Sunday, March 15, 2026
Flats for sale
Homeಜಿಲ್ಲೆಮಂಗಳೂರು ; ಸಂವಿಧಾನದ 75ನೇ ವರ್ಷಾಚರಣೆ ಡಿ.21ರಂದು ಸಂವಿಧಾನ ಸಮ್ಮಾನ ಕಾರ್ಯಕ್ರಮ..!

ಮಂಗಳೂರು ; ಸಂವಿಧಾನದ 75ನೇ ವರ್ಷಾಚರಣೆ ಡಿ.21ರಂದು ಸಂವಿಧಾನ ಸಮ್ಮಾನ ಕಾರ್ಯಕ್ರಮ..!

ಮಂಗಳೂರು : 1946ರಲ್ಲಿ ರಚಣೆಯಾದ ಸಂವಿಧಾನ ರಚನಾ ಸಭೆಯು ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ಸಂವಿಧಾನದ ಕರಡು ರಚನೆಗೆ ಸಮಿತಿ ರಚಿಸಿತ್ತು. ನವೆಂಬರ್ 1949ರಂದು ಸಂವಿಧಾನದ ಕರಡನ್ನು ರಚನಾ ಸಭೆಯ ಅಧ್ಯಕ್ಷ ಬಾಬು ರಾಜೇಂದ್ರ ಪ್ರಸಾದ್ ಅವರಿಗೆ ಅರ್ಪಿಸುತ್ತಾರೆ. ಬಳಿಕ ಜನವರಿ 26 1950ರಂದು ಭಾರತದ ಅಧಿಕೃತ ಸಂವಿಧಾನವಾಗಿ ಘೋಷಿಸಲ್ಪಡುತ್ತದೆ. ಈ ನಿಟ್ಟಿನಲ್ಲಿ ಸಂವಿಧಾನಕ್ಕೆ 75 ವರ್ಷ ಪೂರ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಮೃತ ಮಹೋತ್ಸವ ಆಚರಣೆ ಮತ್ತು ಸಂವಿಧಾನ ಜಾಗೃತಿಗಾಗಿ ಸಿಟಿಜನ್ಸ್ ಫಾರ್ ಸೋಷಿಯಲ್ ಜಸ್ಟೀಸ್ ಸಂಘಟನೆಯು 26 ನವೆಂಬರ್ 2024 ರಿಂದ ಜನವರಿ 26, 2025ರವರೆಗೆ ಸಂವಿಧಾನ ಸನ್ಮಾನ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಸಂವಿಧಾನ ಸಮ್ಮಾನ ಸಮಿತಿಯ ಜಿಲ್ಲಾ ಸಂಚಾಲಕ ಪ್ರೇಮಾನಂದ ಶೆಟ್ಟಿ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಡಿ.21ರಂದು ಮಂಗಳೂರು ಪುರಭವನದಲ್ಲಿ ಸಂವಿಧಾನ ಸಮ್ಮಾನ ಹಾಗೂ ಸಂವಿಧಾನ ಬದಲಾಯಿಸಿದ್ದು ಯಾರು ಪುಸ್ತಕ ಲೋಕಾರ್ಪಣೆ ನಡೆಯಲಿದೆ ಎಂದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ವಿಭಾಗ ಮುಖ್ಯಸ್ಥರಾದ ಡಾ. ಹೃಷಿಕೇಷ್ ರವರು ವಹಿಸಲಿದ್ದು ,ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾಗಿರುವ ಬಿ.ಎಲ್.ಸಂತೋಷ್ ರವರು ಉದ್ಘಾಟಿಸಿ ದಿಕ್ಸೂಚಿ ಬಾಷಣ ಮಾಡಲಿದ್ದು ಕುಡುಚಿಯ ಮಾಜಿ ಶಾಸಕರು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ರವರು ಉಪಸ್ಥಿತರಿದ್ದರುತ್ತಾರೆಂದು ತಿಳಿಸಿದ್ದಾರೆ.

ಸಂಘಟನೆ ಪ್ರಮುಖರಾದ ವಿಕಾಸ್ ಪುತ್ತೂರು, ಸಹಸಂಚಾಲಕರು ವಿನಯ್ ನೇತ್ರ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular