ಮಂಗಳೂರು : ಈಗ ಪ್ರತಿಭಾವಂತ ಯುವಕರು ಸಿನಿಮಾ ರಂಗಕ್ಕೆ ಸೇರಿಕೊಳ್ಳುವ ಮೊದಲು ಈ ರೀತಿ ಕಿರುಚಿತ್ರ ಮಾಡುವುದು ವಾಡಿಕೆ ಆಗಿದೆ ಅದರಂತೆಯೇ ಕಿರುಚಿತ್ರಕ್ಕೆ ಬೇಡಿಕೆ ಕೂಡಾ ಬಂದಿದೆ. ನಾವು ಈಗ ಹೇಳುತ್ತಿರುವ ಕಿರುಚಿತ್ರದಲ್ಲಿ ತುಂಬಾ ವಿಶೇಷಕರ ಸಂಗತಿಗಳಿವೆ. ಆ ವಿಶೇಷಕರ ವಿಷಯಗಳಿಂದ ತುಂಬ ಸದ್ದು ಮಾಡುತ್ತಿರುವ ಕನ್ನಡ ಕಿರುಚಿತ್ರದ ಹೆಸರು HORN’ ಹಾರ್ನ್’. ಈ ಕಿರು ಚಿತ್ರದ ಮುಹೂರ್ತ ಸಮಾರಂಭ ಶಕ್ತಿನಗರದ ಮಹಾ ಗಣಪತಿ ದೇವಸ್ಥಾನದಲ್ಲಿ ನಡೆಯಿತು.ಉಮೇಶ್ ಶೆಣೈಯವರು ಈ ಕಿರುಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿದರು.








ಹಾರ್ನ್ (ಹಾರ್ನ್) ಟೆಲಿ ಫಿಲಂ ಕಿರುಚಿತ್ರದ ನಿರ್ಮಾಪಕರಾಗಿ ಹಾಗೂ ನಿರ್ದೇಶರಾಗಿ ಕಥೆ ಚಿತ್ರಕಥೆ ಚೈತ್ರೇಶ್ ಶೆಣೈ, ಸಹನಿರ್ದೇಶಕರಾಗಿ ಮಣಿ ಕಾರ್ತಿಕೇಯನ್ ಹಾಗೂ ಪ್ರಸನ್ನ ಛಾಯಾಗ್ರಾಹಕ ರಾಗಿ ಶ್ರೀ ಪ್ರಸಾದ್ ಬಂಟ್ವಾಳ ಶ್ರೀ ಟಾಕೀಸ್, ಹಾಗೂ ವಿಜಿತ್ ಕೋಟ್ಯಾನ್, ವೈಷ್ಣವಿ,ವಿನೀಶ್. ಸುಜೀತ್ ಅರುಂಧತಿ,ಸಹಸ್ ,ಶಿವು ಅಳಿಕೆ. ದಿನೇಶ್ ಪ್ರಭು,ಪ್ರೀತಿ ಶೆಟ್ಟಿ,ಸಬಿತಾ ಸಂದೀಪ್, ಚೈತ್ರೇಶ್ ರವರು ಮುಖ್ಯ ಪಾತ್ರ ವಹಿಸಲಿದ್ದಾರೆ.
ಬಳಿಕ ಮಾತನಾಡಿದ ನಿರ್ಮಾಪಕ ಚೈತ್ರೆಶ್ ಶೆಣೈ ರವರು ಈ ಕಿರುಚಿತ್ರ ಮಹಾಮಯ ಎಂಟರ್ ಟೈನ್ ಮೆಂಟ್ ಬ್ಯಾನರ್ ಹಾಗೂ ಮಹಾಮಯಿ ಬಾಲೆರಿ ಅಡಿಯಲ್ಲಿ ನಿರ್ಮಾಣಗೊಳ್ಳಲಿದ್ದು ಇದೊಂದು ಸಮಾಜಕ್ಕೆ ಹರಿವು ಮೂಡಿಸುವ ಕಿರುಚಿತ್ರವಾಗಿದೆ ಇದನ್ನುPVR ಹಾಗೂ ಬಿಗ್ಪ್ರ ಸಿನಿಮಾಗಳಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಹೇಳಿದರು.
ಈ ಕಿರು ಚಿತ್ರದ ಸಹನಿರ್ದೇಶಕ ಮಣಿ ಕಾರ್ತಿಕೇಯನ್ ರವರು ಮಾತನಾಡಿ ಈ ಚಿತ್ರದ ಪ್ರೊಮೊ ಇತಿಹಾಸ ನಿರ್ಮಿಸಲಿದೆ ಈ ಚಿತ್ರದ ವಿಶ್ಲೇಷಣೆಯು ಕಥಾವಸ್ತು, ದೃಶ್ಯಗಳು, ಮತ್ತು ಸಂಭಾಷಣೆಗಳು ಸಾಮಾಜಿಕ ಹರಿವು ಮೂಡಿಸುವುದರಲ್ಲಿ ಮುಖ್ಯ ಪಾತ್ರವಹಿಸಲಿದೆ. 15 ದಿನಗಳಲ್ಲಿ ಕಿರುಚಿತ್ರದ ಚಿತ್ರೀಕರಣ ಪೂರ್ಣಗೊಳ್ಳಲಿದ್ದು ಸಮಾಜಕ್ಕೆ ಈ ಚಿತ್ರದಲ್ಲಿ ಉತ್ತಮ ಸಂದೇಶವಿದೆ ಎಂದು ಹೇಳಿದರು.