ಬಂಟ್ವಾಳ ; ವಾರ್ಷಿಕ ನೇಮೊತ್ಸವದ ಸಮಯದಲ್ಲಿ ಗ್ರಾಮದ ಜನರಿಂದ ಪ್ರಭಾವಿಗಳ ವಿರುದ್ಧ ಅಸಮಾಧಾನ ಸ್ಫೋಟ ಘಟನೆ ಬಂಟ್ವಾಳದ ಶಂಭೂರಿನಲ್ಲಿ ನಡೆದಿದೆ.
ಬಂಟ್ವಾಳ ತಾಲೂಕಿನ ಶಂಭೂರು ಗ್ರಾಮದಲ್ಲಿ ಜನರು ಆರಾಧನೆ ಮಾಡುತ್ತಿದ್ದ ದೈವಗಳ ನೇಮವೊಂದಕ್ಕೆ ಅಡ್ಡಿ ಪಡಿಸಲಾದ ಘಟನೆ ನಡೆದಿದೆ. ದೈವದ ನೇಮ ಸ್ಥಗಿತಗೊಳ್ಳಲು ಭಂಡಾರದ ಮನೆಯವರು ಭಂಡಾರ ನೀಡದೇ ಇರುವುದು ಕಾರಣ ಎಂಬ ಆರೋಪ ಕೇಳಿ ಬಂದಿದ್ದು ಜೊತೆಗೆ ಇದರಲ್ಲಿ ಪ್ರಭಾವಿ ರಾಜಕಾರಣಿಗಳು ಕೈ ಜೋಡಿಸಿ ನೇಮ ನಿಂತು ಹೋಗಿ ಸ್ಥಳೀಯರು ಕಣ್ಣೀರು ಹಾಕಿ ಈಡಿ ಶಾಪ ಹಾಕಿದ ಹೃದಯ ವಿದ್ರಾಹಕ ಘಟನೆ ನಡೆದಿದೆ. ಈ ಬಗ್ಗೆ ದೈವಸ್ಥಾನದ ವ್ಯವಸ್ಥಾಪನ ಸಮಿತಿಯವರು ಆರೋಪಿಸಿದ್ದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದು ಧಾರ್ಮಿಕ ದತ್ತಿ ಇಲಾಖೆಯ ಅದೀನದಲ್ಲಿ ಇರುವ ದೈವಸ್ಥಾನವಾಗಿದ್ದು, ಇದಕ್ಕೆ ವ್ಯವಸ್ಥಾಪನ ಸಮಿತಿ ಕೂಡಾ ಇದೆ. ವಾಡಿಕೆಯಂತೆ ಭಂಡಾರದ ಮನೆಯಿಂದ ಭಂಡಾರ ತಂದು ದೈವಸ್ಥಾನದಲ್ಲಿ ದೈವಗಳ ನೇಮ ನಡೆಯಬೇಕಿತ್ತು. ಆದ್ರೆ ಒಂದನೇ ಮನೆತನವಾದ ನಿರಂತಬೆಟ್ಟು ಕುಟುಂಬಸ್ಥರು ದೈವದ ಭಂಡಾರ ನೀಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಎಂಡೋಮೆಂಡ್ ಎಸಿ , ಬಂಟ್ವಾಳ ತಾಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯನ್ನು ಬಳಸಿಕೊಂಡಿದ್ದಾಗಿ ವ್ಯವಸ್ಥಾನ ಸಮಿತಿಯವರು ಆರೋಪಿಸಿದ್ದಾರೆ.
2008 ರಲ್ಲಿ ದೈವಸ್ಥಾನವನ್ನು ಊರವರ ಸಹಕಾರದಲ್ಲಿ ನಿರ್ಮಾಣ ಮಾಡಲಾಗಿದ್ದು, ಇದರ ಜೀರ್ಣೋದ್ಧಾರ ಕಾರ್ಯ ದೀಕ್ಷೆಗೂ ಮೊದಲ ಪೂರ್ವಾಶ್ರಮದ ಕನ್ಯಾಡಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ನಡೆದಿತ್ತು. ಆದ್ರೆ ದೈವಸ್ಥಾನ ಜೀರ್ಣೋದ್ಧಾರ ನಡೆದ ಎರಡು ವರ್ಷಗಳ ಬಳಿಕ ನಿರಂತಬೆಟ್ಟು ಮನೆತನದವರು ದೈವಸ್ಥಾನವನ್ನು ತಮ್ಮದೆಂದು ಹೇಳಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಇಷ್ಟೇ ಅಲ್ಲದೆ ಇದೀಗ ತಮ್ಮ ಕ್ಷೇತ್ರದವರೇ ಅಲ್ಲದೆ ಇಬ್ಬರು ಶಾಸಕರು ಹಾಗೂ ಬಂಟ್ವಾಳದ ಮಾಜಿ ಶಾಸಕರು ಪ್ರಭಾವ ಬಳಸಿ ದೈವದ ನೇಮ ನಿಲ್ಲಿಸಿದಾಗಿ ಆರೋಪಿಸಿದ್ದಾರೆ.
ಜೊತೆಗೆ ಇಲ್ಲಿ ನಡೆದಿದ್ದ ಪ್ರಶ್ನಾ ಚಿಂತನೆಯ ವೇಳೆಯಲ್ಲಿ ಮಂಗಳೂರಿನ ಕೋಡಿಕಲ್ ಕಾರ್ಪೋರೇಟರ್ ಕಿರಣ್ ಕುಮಾರ್ ಅವರು ಗಲಾಟೆ ಮಾಡಿ ಅಡ್ಡಿ ಪಡಿಸಿದ್ದಾಗಿ ಆರೋಪಿಸಿದ್ದಾರೆ.ಒಟ್ಟಿನಲ್ಲಿ ತಳುನಾಡಿನ ದೈವರಾಧನೆಗೆ ಕಪಟ ರಾಜಕಾರಣಿಗಳು ಅಡ್ಡಿಪಡಿಸಿರುವುದು ಒಂದು ವಿಪರ್ಯಾಸವಾಗಿದೆ.