ಮಂಗಳೂರು : ಹಗಲು ರಾತ್ರಿಯೆನ್ನದೆ ದಿನದ 24 ಗಂಟೆ ಕೂಡಾ ಸದಾ ಅಲರ್ಟ್ ಆಗಿದ್ದು, ಕರ್ತವ್ಯವೇ ದೇವರು ಅಂದು ಕೊಂಡವರು. ತಮ್ಮ ವ್ಯಯಕ್ತಿಕ ಜೀವನಕ್ಕೆ ಹಾಗೂ ಕುಟುಂಬಕ್ಕೆ ಸಮಯ ಕೊಡಬೇಕು ಅಂದ್ರೆ ಸಮಯ ಸಿಗೋದು ಭಾರೀ ಅಪರೂಪ. ಅಂತಹ ಸಮಯವೊಂದು ಈ ಭಾನುವಾರ ಅವರಿಗೆ ಸಿಕ್ಕಿದ್ದು, ಅದನ್ನು ಸಾರ್ವಜನಿಕರ ಜತೆಯಲ್ಲಿ ಕುಟುಂಬ ಸಮೇತರಾಗಿ ಎಂಜಾಯ್ ಮಾಡಿದ್ದಾರೆ.

ಸಾರ್ವಜನಿಕರ ಜೊತೆ ಕುಟುಂಬ ಸಮೇತ ಆಟವಾಡಿದ್ದು ವೀಕೆಂಡ್ನ್ನು ಕೆಸರಿನಲ್ಲಿ ಕಳೆದು ಸಕತ್ ಮಜಾ ಉಡಾಯಿಸಿ ಭೇದಭಾವ ಇಲ್ಲದೆ ನಡೆಯಿತು ಕೆಸರುಡೊಂಜಿ ದಿನವನ್ನು ಆಚರಣೆ ಮಾಡಿದ್ದಾರೆ . ಹೀಗೆ ಮೈಯೆಲ್ಲಾ ಕೆಸರು ಮೆತ್ತಿಕೊಂಡಿರುವ ಇವರನ್ನು ಎಲ್ಲೋ ನೋಡಿದ್ದೇವೆ ಅನಿಸ್ತಾ ಇದ್ಯಾ..? ಹಾಗಿದ್ರೆ ನಿಮ್ಮ ಊಹೆ ನಿಜ.. ಇವರು ಪ್ರತಿನಿತ್ಯ ಖಾಕಿ ಬಣ್ಣದ ಡ್ರೆಸ್ನಲ್ಲಿ ಕಾಣಿಸೋ ನಮ್ಮ ಮಂಗಳೂರಿನ ಪೊಲೀಸರು ಅನ್ನೋದ್ರಲ್ಲಿ ಅನುಮಾನವೇ ಬೇಡ. ಹೀಗೇ ಕೆಸರಿನಲ್ಲಿ ಬಗೆಬಗೆಯ ಆಟವಾಡುತ್ತಾ.. ಉರ್ವ ಪೊಲೀಸ್ ಠಾಣೆಯ ಸಿಬಂದಿಗಳು ಕುಣಿದು ಕುಪ್ಪಳಿಸಿದ್ದಾರೆ.

ಯಸ್ ಈ ಬಾರಿ ನಿತ್ಯ ಹಗಲು ರಾತ್ರಿ ಎನ್ನದೆ ಕರ್ತವ್ಯದಲ್ಲಿ ನಿರತವಾಗಿರುವ ಪೊಲೀಸರು ಕೂಡಾ ಈ ಭಾನುವಾರ ಫುಲ್ ರಿಲ್ಯಾಕ್ಸ್ ಮೂಡಿಗೆ ಜಾರಿದ್ದಾರೆ. ಕುಟುಂಬ ಸಮೇತರಾಗಿ ಹಿರಿಯ ಕಿರಿಯ ಅಧಿಕಾರಿಗಳು ಭೇದಭಾವ ಇಲ್ಲದೆ ಕೆಸರಿನಲ್ಲಿ ಸಕತ್ ಎಂಜಾಯ್ ಮಾಡಿದ್ದಾರೆ. ಕೆಸರಿನಲ್ಲಿ ಹಗ್ಗ ಜಗ್ಗಾಟ, ನಿಂಬೆ ಹಣ್ಣಿನ ಓಟ, ರಿಲೇ ಓಟ, ಮೊಸರುಕುಡಿಕೆ , ಉಪ್ಪುಮುಡಿ ಹೀಗೆ ಹಲವಾರು ಆಟಗಳಲ್ಲಿ ಭಾಗವಹಿಸಿ ಖುಷಿ ಪಟ್ಟಿದ್ದಾರೆ. ಇನ್ನು ಯಾರಿಗೂ ನಾವೇನು ಕಮ್ಮಿ ಇಲ್ಲಾ ಅಂತ ಕೆಸರಿನಲ್ಲೇ ಸಾಂಗ್ಗೆ ಹೆಜ್ಜೆ ಹಾಕಿದ್ದಾರೆ.

ಮುಕ್ಕ ಚೆಕ್ ಪೋಸ್ಟ್ ಬಳಿಯ ಅಡ್ಕ ಮನೆ ಗದ್ದೆಯಲ್ಲಿ ಕೆಸರುದೊಂಜಿ ದಿನ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ಕೂಡಾ ಪೊಲೀಸರಿಗೆ ಪ್ರೋತ್ಸಾಹ ನೀಡಿದ್ದಾರೆ. ಸ್ಥಳೀಯರು ಕೂಡಾ ಕೆಸರಿಗೆ ಇಳಿದು ಕಲರ್ಫುಲ್ ನೃತ್ಯ ಮಾಡಿ ಪೊಲೀಸರನ್ನು ರಂಜಿಸಿದ್ದಾರೆ.

ಭಾನುವಾರ ನಡೆದಿರೋ ಕಾರಣ ಸಾಕಷ್ಟು ಸಂಖ್ಯೆಯಲ್ಲಿ ಯುವಕ ಯುವತಿಯರೂ ಮಕ್ಕಳು ಎನ್ನದೆ ಎಲ್ಲರೂ ಕೂಡಾ ಈ ಕೆಸರ್ಡೊಂಜಿ ದಿನದಲ್ಲಿ ಭಾಗವಹಿಸಿದ್ದಾರೆ. ಇದೇ ವೇಳೆ ಇತ್ತೀಚೆಗೆ ಚಡ್ಡಿಗ್ಯಾಂಗ್ನ ಮಟ್ಟ ಹಾಕಿದ ಇನ್ಸ್ಪೆಕ್ಟರ್ ಭಾರತಿ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗಿದೆ. ಉರ್ವಾ ಠಾಣಾ ವ್ಯಾಪ್ತಿಯಲ್ಲಿ ಜನರ ನಿದ್ದೆಗೆಡಿಸಿದ್ದ ಚಡ್ಡಿ ಗ್ಯಾಂಗ್ ಕೃತ್ಯ ನಡೆಸಿದ ಘಂಟೆಗಳ ಒಳಗಾಗಿ ಬಂಧಿಸಿದ ಇನ್ಸ್ಪೆಕ್ಟರ್ ಭಾರತಿ ಅವರ ಸಾಹಸ ಹಾಗೂ ಸಮಯ ಪ್ರಜ್ಞೆಯನ್ನು ಕೊಂಡಾಡಿದ್ದಾರೆ. ಇದೇ ವೇಳೆ ಹಿರಿಯ ಅಧಿಕಾರಿಗಳು ಕೂಡಾ ಈ ಕಾರ್ಯಕ್ರಮ ಆಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ತಮ್ಮ ಅನಿಸಿಕೆಯನ್ನು ಹೇಳಿದ ಎಸಿಪಿ, ಸಿಸಿಬಿ ಗೀತಾ ಕುಲಕರ್ಣಿ ಸಾಮಾನ್ಯವಾಗಿ ಇಂತಹ ಕಾರ್ಯಕ್ರಮಗಳು ಅಲ್ಲಲ್ಲಿ ಆಯೋಜನೆ ಆಗುತ್ತಿರುತ್ತದೆಯಾದ್ರೂ ಹಲವೆಡೆ ಪೊಲೀಸರು ಸಮವಸ್ತ್ರದಲ್ಲೇ ಕಾಣಿಸ್ತಾರೆ. ಈ ವೇಳೆ ತಮಗೂ ಎಂಜಾಯ್ ಮಾಡ ಬೇಕು ಅಂತ ಅನಿಸಿದ್ರೂ ಅದಕ್ಕೆ ಬಿಡುವಿಲ್ಲದ ಕರ್ತವ್ಯದಲ್ಲಿ ಅವಕಾಶ ಸಿಗೋದಿಲ್ಲ. ಆದ್ರೆ ಇದೀಗ ಅಂತಹ ಅವಕಾಶ ಉರ್ವ ಪೊಲೀಸ್ ಠಾಣೆಯ ಪೊಲೀಸರಿಗೆ ಒದಗಿ ಬಂದಿದ್ದರೆ ಅದಕ್ಕೆ ಇನ್ಸ್ಪೆಕ್ಟರ್ ಭಾರತಿ ಅವರು ಕಾರಣರಾಗಿದ್ದಾರೆ. ಹೀಗಾಗಿ ಹೀಗೆ ಯಾವ ಭೇದಭಾವ ಇಲ್ಲದೆ ಮೇಲಧಿಕಾರಿ ಕೆಳ ಅಧಿಕಾರಿ ಅನ್ನೋ ತಾರತಮ್ಯ ಇಲ್ಲದೆ ಎಲ್ಲರೂ ಒಂದೇ ಕುಟುಂಬದಂತೆ ಎಂಜಾಯ್ ಮಾಡಿದ್ದಾರೆ. ಮುಂಜಾನೆಯಿಂದ ಸಂಜೆಯವರೆಗೂ ನಡೆದ ಈ ಕೆಸರ್ಡ್ ಒಂಜಿ ದಿನ ಕೆಲವು ಸಿಬಂದಿ ನೋಡುವುದೇ ಹೊಸತಾದ್ರೂ ತಾವೂ ಭಾಗವಹಿಸಿ ಖಷಿ ಪಟ್ಟಿದ್ದಾರೆ. ನಗರ ಪೊಲೀಸ್ ವಿಭಾಗದ ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್ ಹಾಗೂ ದಿನೇಶ್ ಕುಮಾರ್ ಅವರೂ ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಖಷಿ ಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಸಿದ್ಧಾರ್ಥ್ ಗೋಯಲ್, ಡಿಸಿಪಿ ಲಾ ಅ್ಯಂಡ್ ಆರ್ಡರ್ ಅವರು ಮಾತನಾಡಿ ಮುಕ್ಕದ ಸಾಯಿ ಫ್ರೆಂಡ್ಸ್ ಕ್ಲಬ್ ಈ ಕ್ರೀಡಾ ಕೂಟ ಆಯೋಜನೆಗೆ ತಮ್ಮ ಸಂಪೂರ್ಣ ಸಹಕಾರ ನೀಡಿರುವ ವಿಚಾರ ಪೊಲೀಸ್ ಹಾಗೂ ಸಾರ್ವಜನಿಕರ ನಡುವೆ ಇರುವ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಜನರ ಜತೆ ಪೊಲೀಸರು ಬೆರೆತಾಗ ಅವರ ಮೇಲಿನ ತಪ್ಪು ಭಾವನೆಗಳು ಕೂಡಾ ಜನರಲ್ಲಿ ದೂರವಾಗುತ್ತವೆ. ಹೀಗಾಗಿ ಇಂತಹ ಕಾರ್ಯಕ್ರಮಗಳು ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡಿಬೇಕು ಅನ್ನೋದು ಹಿರಿಯ ಪೊಲೀಸ್ ಅಧಿಕಾರಿಗಳ ಅಭಿಪ್ರಾಯ ಎಂದರು.

ಇನ್ನು ಕ್ರೀಡಾ ಕೂಟದಲ್ಲಿ ಖುದ್ದಾಗಿ ಭಾಗವಹಿಸಿದ ಡಿಸಿಪಿ ದಿನೇಶ್ ಕುಮಾರ್ ಅವರು ಈ ಬಗ್ಗೆ ಮಾತನಾಡಿದ್ದು ಒಟ್ಟಾರೆ ಭಾನುವಾರದಂದು ಕೆಸರ್ಡ್ ಒಂಜಿ ದಿನವನ್ನು ಎಂಜಾಯ್ ಮಾಡಿದ ಪೊಲೀಸರು ಸೋಮವಾರದಿಂದ ಮತ್ತದೇ ನಿತ್ಯ ಕರ್ತವ್ಯದ ಜಂಜಾಟದಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಎಂಜಾಯ್ ಮಾಡಿದ ಅದೇ ಉತ್ಸಾಹದಲ್ಲಿ ಕರ್ತವ್ಯದ ಕಡೆ ಎಲ್ಲರೂ ಗಮನ ಹರಿಸಿದ್ದಾರೆ. ನಗರದಲ್ಲಿ ನೆಮ್ಮದಿಯ ವಾತವಾರಣ ಸದಾ ಇರಲಿ ಹಾಗೂ ಇಂತಹ ಅವಕಾಶ ನಮ್ಮ ಎಲ್ಲಾ ಪೊಲೀಸರಿಗೂ ಸಿಗಲಿ ಅನ್ನೋ ಹಾರೈಕೆ ಎಲ್ಲರದು ಎಂದು ಸಂತೋಷ ವ್ಯಕ್ತಪಡಿಸಿದರು.


