Friday, March 13, 2026
Flats for sale
Homeಜಿಲ್ಲೆಮಂಗಳೂರು : ವಾಲಿಬಾಲ್ ಆಟಗಾರನ ಮೊಬೈಲ್ ನಲ್ಲಿ ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋ ಪತ್ತೆ,ಪೋಕ್ಸೋ...

ಮಂಗಳೂರು : ವಾಲಿಬಾಲ್ ಆಟಗಾರನ ಮೊಬೈಲ್ ನಲ್ಲಿ ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋ ಪತ್ತೆ,ಪೋಕ್ಸೋ ಕಾಯ್ದೆಯಡಿ ಬಂಧನ..!

ಮಂಗಳೂರು : ಬೆಳ್ತಂಗಡಿ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದು, ವಾಲಿಬಾಲ್ ಆಟಗಾರ ಆಟಗಾರನ ಕಾಮಕಾಂಡ ಬಯಲಾಗಿದ್ದು ಮೊಬೈಲ್​ನಲ್ಲಿ ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋ ಪತ್ತೆಯಾಗಿದೆ.

ವಿದ್ಯಾರ್ಥಿನಿಗೆ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ಹಿನ್ನಲೆ ಅನ್ಯಕೋಮಿನ ಯುವಕನಿಗೆ ಹಿಂದೂ ಸಂಘಟನೆ ಕಾರ್ಯಕರ್ತರಿಂದ ಹಲ್ಲೆ ಮಾಡಲಾಗಿತ್ತು ಈ ವೇಳೆ ಆತನ ಮೊಬೈಲ್​ ಪರೀಕ್ಷಿಸಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ-ಸಲ್ಲಾಪದ ವಿಡಿಯೋಗಳು ಪತ್ತೆ ಆಗಿದ್ದು ವಾಲಿಬಾಲ್ ಆಟಗಾರನ ಕಾಮಕಾಂಡ ಬಯಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಖಾಸಗಿ ಕಾಲೇಜಿನ ವಿದ್ಯಾರ್ಥಿ ಕಂ, ವಾಲಿಬಾಲ್ ಆಟಗಾರ ಸೈಯದ್​​ ಎಂಬಾತ ಎಂದು ತಿಳಿದಿದ್ದು ವಿದ್ಯಾರ್ಥಿನಿಗೆ ಮೆಸೇಜ್ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದನು.ಈ ಹಿನ್ನಲೆ ಹಿಂದೂ ಸಂಘಟನೆ ಕಾರ್ಯಕರ್ತರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಸೈಯದ್ ಮೊಬೈಲ್ ಕಿತ್ತುಕೊಂಡು ನೋಡಿದಾಗ ನೂರಾರು ಹುಡುಗಿಯರ ಜೊತೆಗಿನ ಸರಸ ಸಲ್ಲಾಪದ ವಿಡಿಯೋಗಳು ಪತ್ತೆಯಾಗಿವೆ. ಸದ್ಯ ಬೆಳ್ತಂಗಡಿ ಪೊಲೀಸರು ಪೋಕ್ಸೋ ಕಾಯ್ದೆಯಡಿ ಆತನನ್ನು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular