ಮಂಗಳೂರು : ದಿನಾಂಕ 09ರಂದು ರಾತ್ರಿ ಸುಮಾರು 8-00 ಗಂಟೆಗೆ ಮಾಜಿ ಶಾಸಕರಾದ ಮೊಯಿದ್ದೀನ್ ಬಾವಾ ರವರು ಮತ್ತು ಅವರ ಇಬ್ಬರು ಸಹಚರರೊಂದಿಗೆ ಕಾಮಗಾರಿಯ ಬಿಲ್ಲನ್ನು ಮಂಜೂರು ಮಾಡುವ ವಿಷಯದ ಕುರಿತು ಎನ್.ಎಂ.ಪಿ.ಎ ಕಛೇರಿಯ ಡೆಪ್ಯೂಟಿ ಚೇರ್ಪರ್ಸನ್ ರವರ ಕಛೇರಿಗೆ ನುಗ್ಗಿ 15 ನಿಮಿಷ ಕಾಲ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದು ಅದಲ್ಲದೆ ಅವರನ್ನು ಕಛೇರಿಯಿಂದ ಹೊರಗೆ ಹೋಗಲು ಅವಕಾಶ ನೀಡದೇ, ಅವರನ್ನು ತಡೆದು ನಿಲ್ಲಿಸಿದ ಘಟನೆ ನಡೆದಿತ್ತು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳು ದೂರು ನೀಡಿದ್ದರು.
ಬಳಿಕ ಹಲವು ಚರ್ಚೆ ನಡೆದ ಬಳಿಕ ವಾದ-ವಿವಾದ ನಡೆದಿದ್ದು ನಂತರ ಅವರು ಹೊರಗೆ ಬಂದಾಗಲೂ ಹಿಂಬಾಲಿಸುತ್ತಾ ಬೆದರಿಕೆ ಹಾಕಿ ಕಿರಿಚುತ್ತಾ ಬಂದಿದ್ದಾರೆಂದು ತಿಳಿದಿದೆ. ಕಾರಿನಲ್ಲಿ ಬೇರೆ ಕರ್ತವ್ಯಕ್ಕೆ ಹೋಗುತ್ತಿರುವ ಸಂಧರ್ಭದಲ್ಲೂ ಕಾರನ್ನು ಸಹ ತಡೆದು ನಿಲ್ಲಿಸಿ, ವಾದ-ವಿವಾದ ನಡೆಸಿರುವ ಬಗ್ಗೆ Secretary, NMPA, Panambur, Mangaluru ರವರು ದಿನಾಂಕ 10-06-2025 ರಂದು ಸಂಜೆ ದೂರು ನೀಡಿದ್ದಾರೆ, ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 60/2025 ಕಲಂ 224,221,132, 126, 127, 226 ಬಿ.ಎನ್.ಎಸ್ ರಂತೆ ಮೂವರ ಮೇಲೆ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆ ನಡೆಯುತ್ತಿದೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.