ಮಂಗಳೂರು : ನಿಶ್ಚಿತಾರ್ಥವಾಗಿದ್ದ ಯುವತಿ ವಿವಾಹದ ಮುನ್ನಾ ದಿನ ನಾಪತ್ತೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ.ಯಾರೇ ಆಗಿರಲಿ ಮದುವೆಯ ಮೊದಲು ಬೇರೊಬ್ಬನನ್ನು ಪ್ರೀತಿಸುತ್ತಿದ್ದೇನೆಂದರೆ ಮುಗಿಯಿತು ಮನೆಯವರನ್ನು ಒಪ್ಪಿಸಿ ಮದುವೆಯಾಗುವುದು ಉತ್ತಮ ಆದರೆ ವರ ತನ್ನ ಕನಸಿನ ಪತ್ನಿ ಬರುತ್ತಾಳೆಂದು ಕಾದು ಕುಳಿತ್ತಿರುವ ಸಂದರ್ಭದಲ್ಲಿ ಎರಡು ದಿನಗಳ ಹಿಂದೆ ಎಲ್ಲಾ ಪಾರ್ಟಿ ನೀಡಿ ಖರ್ಚು ವೆಚ್ಚ ನಡೆದ ಮೇಲೆ ವಧು ಪರಾರಿಯಾಗುವುದೆಂದರೆ ವರನಿಗೆ ತಲೆತಗ್ಗಿಸುವಂತಹ ಸಂಗತಿ.
ಬೋಳಾರದ ಪಲ್ಲವಿ (22) ನಾಪತ್ತೆಯಾದವರು. ಈಕೆಯ ಒಪ್ಪಿಗೆಯಂತೆ ನಿಶ್ಚಿತಾರ್ಥವಾಗಿತ್ತು. ಎ. 16ರಂದು ವಿವಾಹ ನಿಗದಿಯಾಗಿತ್ತು. ಎ. 15ರಂದು ಮಧ್ಯಾಹ್ನ ಆಕೆ ಮೆಹಂದಿ ಹಾಕಿಕೊಳ್ಳಲು ಬ್ಯೂಟಿ ಪಾರ್ಲ‌್ರಗೆ ಹೋಗಿ ಬರುವುದಾಗಿ ತಾಯಿಯಲ್ಲಿ ತಿಳಿಸಿ ಬೋಳಾರದ ಮನೆಯಿಂದ ಒಬ್ಬಳೇ ಹೋದವಳು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಮಂಗಳೂರು ದಕ್ಷಿಣ ಠಾಣೆಯ ಪೊಲೀಸರಿಗೆ ದೂರು ನೀಡಲಾಗಿದೆ. 5 ಅಡಿ ಎತ್ತರ, ಬಿಳಿ ಮೈಬಣ್ಣ ಸಾಧಾರಣ ಶರೀರ, ಕಪ್ಪು ಉದ್ದ ಕೂದಲು ಹೊಂದಿದ್ದು ಕನ್ನಡ, ತುಳು, ಇಂಗ್ಲಿಷ್ ಮತ್ತು ಹಿಂದಿ ಮಾತನಾಡುತ್ತಾಳೆ. ಬ್ಲೂ ಜೀನ್ಸ್ ಪ್ಯಾಂಟ್ ಮತ್ತು ಬ್ಲ್ಯಾಕ್ ಟೀ ಶರ್ಟ್ ಧರಿಸಿದ್ದಳು ಎಂದು ಮಾಹಿತಿ ದೊರೆತಿದೆ.