ಮಂಗಳೂರು ; ಉಳ್ಳಾಲ ತಾಲೂಕು ಸೋಮೇಶ್ವರ ಪುರಸಭಾ ವ್ಯಾಪ್ತಿಯಲ್ಲಿರುವ ನಮ್ಮ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ 1982 ರಲ್ಲಿ ಸ್ಥಾಪನೆಗೊಂಡು, ಕಳೆದ 43 ವರಷಗಳಿಂದ ನಿರಂತರವಾಗಿ ಅನೇಕ ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಿಂದ ಸಾಮಾಜಿಕ ವಲಯದಲ್ಲಿ ಗುರುತಿಸಲ್ಪಟ್ಟ ಸಂಸ್ಥೆ, ನವರಾತ್ರಿ ಸಂದರ್ಭದಲ್ಲಿ ಶ್ರೀ ಶಾರದಾ ಮಹೋತ್ಸವವನ್ನು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದೆ. ಇದೀಗ ಶ್ರೀ ಶಾರದಾ ಸೇವಾ ಟ್ರಸ್ಟ್ ಆಗಿ ನೋಂದಾವಣೆಗೊಂಡು ಇನ್ನಷ್ಟು ಜನಪರ ಕೆಲಸಗಳ ಚಿಂತನೆಯಿಂದ ಕೈಗೊಂಡ ನೂತನ ಶ್ರೀ ಶಾರದಾ ಮಂದಿರ ಈಗಾಗಲೇ ಲೋಕಾರ್ಪಣೆಗೊಂಡಿದೆ ಎಂದು ರಾಜೇಶ್ ಕೆ.ಎಸ್ ರವರು ತಿಳಿಸಿದ್ದಾರೆ.
ನಮ್ಮ 44ನೇ ಶ್ರೀ ಶಾರದಾ ಮಹೋತ್ಸವವು ಈ ಬಾರಿಯ ನವರಾತ್ರಿಯಲ್ಲಿ ಸಪ್ಟೆಂಬರ್ 29-09-2025 ರಿಂದ ಅಕ್ಟೋಬರ್ 01-10-2025 ರವರೆಗೆ ಜರಗಲಿದೆ. ತಾ. 29-09-2025 ರಂದು ಬೆಳಿಗ್ಗೆ ಸೋಮೇಶ್ವರ ಮಧೈಶ್ ಭಟ್ ಅವರ ಪೌರೋಹಿತ್ಯದಲ್ಲಿ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆಗೊಂಡು ಉತ್ಸವ ದಿನಗಳಲ್ಲಿ ಲಲಿತಸಹಸ್ರನಾಮ, ಭಜನೆ, ಮಹಾಪೂಜೆ, ರಂಗಪೂಜೆ, ಅಕ್ಷರಾಭ್ಯಾಸ ಹಾಗೂ ಪ್ರತಿದಿನ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿರುವುದು. ತಾರೀಕು 29 ರಂದು ಬೆಳಿಗ್ಗೆ 11.00 ಕ್ಕೆ ಧಾರ್ಮಿಕ ಸಭಾ ಕಲಾಪವನ್ನು ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳು ಮಂಗಳೂರು ಇದರ ಸ್ಥಾಪಕಾಧ್ಯಕ್ಷರು ಶ್ರೀ ಗಣೇಶ್ ಎಸ್. ರಾವ್ ರವರು ಉದ್ಘಾಟಿಸಲಿರುವರು ಎಸ್ .ಎಲ್ ಶೇಟ್ ಡೈಮೆಂಡ್ ಹೌಸ್. ಲೇಡಿಹಿಲ್, ಮಂಗಳೂರು ಇದರ ಮಾಲಕರು ಶ್ರೀ ಎಂ ರವೀಂದ್ರ ಶೇಟ್ ರವರು ಅಧ್ಯಕ್ಷತೆ ವಹಿಸಲಿರುವರು. ಸಾಮಾಜಿಕ ಹಾಗೂ ಧಾರ್ಮಿಕ ಮುಖಂಡರು ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ಧಾರ್ಮಿಕ ಉಪನ್ಯಾಸ ಗೈಯಲ್ಲಿದ್ದಾರೆ. ಘನ ಉಪಸ್ಥಿತಿಯಲ್ಲಿ ಶ್ರೀ ಕೃಷ್ಣ ಶೆಟ್ಟಿ ಕೆಳಗಿನ ಗುತ್ತು ಕೋಟೆಕಾರು, ಅಧ್ಯಕ್ಷರು ವೈವಾಸಾಯ ಸೇವಾ ಸಹಕಾರಿ ಬ್ಯಾಂಕ್ ಬೀರಿ ಕೋಟೆಕಾರು, ಮುಖ್ಯ ಅತಿಥಿಗಳಾಗಿ ಜಿಲ್ಲಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ ಶ್ರೀ ಸತೀಶ್ ಕುಂಪಲ, ಶ್ರೀ ಸೌಂದರ್ಯ ರಮೇಶ್, ಸೌಂದರ್ಯ ಸಮೂಹ ಸಂಸ್ಥೆ, ಮಾಜಿ ಉಪಾಧ್ಯಕ್ಷರು ನಗರ ಸಭೆ ದಾಸರಹಳ್ಳಿ ಬೆಂಗಳೂರು, ಡಿಂಕಿ ಡೈನ್ ಕದ್ರಿ ಪಾರ್ಕ್ ಮಂಗಳೂರು ಇದರ ಮಾಲಕರಾದ ಶ್ರೀ ಸ್ವರ್ಣ ಸುಂದರ್, ಕಾವು ಪಂಚಲಿಂಗೇಶ್ವರ ದೇವಸ್ಥಾನ ಬಜಾಲ್ ಇದರ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ರಾಮಚಂದ್ರ ಆಳ್ವ, ವೀಶ್ವೇಶ್ವರ ರೋಡ್ ಲೈನ್ಸ್ ಚಿತ್ರದುರ್ಗ ಇದರ ಮಾಲಕರಾದ ಶ್ರೀ ಪ್ರವೀಣ್ ಸುವರ್ಣ ಬಗಂಬಿಲ, ನಿವೃತ್ತ ಅಧ್ಯಾಪಕರಾದ ಶ್ರೀ ಕೆ.ಆರ್. ಚಂದ್ರ ( ಕೆ. ರಾಮಚಂದ್ರ ಶೆಟ್ಟಿ ) ಸೋಮೇಶ್ವರ, ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚ ಮಂಗಳೂರು ಮಂಡಲದ ಅಧ್ಯಕ್ಷರಾದ ಶ್ರೀಮತಿ ಮಾಧವಿ ಉಳ್ಳಾಲ್, ಕೋಟೆಕಾರ್ ಪಟ್ಟಣ ಪಂಚಾಯತಿನ ಕೌನ್ಸಿಲರ್ ರಾಘವ ಗಟ್ಟಿ, ಭಾಗವಹಿಸಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2025 ವಿಜೇತೆ ಸಿಂಧೂರ ರಾಜ, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 3ನೇ ಶ್ರೇಣಿ ಗಳಿಸಿರುವ ಹಿಮಾಂಶು ಕೊಲ್ಯ, ಇವರನ್ನು ಅಭಿನಂದಿಸಿ ಗೌರವಿಸಲಾಗುವುದು, ಸೋಮೇಶ್ವರ ಪುರಸಭೆ ವ್ಯಾಪ್ತಿಯ ಶಾಲೆಗಳ, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದರು.
ಹಿರಿಯ ಸಾಧಕರಾಗಿರುವ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಇದರ ಸ್ಥಾಪಕ ಸದಸ್ಯರಾದ ಶ್ರೀಯುತ ರಾಮಚಂದ್ರ ಕುಂಪಲ, ಶ್ರೀ ಶಾರದಾ ಸೇವಾ ಟ್ರಸ್ಟ್ ಇದರ ಮಾಜಿ ಅಧ್ಯಕ್ಷರಾದ ಶ್ರೀಯುತ ಪ್ರಕಾಶ್. ಎಚ್. ಭಜಕರು ಆಗಿರುವ ಶ್ರೀಯುತ ರಮೇಶ್ ಎ. ಕೊಟ್ಟಾರಿ ಚೆಂಬುಗುಡ್ಡೆ, ಇವರುಗಳನ್ನು ಸಮಿತಿಯ ವತಿಯಿಂದ ಸನ್ಮಾನಿಸಲಾಗುವುದು ಎಂದರು.
ತಾರೀಕು 29-09-2025 ರಂದು ರಾತ್ರಿ 7.00 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನೆ, ಶ್ರೀ ಶಾರದಾ ಮಹಿಳಾ ಮಂಡಳಿ ಕೊಲ್ಯ ಹಾಗೂ ಪರಿಸರದ ಪ್ರತಿಭಾ ತಂಡಗಳಿಂದ (ಏಕವ್ಯಕ್ತಿ / ಸಮೂಹ) ಶಾಸ್ತ್ರೀಯ ದೇಶಭಕ್ತಿ ಹಾಗೂ ಜಾನಪದ ‘ನೃತ್ಯ ವೈಭವ’ ತಾರೀಕು 30-09-2025 ರಂದು ಮಂಗಳವಾರ ಬೆಳ್ಳಿಗ್ಗೆ 11.00 ರಿಂದ 12.30 ರವರೆಗೆ ಶ್ರೀ ಶಾರದಾ ಮಹಿಳಾ ಮಂಡಳಿ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ ‘ಏಕಾದಶಿ ಮಹಾತ್ಮ” ಕೃತಿ ನಿರ್ದೇಶನ:- ಡಾ ದಿನಕರ್ ಪಚ್ಚನಾಡಿ, ಹಿಮ್ಮೇಳ:- ತೋನ್ಸೆ ಪುಷ್ಕಳ ಕುಮಾರ್ ಬಳಗ, ರಾತ್ರಿ 9.00 ಕ್ಕೆ ಸನ್ನಿಧಿ ಕಲಾವಿದರು ಉಡುಪಿ ರವಿ ಕುಮಾರ್ ಕಡೆಕಾರ್ ರಚಿಸಿ ನಿರ್ದೇಶಿಸಿದ ಅಪ್ಪೆ ಮಂತ್ರದೇವತೆ ತುಳು ನಾಟಕ.
ಸಂಗೀತ:- ದಿನೇಶ್ ಎರ್ಮಾಳು, ಪ್ರಯೋಜಕರು:- ಆದರ್ಶ ಮಿತ್ರ ಮಂಡಳಿ ಕೊಲ್ಯ,
ತಾರೀಕು 01-10-2025 ರಂದು ಸಂಜೆ 5.30 ಕ್ಕೆ ಶ್ರೀ ಶಾರದಾ ಮಾತೆಗೆ ಮಂಗಳ ಪೂಜೆಯ ಬಳಿಕ ಹುಲಿವೇಷ, ವಿವಿಧ ಸ್ತಬ್ಧ ಚಿತ್ರಗಳ ಪ್ರದರ್ಶನ ವೈಭವದೊಂದಿಗೆ ಶೋಭಾಯಾತ್ರೆ ಹೊರಟು ಸೋಮೇಶ್ವರ ಕಡಲ ಕಿನಾರೆಯಲ್ಲಿ ಜಲಸ್ತಂಭನಗೊಳಿಸಲಾಗುವುದು. ಆಸ್ತಿಕ ಭಾಂಧವರು ಮೂರು ದಿನಗಳಲ್ಲಿ ನಡೆಯುವ ಎಲ್ಲಾ ಕರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಶಾರದಾ ಮಾತೆಯ ಕೃಪೆಗೆ ಪಾತ್ರರಾಗಬೇಕಾಗಿ ಸಮಿತಿಯ ವತಿಯಿಂದ ಈ ಮೂಲಕ ವಿನಂತಿಸಲಾಗಿದೆ ಎಂದರು.
ನಮ್ಮ ನೂತನ ಶಾರದಾ ಮಂದಿರ ವರ್ಧಂತ್ಯುತ್ಸವದ ಪ್ರಯುಕ್ತ ತಾರೀಕು 07-10-2025 ರಂದು ಮಂಗಳವಾರ ಬೆಳಗ್ಗೆ ಸೋರ್ಯೋದಯದಿಂದ ಸಂಜೆ ಸೂರ್ಯಸ್ತಮಾನದವರೆಗೆ ಪರಿಸರದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಸಂಜೆ ಮಹಾ ಪೂಜೆಯ ನಂತರ 7.00 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ ಕರ್ನಾಟಕ ಕಲಾಶ್ರೀ ಗುರು ರಾಜಶ್ರೀ ಉಳ್ಳಾಲರವರ ಶಿಷ್ಯ ವೃಂದದವರಿಂದ ನೃತ್ಯ ಕಾರ್ಯಕ್ರಮ (ನಾಟ್ಯನಕೇತನ, ಕೊಲ್ಯ) ನಡೆಯಲಿದೆ ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗಣೇಶ್ ಕೊಲ್ಯ,ಉಮೇಶ್ ಕುಲಾಲ್,ಮೋಹನ್ ಶೆಟ್ಟಿ,ಹಾಗೂ ಲಿಂಗಪ್ಪ ಪೂಜಾರಿವರು ತಿಳಿಸಿದ್ದಾರೆ.


