Thursday, September 18, 2025
Flats for sale
Homeಜಿಲ್ಲೆಮಂಗಳೂರು : ವಿಯೆಟ್ನಾಂ ನಲ್ಲಿ ನಡೆದ ಅಂತರಾಷ್ಟ್ರೀಯ ವೇದಿಕೆಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ...

ಮಂಗಳೂರು : ವಿಯೆಟ್ನಾಂ ನಲ್ಲಿ ನಡೆದ ಅಂತರಾಷ್ಟ್ರೀಯ ವೇದಿಕೆಯ ಫ್ಯಾಷನ್ ಶೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಕೀರ್ತಿ ತಂದ ಮಂಗಳೂರಿನ 8 ವರ್ಷದ ಬಾಲಪ್ರತಿಭೆ ರುಶಭ್ ರಾವ್…!

ಮಂಗಳೂರು : ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆ (ಆಗಸ್ಟ್ 13ರಿಂದ 17, ವಿಯೆಟ್ನಾಂ)ನಲ್ಲಿ ನಡೆದಿತ್ತು ಈ ಸ್ಪರ್ಧೆಗೆ ಭಾರತದಿಂದ ಬಾಲಪ್ರತಿಭೆ ರುಶಭ್ ರಾವ್ ಪ್ರತಿನಿಧಿಸಿದ್ದರು.ಇದೀಗ ಅಂತರಾಷ್ಟ್ರೀಯ ವೇದಿಕೆಯಲ್ಲಿ Prince Categoryಯಲ್ಲಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ, ಅವನು “ಸೂಪರ್ ಟ್ಯಾಲೆಂಟ್” ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡು ಭಾರತವನ್ನು ಜಾಗತಿಕ ಮಟ್ಟದಲ್ಲಿ ಹೆಮ್ಮೆಯತ್ತ ಕೊಂಡೊಯ್ದಿದ್ದಾನೆ. ಇಂದು ಮಂಗಳೂರಿಗೆ ಬಂದಿಲಿದಿದ್ದು ಮಂಗಳೂರಿನ ವಿಮಾನ ನಿಲ್ದಾಣ ದಲ್ಲಿ ಹೂಗುಚ್ಚ ನೀಡಿ ಕುಟುಂಸ್ಥರು ಸ್ವಾಗತಕೋರಿದ್ದಾರೆ.

ಮಂಗಳೂರು ಕುಲಶೇಖರ ಮೂಲದ, ಕೇವಲ 8 ವರ್ಷದ ಬಾಲಪ್ರತಿಭೆ ರುಶಭ್ ರಾವ್ ಬಿಜೈಯಾ ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದಾರೆ. ಈ ಪ್ರತಿಭಾವಂತ ಬಾಲಕ ತನ್ನ ಕಿರಿಯ ವಯಸ್ಸಿನಲ್ಲಿಯೇ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು . ಅಂತರಾಷ್ಟ್ರೀಯ ಫ್ಯಾಷನ್ ಮತ್ತು ಪ್ರತಿಭಾ ವೇದಿಕೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ತನ್ನ ಮಡಿಲಿಗೆರಿಸಿ ಭಾರತಕ್ಕೆ ಕೀರ್ತಿ ತಂದಿದ್ದಾನೆ.

ನೃತ್ಯದಿಂದ ಶುರುವಾದ ಪ್ರತಿಭಾ ಪಯಣ

4ನೇ ವಯಸ್ಸಿನಲ್ಲೇ ನೃತ್ಯವನ್ನು ಕಲಿಯಲು ಪ್ರಾರಂಭಿಸಿದ ರುಶಭ್, ಆರ್ಯನ್ಸ್ ಡ್ಯಾನ್ಸ್ ಸ್ಟುಡಿಯೋಗೆ ಸೇರಿ ನವೀನ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದುಕೊಂಡನು. ಹಲವು ನೃತ್ಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳನ್ನು ಗೆದ್ದ ರುಶಭ್, ತನ್ನ ವೇದಿಕೆ ಭಯವಿಲ್ಲದ ಪ್ರದರ್ಶನದಿಂದ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

🎬 ಬೆಳ್ಳಿತೆರೆಯಲ್ಲಿ ಮಿಂಚಿದ ಬಾಲನಟ

ನೃತ್ಯದ ಜೊತೆಗೆ ಅಭಿನಯದತ್ತ ಆಕರ್ಷಿತನಾದ ರುಶಭ್, ಇಂದಿಗೆ ಮೂರು ತುಳು ಚಿತ್ರಗಳಲ್ಲಿ ಹಾಗೂ “ನೀನೆನಾದೆ ನಾ” ಎಂಬ ಕನ್ನಡ ಧಾರಾವಾಹಿಯಲ್ಲಿ ಅಭಿನಯಿಸಿ ಬಾಲನಟನಾಗಿ ಗುರುತಿಸಿಕೊಂಡಿದ್ದಾನೆ. ಬಾಲ್ಯದಲ್ಲಿಯೇ ಬಹುಮುಖ ಪ್ರತಿಭೆಯನ್ನು ತೋರಿಸುತ್ತಿರುವ ಅವನ ಪಯಣ ಅನೇಕ ಮಕ್ಕಳಿಗೆ ಪ್ರೇರಣೆಯಾಗಿದೆ.

🏆 ರಾಷ್ಟ್ರೀಯ ಮಟ್ಟದಿಂದ ಅಂತರಾಷ್ಟ್ರೀಯ ವೇದಿಕೆಯವರೆಗೆ

2025ರ ಮೇ ತಿಂಗಳಲ್ಲಿ ಗೋವಾದಲ್ಲಿ ನಡೆದ Junior International Model Fashion Show Competitionನಲ್ಲಿ ಪ್ರಿನ್ಸ್ ವಿಭಾಗದ ಪ್ರಥಮ ಬಹುಮಾನ ಗಳಿಸಿ, ರುಶಭ್ ತನ್ನ ಜೀವನದ ಮಹತ್ತರ ತಿರುವು ಕಂಡನು. ಈ ಜಯದಿಂದ ಅವನಿಗೆ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅವಕಾಶ ಸಿಕ್ಕಿತು. ಅವನ ಸಾಧನೆಯ ಮುಂದಿನ ಹಂತವಾಗಿ, ಫ್ಯಾಷನ್ ರನ್‌ವೇ ಇಂಟರ್‌ನ್ಯಾಷನಲ್ ಆಯೋಜಿಸಿದ ಅಂತರಾಷ್ಟ್ರೀಯ ಫ್ಯಾಷನ್ ಶೋ ಸ್ಪರ್ಧೆ (ಆಗಸ್ಟ್ 13ರಿಂದ 17, ವಿಯೆಟ್ನಾಂ)ಗೆ ಭಾರತವನ್ನು ಪ್ರತಿನಿಧಿಸಲು ಅವಕಾಶ ದೊರೆಯಿತು.

ಈ ಬಾಲ ಪ್ರತಿಭೆಗೆ ನೃತ್ಯ ಹಾಗೂ ಟ್ಯಾಲೆಂಟ್ ರೌಂಡ್ ತರಬೇತಿ: ನವೀನ್ ಶೆಟ್ಟಿ, ಆರ್ಯನ್ಸ್ ಡ್ಯಾನ್ಸ್ ಸ್ಟುಡಿಯೋ, ಮಂಗಳೂರು,ಸೂಟ್ಸ್ ಮತ್ತು ಸಂಪ್ರದಾಯದ ವೇಷಭೂಷಣ ವಿನ್ಯಾಸ: ವರ್ಶಾ ವಿ. ಆಚಾರ್ಯ,ರಾಷ್ಟ್ರೀಯ ವೇಷಭೂಷಣ: ವಿಪಿನ್ ಆರ್ಟ್ಸ್, ಮಂಗಳೂರು,ಫ್ಯಾಷನ್ ಶೋ ತರಬೇತಿ: ರಾಹುಲ್ ಅಮೀನ್ ಮಂಗಳೂರು ತಂಡಗಳು ಶ್ರಮವಹಿಸಿದೆ.

ಕುಟುಂಬದ ಬೆಂಬಲವೇ ಶಕ್ತಿಯ ಮೂಲ..

ಪ್ರತಿ ಹೆಜ್ಜೆಯಲ್ಲಿಯೂ ಪ್ರೋತ್ಸಾಹ ನೀಡಿ ಬೆಂಬಲಿಸಿದವರು ಪೋಷಕರಾದ ರಕ್ಷಿತ್ ಮತ್ತು ಅಶ್ವಿನಿ, ತಮ್ಮ ರಿಯಾನ್ಶ್, ಹಾಗೂ ಕುಟುಂಬ ಸ್ನೇಹಿತರಾದ ರಾಹುಲ್ ಅಮೀನ್, ಪವನ್ , ನಾಗೇಂದ್ರ ಇತ್ಯಾದಿ. ಇವರ ಒಗ್ಗಟ್ಟಿನ ಶ್ರಮ, ಯೋಜನೆ ಮತ್ತು ನಂಬಿಕೆ ಈ ಸಾಧನೆಗೆ ಕಾರಣವಾಗಿದೆ.ರುಶಭ್ ರಾವ್ ಅವರ ಈ ಸಾಧನೆ, ಮಂಗಳೂರು ನಗರದ ಹೆಮ್ಮೆಯಾಗಿ, ಕರ್ನಾಟಕ ಮತ್ತು ಭಾರತದ ಕೀರ್ತಿಯನ್ನು ಹೆಚ್ಚಿಸಿದೆ. ಇಂತಹ ಪ್ರತಿಭೆಗಳು ಭವಿಷ್ಯದಲ್ಲಿ ಜಾಗತಿಕ ವೇದಿಕೆಯಲ್ಲಿ ಇನ್ನಷ್ಟು ಮೆರೆದಾಡುವ ನಿರೀಕ್ಷೆ ಇದೆ.

ಈ ಸಂದರ್ಭದಲ್ಲಿ ತಂದೆ ರಕ್ಷಿತ್,ತಾಯಿ ಅಶ್ವಿನಿ,ತಮ್ಮ ರಿಯಾನ್ಸ್,ಅಜ್ಜಿ ಲತಾ,ರಜತ್,ಕರುಣಾ ವಿಹಾಗ್,ಬೆಬಿ ಅಮೀನ್,ರಮ್ಯಾ,ಸಪ್ನಾ,ಶ್ರೇಯ,ಹರ್ಶಿನಿ, ನೀತಿನ್ ರಾಜ್,ಆಯುಷ್,ಸುಹಾನ್ ಪ್ರಸಾದ್,ನಾಗೇಂದ್ರ, ಹಾಗೂ ನವೀನ್ ಶೆಟ್ಟಿಯವರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular