Tuesday, March 11, 2025
Flats for sale
Homeಜಿಲ್ಲೆಮಂಗಳೂರು : ವಿದ್ಯಾರ್ಥಿ ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಭಜರಂಗದಳ ಮುಖಂಡ ಭರತ್ ಕುಮ್ಡೇಲ್​ ಗೆ...

ಮಂಗಳೂರು : ವಿದ್ಯಾರ್ಥಿ ದಿಗಂತ್ ಪತ್ತೆಗೆ ಆಗ್ರಹಿಸಿ ಪ್ರತಿಭಟಿಸಿದ್ದ ಭಜರಂಗದಳ ಮುಖಂಡ ಭರತ್ ಕುಮ್ಡೇಲ್​ ಗೆ ಸಾಮಾಜಿಕ ತಾಣಗಳ ಮೂಲಕ ಕೊಲೆ ಬೆದರಿಕೆ..!

ಮಂಗಳೂರು : ಮಾರ್ಚ್​ 1ರಂದು ಭಜರಂಗದಳ ಮುಖಂಡ ಭರತ್ ನೇತೃತ್ವದಲ್ಲಿ ಫರಂಗೀಪೇಟೆ ಬಂದ್ ನಡೆಸಲಾಗಿತ್ತು. ದಿಗಂತ್ ನಾಪತ್ತೆ ಹಿಂದೆ ಅನ್ಯಮತೀಯರ ಹಾಗೂ ಗಾಂಜಾ ಗ್ಯಾಂಗ್ ಕೈವಾಡ ಎಂದು ಪ್ರತಿಭಟನೆ ವೇಳೆ ಭರತ್ ಕುಮ್ಡೇಲು ಆರೋಪಿಸಿದ್ದರು.

ಈ ಬಗ್ಗೆ ಸಾಮಾಜಿಕಜಾಲತಾಣದಲ್ಲಿ ಹಲವು ವಿಡಿಯೋ ವೈರಲ್ ಆಗಿತ್ತು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವೈರಲ್ ಆದ ಆ ಪೋಸ್ಟ್ನಲ್ಲಿ ಈ ರೀತಿ ಬರೆದಿದ್ದಾರೆ. “ಭರತ್‌ ಕುಮ್ಮೇಲು ರಕ್ತ ಈ ಭೂಮಿಗೆ ಹರಿಸದೆ ನಮಗೆ ಸಮಾಧಾನವಿಲ್ಲ. ಶಾಂತಿಯುತವಾದ ಪರಂಗಿಪೇಟೆಯಲ್ಲಿ ಕೋಮುಗಲಭೆ ನಡೆಸಲು ಸಂಘ ಪರಿವಾರದ ಅಜಂಡವಿತ್ತು. ಅದು ನಡೆಯಲಿಲ್ಲ, ಮುಸ್ಲಿಂ ಸಮುದಾಯವನ್ನು ಟಾರ್ಗೆಟ್ ಮಾಡಿ ಕೋಮು ಬಣ್ಣ ಬಳಿಯಲು ನೋಡಿದರು. ಆದರೆ, ಪೊಲೀಸ್‌ ಇಲಾಖೆಯ ಕಠಿಣ ಶ್ರಮದಿಂದ ಚಾನ್ಸ್ ಸಿಕ್ಕಿಲ್ಲ. ದಿಗಂತ್ ಪತ್ತೆಹಚ್ಚಿದ ಪೊಲೀಸ್‌ ಇಲಾಖೆಗೆ ಅಭಿನಂದನೆಗಳು. ದಿಗಂತ್ ಅಪರಣ ಪ್ರಕರಣವನ್ನು ಭರತ್‌ ಕುಮ್ಮೇಲು ಮುಸಲ್ಮಾನರ ತಲೆಗೆ ಕಟ್ಟುವ ಹುನ್ನಾರವಿತ್ತು.” ಎಂದು ಪೋಸ್ಟರ್ನಲ್ಲಿದೆ.

ಇವನ ಬಗ್ಗೆ ಕ್ರಮ ತೆಗಿದುಕೊಳ್ಳಿ. ನಮ್ಮ ಸಹೋದರ ಶಾಹಿದ್ ಅಶ್ರಫ್ ಕಲಾಯಿಯನ್ನು ಮರೆತಿಲ್ಲ, ಪ್ರತಿರೋಧ ಅಪರಾಧವಲ್ಲ” “ಇವನು ಇನ್ನು ಎಲ್ಲಿಯಾದರೂ ಮುಸಲ್ಮಾನರ ಹೆಸರು ಎತ್ತಿದರೆ ಅದೇ ಪ್ರತಿಭಟನೆಗೆ ದಾಳಿ ಮಾಡುತ್ತೇವೆ. ಮತ್ತೆ ಇಲ್ಲಿ ಕೋಮು ಗಲಭೆ ಉಂಟಾದರೆ ನಾವು ಜವಾಬ್ದಾರರಲ್ಲ ಎಚ್ಚರಿಕೆ, ಇವನ ಬಗ್ಗೆ ಕ್ರಮ ತೆಗಿದುಕೊಳ್ಳಿ ಎಂದು ಭರತ್ ಕುಮ್ಡೇಲ್​ ಗೆ ಸಾಮಾಜಿಕ ತಾಣಗಳ ಮೂಲಕ ಕೊಲೆ ಬೆದರಿಕೆ ಹಾಕಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular