣುತೆ ಸಹಬಾಳ್ವೆ ಎಲ್ಲಾರಲ್ಲಿ ಬೆಳೆಯಲಿ,ಯಾವುದೇ ಧರ್ಮ ಪರಸ್ಪರ ಪ್ರೀತಿ ಮಾಡುತ್ತದೆಂದು ಹೇಳುತ್ತದೆ ಹೊರತು,ದ್ವೇಷ ಮಾಡಲು ಹೇಳುವುದಿಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ.

ಮಂಗಳೂರು : ಶಿವಗಿರಿ ಮಠ ವರ್ಕಲ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಶತಮಾನದ ಮಹಾಪ್ರಸ್ಥಾನ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವ ಕಾರ್ಯಕ್ರಮ ಇಂದು ಕೋಣಾಜೆ ವಿಶ್ವವಿದ್ಯಾಲಯದಲ್ಲಿ ನಡೆಯಿತು.

ಈ ವೇಳೆ ಶಿವಗಿರಿ ಮಠಾಧಿಶರು ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಗಳು ರಾಜ್ಯದಲ್ಲಿ ಮಠ ಸ್ಥಾಪಿಸಲು ಜಾಗದ ಅನುಮೋದನೆಗೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದರು .ಬಳಿಕ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು. ದಕ್ಷಿಣ ಕನ್ನಡ ಅಥವಾ ಉಡುಪಿ ಜಿಲ್ಲೆಯಲ್ಲಿ ಶಿವಗಿರಿ ಮಠದ ಶಾಖೆ ನಿರ್ಮಾಣಕ್ಕೆ ಐದು ಎಕರೆ ಜಮೀನು ನೀಡಬೇಕೆಂದು ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿಯವರು ಜಾಗ ಪ್ರಸ್ತಾಪಿಸಿದ್ದು, ಸಂಬಂಧಪಟ್ಟವರು ಗುರುತಿಸಿದಲ್ಲಿ ಸರಕಾರದ ವತಿಯಿಂದ ಜಮೀನು ಮಂಜೂರು ಮಾಡಲಾಗುವುದೆಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ನಾರಾಯಣ ಗುರುಗಳು ಒಂದೇ ಜಾತಿ ಒಂದೇ ಮತ ಒಬ್ಬನೇ ದೇವರು ಎನ್ನುವ ತತ್ವವನ್ನು ಸಾರಿ ಅಂದಿನ ಕಾಲದಲ್ಲಿ ಜಾತ್ಯತೀತ ಜನತೆಯ ವಿರುದ್ಧ ಹೋರಾಡಿದರು.

ಕೇರಳವನ್ನು ವಿವೇಕಾನಂದರು ಹುಚ್ಚರ ಸಂತೆ ಎಂದು ಕರೆದಿದ್ದರು. ಅಲ್ಲಿನ ಅಸ್ಪೃಶ್ಯತೆ ಕಂಡು ಹುಚ್ಚರ ಸಂತೆ ಎಂದಿದ್ದರು. ಆದರೆ ನಾರಾಯಣ ಗುರುಗಳು ಅಲ್ಲಿನ ಅಸ್ಪೃಶ್ಯತೆಯನ್ನು ಹೋಗಲಾಡಿಸುವ ಮುಖೇನ ಆದರ್ಶ ಸಮಾಜವನ್ನು ಕಟ್ಟಿದ್ದರು. ನಾಯಿ ತಮ್ಮ ಜಾತಿ ಎಂದು ಬಿಟ್ಟು ಕೊಡುವುದಿಲ್ಲ. ಹಾಗೆಯೇ ಮನುಷ್ಯ ಮನುಷ್ಯನನ್ನು ಬಿಟ್ಟು ಕೊಡಬಾರದು. ಸಮಾಜದಲ್ಲಿ ಜಾತಿ ಬಿಕ್ಕಟ್ಟು ಚಲನೆಯಲ್ಲಿರುವ ವ್ಯವಸ್ಥೆ. ಅದು ಜಡತ್ವದಿಂದ ಕೂಡಿದೆ. ಈ ಜಡತ್ವವನ್ನು ಬಿಟ್ಟರೆ ಉತ್ತಮ ಸಮಾಜವನ್ನು ಕಟ್ಟ ಬಹುದು. ಸಮಾಜದಲ್ಲಿ ಸಾಮಾಜಿಕ ಸಮಾನತೆ ಮುಖ್ಯವಾಗಿದೆ. ಸರಕಾರ ಆ ನಿಟ್ಟಿನಲ್ಲಿ ಹೆಜ್ಜೆ ಈಗಾಗಲೇ ಇಟ್ಟಿದೆ. ಗ್ಯಾರಂಟಿ ಯೋಜನೆ ಸಮಾನತೆಗಾಗಿ ಜಾರಿಗೊಳಿಸಲಾಗಿದೆ ಎಂದರು.

ನಾರಾಯಣ ಗುರುಗಳು ಜಾತ್ಯಾತೀತರಾಗಿದ್ದು ಒಂದು ಜಾತಿ, ಒಂದು ಮತ, ಒಂದೇ ದೇವರೆಂಬ ಸಂದೇಶವನ್ನ ಜೀವನದುದ್ದಕ್ಕೂ ಸಾರಿದವರು. ಗುರುಗಳು ತಾವು ನಂಬಿರುವ ವಿಚಾರಗಳನ್ನ ಗಾಂಧಿ-ಗುರು ಸಂವಾದದಲ್ಲಿ ಗಾಂಧೀಜಿ ಮುಂದೆ ಮಂಡಿಸಿದ್ದರು. ಜಾತಿ ವ್ಯವಸ್ಥೆ ಎಂಬುದು ಈಗಲೂ ಸಮಾಜದಲ್ಲಿ ಚಾಲನೆಯಲ್ಲಿದೆ. ಈ ವ್ಯವಸ್ಥೆ ಬದಲಾವಣೆ ಆಗಬೇಕಾದರೆ ಮನುಷತ್ವ ಕೂಡಿದ ಸಮಾಜ ಕಟ್ಟುವ ಕೆಲಸ ಮಾಡಬೇಕಿದೆ. ಯಾವ ಧಾರ್ಮಿಕ ಕ್ಷೇತ್ರಕ್ಕೆ ಪ್ರವೇಶ ನಿರಾಕರಿಸುತ್ತಾರೋ ಅಂತಹ ಕ್ಷೇತ್ರಗಳಿಗೆ ಹೋಗದೆ, ನೀವೇ ದೇವಸ್ಥಾನ ಕಟ್ಟಿ ನೀವೇ ಪೂಜಾರಿ ಆಗಿಯೆಂದು ಸಮಾನತೆಯ ಸಂದೇಶ ಸಾರಿ ದೇಶದಲ್ಲೇ ಹೊಸ ಇತಿಹಾಸ ನಿರ್ಮಿಸಿದ ಮಹಾನ್ ವ್ಯಕ್ತಿ ನಾರಾಯಣ ಗುರುಗಳಾಗಿದ್ದಾರೆ.

ನಾರಾಯಣ ಗುರುಗಳು ಕೇರಳದಲ್ಲಿ ಶಿವನ ದೇವಾಲಯ ವನ್ನು ಸ್ಥಾಪನೆ ಮಾಡುತ್ತಾರೆ ಆವೇಳೆ ನಿಮ್ಮ ಶಿವನನ್ನು ಸ್ಥಾಪನೆ ಮಾಡಲಿಲ್ಲ ನಮ್ಮ ಶಿವನನ್ನು ಸ್ಥಾಪಿಸಿದ್ದೆನೆಂದು ಹೇಳಿದ್ದಾರೆ. ಸಾಮಾಜಿಕ ಅಸಮಾನತೆ ತೊಲಗಿಸಲು ರಾಜ್ಯ ಸರಕಾರವೂ ಕೂಡ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪಂಚ ಗ್ಯಾರಂಟಿ ಯೋಜನೆಗಳೂ ಅದರ ಭಾಗವಾಗಿದೆ. ಮಹಿಳೆಯರು ಸ್ವತಂತ್ರರಾಗಿ ಎಲ್ಲಾ ಸಂಕೋಲೆಗಳಿಂದ ಹೊರ ಬರಬೇಕೆಂದು ಯೋಜನೆಗಳನ್ನ ರೂಪಿಸಲಾಗಿದೆ. ಗುರುಗಳ ಸಂದೇಶದಂತೆ ಶಿಕ್ಷಣದಿಂದ ಮಾತ್ರ ಎಲ್ಲಾ ಜಾತಿ ಪದ್ಧತಿ, ಅಸಮಾನತೆಯಿಂದ ವಿಮೋಚನೆ ಸಾಧ್ಯ ಗುಲಾಮಗಿರಿಯನ್ನ ಕಿತ್ತೆಸೆಯದೆ ಸ್ವಾಭಿಮಾನ ಮೈಗೂಡಿಸಲು ಸಾಧ್ಯವಿಲ್ಲ. ನಮ್ಮೊಳಗೆ ಸ್ವಾತಂತ್ರ್ಯ ಸಮಾನತೆ, ಭಾತೃತ್ವ ಬೆಳೆಸಬೇಕಿದ್ದು, ಇದನ್ನೇ ಗಾಂಧೀಜಿಯವರು ಸಹ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರತಿಪಾದಿಸಿದ್ದರು. 2016ರಲ್ಲಿ ನಮ್ಮ ಸರಕಾರವೇ ನಾರಾಯಣ ಗುರು ಜಯಂತಿ ಆಚರಣೆಗೆ ಆದೇಶಿಸಿತ್ತು. ಎಲ್ಲಾ ಧರ್ಮಗಳು ಪರಸ್ಪರ ಪ್ರೀತಿಸಲು ಹೇಳಿವೆ ಹೊರತು ಧರ್ಮ, ಜಾತಿ ಹೆಸರಲ್ಲಿ ಸಮಾಜ ಒಡೆಯುವುದಕ್ಕೆ ಹೇಳಿಲ್ಲ ಎಂದರು.

ಸಹಿಷ್ಣುತೆ ಸಹಬಾಳ್ವೆ ಎಲ್ಲರಲ್ಲೂ ಬೆಳೆಯಲಿ,ಯಾವುದೇ ಧರ್ಮವಾಗಲಿ ಪರಸ್ಪರ ಪ್ರೀತಿಯಿಂದಿರಿ ಎಂದು ಹೇಳುತ್ತದೆ ಹೊರತು ದ್ವೇಷದಿಂದಿರಿ ಎಂದು ಹೇಳುವುದಿಲ್ಲ,.ಮಹಾತ್ಮ ಗಾಂಧಿಜಿಯವರಿಗೆ ಜಾತಿ ವ್ಯವಸ್ಥೆಯ ಬಗ್ಗೆ ಮನವರಿಕೆ ಮಾಡಿದ್ದೆ ನಾರಾಯಣ ಗುರುರವರು‌,ಈ ವ್ಯವಸ್ಥೆಯನ್ನು ಬದಲಾವಣೆ ಮಾಡಬೇಕು,ಇದರಿಂದ ಉತ್ತಮ ಸಮಾಜ ನಿರ್ಮಾಣ ಮಾಡಬೇಕೆಂದು ರವೀಂದ್ರನಾಥ ಠಾಗೋರ್ ರವರು ಹೇಳಿದ್ದರು,ನಾರಾಯಣ ಗುರುವಂತಹ ಶ್ರೇಷ್ಠ ಗುರುವಿಲ್ಲ,ಕೇರಳದಲ್ಲಿ ಜಾತ್ಯತೀತ ತೆಯ ಹೋರಟದಲ್ಲಿ ಮುಂಚಿತದಲ್ಲಿ ಇದ್ದವರು ನಾರಾಯಣ ಗುರುಗಳು ಎಂದು ಹೇಳಿದರು.

ವೇದಿಕೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಪ್ರಧಾನ ಸಂದೇಶ ಭಾಷಣ ಮಾಡಿದರು. ಶಿವಗಿರಿ ಮಠದ ಪೀಠಾಧಿಪತಿ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿ ಆಶೀರ್ವಚನ ನೀಡಿದರು.
ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಾಂಗ್ರೆಸ್ ಮುಖಂಡರಾದ ಜನಾರ್ಧನ ಪೂಜಾರಿ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಚಿವರಾದ ದಿನೇಶ್ ಗುಂಡೂರಾವ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್, ಲಕ್ಷ್ಮೀ ಹೆಬ್ಬಾಳರ್, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಹರೀಶ್ ಪೂಂಜ, ಅಶೋಕ್ ಕುಮಾ‌ರ್ ರೈ, ಭಾಗೀರಥಿ ಮುರುಳ್ಯ ರಾಜೇಶ್ ನಾಯ್ಕ ವಿಧಾನ ಪರಿಷತ್ ಸದಸ್ಯರಾದ ಬಿ.ಕೆ.ಹರಿಪ್ರಸಾದ್, ಐವನ್ ಡಿಸೋಜ, ಮಂಜುನಾಥ ಭಂಡಾರಿ, ಕಾರ್ಯಕ್ರಮ ಸಂಯೋಜಕರಾದ ಪಿ.ವಿ.ಮೋಹನ್, ರಕ್ಷಿತ್ ಶಿವರಾಮ್, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಲ್.ಧರ್ಮ,ಸದಾಶಿವ ಉಳ್ಳಾಲ್,ಪ್ರತಿಭ ಕುಳಾಯಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular