Thursday, March 12, 2026
Flats for sale
Homeಜಿಲ್ಲೆಮಂಗಳೂರು : ಸಸಿಹಿತ್ಲು ಬೀಚ್‌ನಲ್ಲಿ ವಿಶ್ವ ಮಟ್ಟದ ಸ್ಟಾಂಡ್ ಅಫ್ ಪೆಡಲ್ ಸರ್ಫಿಂಗ್ ಸ್ಪರ್ಧೆ.

ಮಂಗಳೂರು : ಸಸಿಹಿತ್ಲು ಬೀಚ್‌ನಲ್ಲಿ ವಿಶ್ವ ಮಟ್ಟದ ಸ್ಟಾಂಡ್ ಅಫ್ ಪೆಡಲ್ ಸರ್ಫಿಂಗ್ ಸ್ಪರ್ಧೆ.

ಮಂಗಳೂರು : ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಸಹಯೋಗದಲ್ಲಿ ಶುಕ್ರವಾರದಂದು ಸ್ಟ್ಯಾಂಡ್-ಅಪ್ ಪ್ಯಾಡ್ಲಿಂಗ್ ಚಾಂಪಿಯನ್‌ಶಿಪ್ ಕಾರ್ಯಕ್ರಮವನ್ನು ಮಂಗಳೂರಿನ ಹೊರವಲಯದ ಸಸಿಹಿತ್ಲು ಬೀಚ್‌ನಲ್ಲಿ ಉದ್ಘಾಟಿಸಲಾಯಿತು .

ಅಂತರಾಷ್ಟ್ರೀಯ ಸ್ಪರ್ಧೆಗಳನ್ನು ಕರಾವಳಿ ಪ್ರದೇಶದಲ್ಲಿ ಆಯೋಜಿಸುವ ಮೂಲಕ ವಿಶ್ವ ಭೂಪಟದಲ್ಲಿ ನಮ್ಮ ಪ್ರಾದೇಶಿಕ ಗೌರವವನ್ನು ಎತ್ತರಕ್ಕೇರಿಸುವ ಕಾರ್ಯ ಅಭಿನಂದನೀಯ ಎಂದು ರಾಜ್ಯ ವಿಧಾನ ಸಭೆಯ ಸ್ಪಿಕರ್ ಯುಟಿ ಖಾದರ್ ಹೇಳಿದರು. ಕರ್ನಾಟಕ ಸರಕಾರದ ಪ್ರವಾಸೋದ್ಯಮ ಇಲಾಖೆ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಸಹಯೋಗದಲ್ಲಿ ಅಸೋಸಿಯೇಶನ್ ಆಪ್ ಪೆಡಲ್ ಸರ್ಫ್ ಪ್ರೊಫೆಷನಲ್ಸ್ ಎಪಿಪಿ ವಲ್ಡ್ ವತಿಯಿಂದ ದೇಶದಲ್ಲಿ ಮೊತ್ತಮೊದಲನೇ ಬಾರಿಗೆ ವಿಶ್ವ ಮಟ್ಟದ ಸ್ಟಾಂಡ್ ಅಫ್ ಪೆಡಲ್ ಸರ್ಫಿಂಗ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಪರಿಸರ ರಮ್ಯ ಪ್ರದೇಶವಾದ ಮುಂಡಾ ಬೀಚ್ ಕಡಲ್ಕೊರೆತದ ಅಪಾಯದಲ್ಲಿದೆ ಈ ಬಗ್ಗೆ ಸರಕಾರ ತಕ್ಷಣ ಕ್ರಮಕೈಗೊಳ್ಳಬೇಕು ಎಂದರು. ಅಸೋಸಿಯೇಶನ್ ಆಪ್ ಪೆಡಲ್ ಸರ್ಫ್ ಪ್ರಫೆಷನಲ್ಸ್ ಎಪಿಪಿ ವಲ್ಡ್ ಸಿಇಒ ಟೆಕ್ಸ್ಟೆಂಡ್ ಬೋಕ್ಸ್ವೆಲ್ ,ಉದ್ಯಮಿ ಜಿಎಂಆರ್ ಗ್ರೂಪ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ ,ಶಾಸಕ ಉಮಾನಾಥ ಎ. ಕೋಟ್ಯಾನ್, ರಾಜ್ಯ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೆಪಿಸಿಸಿ ಕೋ ಆರ್ಡಿನೇಟರ್ ಎಚ್. ವಸಂತ ಬೆರ್ನಾಡ್, ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಪರ್ಿಂಗ್ ಸ್ವಾಮಿ ಫೌಂಡೇಶನ್ ಅಧ್ಯಕ್ಷ ಧನಂಜಯ ಶೆಟ್ಟಿ, ನಿರ್ದೇಶಕ ಗೌರವ್ ಹೆಗ್ಡೆ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಾಣಿಕ್ಯ, ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು. ಗೌರವ್ ಹೆಗ್ಡೆ ಸ್ವಾಗತಿಸಿದರು, ಅನುರಾಗ್ ನಿರೂಪಿಸಿದರು.

ಬಳಿಕ ಸ್ಟ್ಯಾಂಡ್ ಆಫ್ ಪ್ಯಾಡ್ಲಿಂಗ್ ಸ್ಪರ್ಧೆಗಳು ಆರಂಭಗೊಂಡಿದ್ದು ಮಾ8, 9, 10 ರಂದು ನಡೆಯುವ ಸ್ಪರ್ಧೆಯಲ್ಲಿ ಸುಮಾರು 13 ದೇಶದ 30 ಕ್ಕೂ ಹೆಚ್ಚು ಕ್ರೀಡಾಡುಗಳು ಭಾಗವಹಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular