Wednesday, November 5, 2025
Flats for sale
Homeಜಿಲ್ಲೆಮಂಗಳೂರು ; ಸಮಾಜ ಸೇವಾ ಸಂಘ ದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ,ಮುಚ್ಚಿ ಹಾಕಲು ಮತ್ತೊಂದು ಗೋಲ್ಮಾಲ್,ಬಂಧನದ...

ಮಂಗಳೂರು ; ಸಮಾಜ ಸೇವಾ ಸಂಘ ದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ,ಮುಚ್ಚಿ ಹಾಕಲು ಮತ್ತೊಂದು ಗೋಲ್ಮಾಲ್,ಬಂಧನದ ಬೀತಿಯಲ್ಲಿ ಹಲವು ಖದೀಮರು…!

ಮಂಗಳೂರು ; 1981 ರಲ್ಲಿ ಅಮ್ಮೆಂಬಾಳ ಬಾಳಪ್ಪ ಅವರಿಂದ ಆರಂಭಗೊಂಡ ಸಮಾಜ ಸೇವಾ ಸಹಕಾರಿ ಸಂಘ ಇಂದು ವಾರ್ಷಿಕ ಕೋಟ್ಯಾಂತರ ರೂಪಾಯಿ ಲಾಭದಲ್ಲಿ ನಡಿತಾ ಇದೆ. ಆದ್ರೆ ಈಗ ಇದೇ ಸಹಕಾರಿ ಸಂಘದಲ್ಲಿ ಇದೀಗ ಕೋಟ್ಯಾಂತರ ರೂಪಾಯಿಯ ಅವ್ಯವಹಾರ ನಡೆದ ಬಗ್ಗೆ ಎಫ್ಐಆರ್ ದಾಖಲಾಗಿದೆ. ನಕಲಿ ಚಿನ್ನವನ್ನು ಅಡವಿಟ್ಟು ಬ್ಯಾಂಕ್ಗೆ ವಂಚಿಸಿದ ಆರೋಪದಲ್ಲಿ ಬ್ಯಾಂಕ್ ಸಿಬ್ಬಂದಿ ಹಾಗೂ ನಿರ್ದೇಶಕರು ಸೇರಿದಂತೆ 28 ಜನರ ವಿರುದ್ಧ ದೂರು ನೀಡಲಾಗಿದೆ.

ನಕಲಿ ಚಿನ್ನದ ಬಳೆ ಇಟ್ಟು 2 ಕೋಟಿಗೂ ಅಧಿಕ ಸಾಲ ನೀಡಿದ್ದು ಚಿನ್ನ ಅಸಲಿ ಎಂದು ಸಾಬೀತು ಮಾಡಿದ್ದ ಬ್ಯಾಂಕ್ ಸರಫ ಪ್ರಕರಣ ಮುಚ್ಚಿ ಹಾಕಲು ಮತ್ತೊಂದು ಗೋಲ್ಮಾಲ್ ನಡೆಯುತ್ತಿದೆ ಎಂಬ ಮಾಹಿತಿ ದೊರೆತಿದೆ.

ಲೋನ್ ಬೇಕಾದವರಿಗೆ ದಾಖಲೆಗಳ ಮೂಲಕ ಟಾರ್ಚರ್ ಕೊಡುವ ಈ ಸಂಘಸಂಸ್ಥೆಗಳು ಯಾವ ರೀತಿಯಲ್ಲಿ ಜನರನ್ನು ಮೋಸ ಮಾಡುವುದರಿಂದ ಗ್ರಾಹಕರು ದಂಗಾಗಿದ್ದಾರೆ.

ಸಹಕಾರಿ ಸಂಘದ ಬ್ಯಾಂಕ್ ಇರಲಿ ರಾಷ್ಟ್ರೀಕೃತ ಬ್ಯಾಂಕ್ ಇರಲಿ ಯಾವುದೇ ರೀತಿಯ ಸಾಲ ನೀಡಬೇಕು ಅಂದರೆ ಅದಕ್ಕೊಂದು ಮಾನದಂಡ ಅನುಸರಿಸುತ್ತದೆ. ಆದರೆ ಮಂಗಳೂರು ಪಡೀಲ್ನಲ್ಲಿರುವ ಈ ಸೇವಾ ಸಹಕಾರಿ ಸಂಘದಲ್ಲಿ ಮಾತ್ರ ಅದ್ಯಾವುದನ್ನೂ ಪಾಲಿಸದೆ ಒಂದೇ ವ್ಯಕ್ತಿಗೆ ಚಿನ್ನಾಭರಣದ ಈಡಿನ ಮೇಲೆ 2 ಕೋಟಿಗೂ ಅಧಿಕ ಸಾಲ ನೀಡಲಾಗಿದೆ. ಚಿನ್ನಾಭರಣದ ಮೇಲೆ ಇಷ್ಟೊಂದು ದೊಡ್ಡ ಪ್ರಮಾಣದ ಸಾಲ ನೀಡಿದ್ರೂ ಒಕೆ ಅನ್ನಬಹುದಾಗಿದ್ರೂ ನೀಡಿದ ಚಿನ್ನಾಭರವೇ ನಕಲಿ ಅನ್ನೋದು ಇಲ್ಲಿ ಶಾಕಿಂಗ್ ವಿಚಾರ. ಪುತ್ತೂರು ತಾಲೂಕಿನ ಈಶ್ವರ ಮಂಗಲದ ಅಬೂಬಕರ್ ಸಿದ್ದೀಕ್ ಎಂಬಾತ ಈ ಬ್ಯಾಂಕ್ನಲ್ಲಿ ಒಂದೇ ತರನಾದ 500 ಚಿನ್ನದ ಬಳೆಗಳನ್ನು ಇಟ್ಟು 2 ಕೋಟಿ 11 ಲಕ್ಷದ 80 ಸಾವಿರ ಸಾಲ ಪಡೆದಿದ್ದಾನೆ. ಆತ ಇಟ್ಟ ಆ ಎಲ್ಲಾ ಬಳೆಗಳನ್ನೂ ಪರಿಶೀಲಿಸಿದ ಬ್ಯಾಂಕ್ ಸರಫ ವಿವೇಕ್ ಆಚಾರ್ಯ ಚಿನ್ನ ಅಸಲಿ ಎಂಬ ಸರ್ಟಿಫಿಕೇಟ್ ಕೂಡಾ ನೀಡಿದ್ದಾನೆ. ಆದ್ರೆ ಯಾವಾಗ ಈ ಸಹಕಾರಿ ಬ್ಯಾಂಕ್ ವ್ಯವಸ್ಥಾಪಕರು ಬದಲಾಗಿದ್ದಾರೋ ಆವಾಗ ಅಸಲಿ ಸತ್ಯ ಹೊರಬಿದ್ದಿದೆ.

ಕಾನೂನು ಪ್ರಕಾರವಾಗಿ ದಿನವೊಂದಕ್ಕೆ 20 ಲಕ್ಷ ಸಾಲ ನೀಡಬಹುದಾಗಿದ್ರೂ ಇಲ್ಲಿ ಈ ಕಾನೂನು ಉಲ್ಲಂಘನೆ ಮಾಡಲಾಗಿದೆ. ಇನ್ನು ಚಿನ್ನಾಭರಣ ನಕಲಿ ಅಂತ ಗೊತ್ತಿದ್ದರೂ ಬ್ಯಾಂಕ್ ಸರಫ ಅಸಲಿ ಅಂತ ಸರ್ಟಿಫಿಕೇಟ್ ನೀಡಿದ್ದಾನೆ. ಇದೆಲ್ಲವೂ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಆಡಳಿತ ಮಂಡಳಿ ನಿರ್ದೇಶಕರ ಸಹಕಾರದಿಂದ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಹೊಸದಾಗಿ ಬಂದ ವ್ಯವಸ್ಥಾಪಕರು ಚಿನ್ನದ ಸಾಲ ಮರುಪಾವತಿ ಆಗದ ಹಿನ್ನಲೆಯಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, ತಕ್ಷಣ ಸಂಬಂಧಿಸಿದ ಎಲ್ಲರಿಗೂ ದೂರು ನೀಡಿದ್ದಾರೆ. ಆದ್ರೆ ಆಡಳಿತ ಮಂಡಳಿಯ ಪ್ರಮುಖರು ತರಾತುರಿಯಲ್ಲಿ ಸಾಲ ಮರುಪಾವತಿಗಾಗಿ ನಕಲಿ ಚಿನ್ನದ ಏಲಂ ಮಾಡಿದ್ದು, ಅದನ್ನು ಬ್ಯಾಂಕ್ ಸರಫ ವಿವೇಕ್ ಆಚಾರ್ಯನೇ ಬಿಡ್ನಲ್ಲಿ ಖರೀದಿ ಮಾಡಿದ್ದಾನೆ. ಹಾಗಂತ ಇದಕ್ಕೂ ಬ್ಯಾಂಕ್ನಿಂದ 1 ಕೋಟಿಯಷ್ಟು ಸಾಲವನ್ನು ವಿವೇಕ್ ಆಚಾರ್ಯನಿಗೆ ನೀಡಲಾಗಿದೆ. ಜೊತೆಗೆ ಬ್ಯಾಂಕ್ ಸಿಬ್ಬಂದಿಯ ಸಂಬಂದಿಕರ ಹೆಸರಿನಲ್ಲೂ ಬ್ಯಾಂಕ್ನಲ್ಲಿ ಸಾಲ ಪಡೆಯಲಾಗಿದೆ ಅಂತ ಆರೋಪ ಕೇಳಿ ಬಂದಿದೆ.

ಪಡೀಲ್ ಶಾಖೆಯಲ್ಲಿ ನಡೆದಿರುವ ಈ ಹಗರಣದಲ್ಲಿ ಹಾಲಿ ಅಧ್ಯಕ್ಷರು, ಉಪಾಧ್ಯಕ್ಷರು ನಿರ್ದೇಶಕರು ಹಾಗೂ ಬ್ಯಾಂಕ್ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಶಾಮೀಲಾಗಿದ್ದಾರೆ ಅಂತ ಮಾಜಿ ನಿರ್ದೇಶಕರು ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಸದ್ಯ ಸರಫ ವಿವೇಕ್ ಆಚಾರ್ಯ ಅವರನ್ನು ಬಂಧಿಸಿದ್ದಾರೆ. ಸಾಲ ಪಡೆದಿರುವ ಅಬೂಬಕರ್ ಸಿದ್ದಿಕ್ ತಲೆ ಮರೆಸಿಕೊಂಡಿದ್ದು, ಬ್ಯಾಂಕ್ನ 14 ಜನರ ವಿರುದ್ದ ಪ್ರಕರಣ ದಾಖಲಿಸಿ ತನಿಕೆ ನಡೆಸಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.

ವಿಶೇಷ ಅಂದರೆ ಇಷ್ಟೊಂದು ದೊಡ್ಡ ಹಗರಣ ನಡೆದರೂ ವಾರ್ಷಿಕ ಲೆಕ್ಕ ಪರಿಶೋದಕರ ವರದಿಯಲ್ಲಿ ಈ ಬಗ್ಗೆ ಉಲ್ಲೇಖವೇ ಆಗಿಲ್ಲ. ಹೀಗಾಗಿ ಬ್ಯಾಂಕ್ ಅವ್ಯಾವಹಾರದಲ್ಲಿ ದೊಡ್ಡದೊಂದು ಷಡ್ಯಂತ್ರ ನಡೆದಿದ್ದು ಇದರ ಸಮಗ್ರ ತನಿಖೆಗೆ ಒತ್ತಾಯ ಕೇಳಿ ಬಂದಿದೆ. ಸಾರ್ವಜನಿಕರ ಹಣವನ್ನು ಲೂಟಿ ಹೊಡೆಯಲು ಆಡಳಿತ ಮಂಡಳಿಯೇ ದೊಡ್ಡದೊಂದು ಕುತಂತ್ರ ನಡೆಸಿದೆ ಎಂಬ ಅನುಮಾನ ಕೇಳಿ ಬಂದಿದೆ ಎಂದು ಅನುಪಮ್ ಅಗರ್ವಾಲ್, ಪೊಲೀಸ್ ಅಯುಕ್ತರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular