Thursday, November 6, 2025
Flats for sale
Homeಜಿಲ್ಲೆಮಂಗಳೂರು : ಲೋಕಸಭೆ ಚುನಾವಣೆ : 19 ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಿದ ಪೊಲೀಸ್ ಕಮಿಷನರ್...

ಮಂಗಳೂರು : ಲೋಕಸಭೆ ಚುನಾವಣೆ : 19 ರೌಡಿ ಶೀಟರ್‌ಗಳನ್ನು ಗಡಿಪಾರು ಮಾಡಿದ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್.

ಮಂಗಳೂರು : ಲೋಕಸಭೆ ಚುನಾವಣೆವೇಳೆ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 19 ರೌಡಿ ಶೀಟರ್‌ಗಳ ವಿರುದ್ಧ ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಗಡಿಪಾರು ಆದೇಶ ಹೊರಡಿಸಿದ್ದಾರೆ.

ಇತ್ತೀಚೆಗಷ್ಟೇ 7 ಮಂದಿಯನ್ನು ಬೇರೆ ಬೇರೆ ಜಿಲ್ಲೆಗಳಿಗೆ ಗಡಿಪಾರು ಮಾಡಲಾಗಿದ್ದು, ಅದರ ಮುಂದುವರಿದ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಶಾಂತಿಯುತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಅವರ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇರಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.ಶಾಂತಿ ಮತ್ತು ಉತ್ತಮ ನಡವಳಿಕೆಯನ್ನು ಉತ್ತೇಜಿಸುವ ಕ್ರಮವಾಗಿ ಶಾಂತಿಗೆ ಭಂಗ ತರುವ ಸಾಧ್ಯತೆಯಿರುವ 367 ಅಪರಾಧಿಗಳ ಮೇಲೆ ಭದ್ರತಾ ಬಾಂಡ್‌ಗಳನ್ನು ವಿಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮೂಡುಬಿದಿರೆಯ ಪಂಟಿಹಾಳದ ಆತೂರ್ ನಸೀಬ್ (40),ಕಾಟಿಪಳ್ಳ ಮೂರನೇ ಬ್ಲಾಕ್‌ನ ಶ್ರೀನಿವಾಸ್ ಎಚ್ , ಬಜ್ಪೆಯ ಮಹಮದ್ ಸಫ್ವಾನ್ ಅಲಿಯಾಸ್ ಸಫ್ವಾನ್ (28) ,ಬೋಂದೆಲ್‌ನ ಜಯೇಶ್‌ ಅಲಿಯಾಸ್‌ ಸಚ್ಚು (28)ಪೆದಮಲೆ ಮೂಲದ ವರುಣ್ ಪೂಜಾರಿ ಅಲಿಯಾಸ್ ವರುಣ್ (30) ಕೋಡಿಕಲ್‌ನ ಮೊಹಮ್ಮದ್ ಅಜೀಜ್ ಅಲಿಯಾಸ್ ಕರಿ ಅಜೀಜ್ (40) ಎಂಬಾತನ ಜತೆ 19 ಮಂದಿಯನ್ನು ಗಡಿಪಾರು ಮಾಡಲಾಗಿದೆ. ಬಜ್ಪೆಯ ಮಹಮದ್ ಸಫ್ವಾನ್ ಅಲಿಯಾಸ್ ಸಫ್ವಾನ್ (28) ಬೋಂದೆಲ್‌ನ ಜಯೇಶ್‌ ಅಲಿಯಾಸ್‌ ಸಚ್ಚು (28) ಪೆದಮಲೆ ಮೂಲದ ವರುಣ್ ಪೂಜಾರಿ ಅಲಿಯಾಸ್ ವರುಣ್ (30) ಕೋಡಿಕಲ್‌ನ ಮೊಹಮ್ಮದ್ ಅಜೀಜ್ ಅಲಿಯಾಸ್ ಕರಿ ಅಜೀಜ್ (40) ಅಬ್ದುಲ್ ಇಶಾಮ್ ಅಲಿಯಾಸ್ ಹಿಶಾಮ್, ಇಡ್ಯಾ ಮೂಲದ ಕಾರ್ತಿಕ್ ಶೆಟ್ಟಿ ಅಲಿಯಾಸ್ ಕಾರ್ತಿಕ್ (28), ಕೈಕಂಬದ ದೀಕ್ಷಿತ್ ಪೂಜಾರಿ (23), ಕೃಷ್ಣಾಪುರ 4ನೇ ಬ್ಲಾಕ್‌ನ ಲಕ್ಷ್ಮೀಶ ಅಲಿಯಾಸ್ ಲಕ್ಷ್ಮೀಶ ಉಳ್ಳಾಲನನ್ನೂ ಗಡಿಪಾರು ಮಾಡಲಾಗಿದೆ.

ಬೋದಂತಿಲದ ಕಿಶೋರ್ ಸನಿಲ್ (36), ಉಳ್ಳಾಲದ ಕೋಡಿಮೇನ್‌ನ ಹಸೈನಾರ್ ಸೈಯದ್ ಅಲಿ (38), ಅಬ್ದುಲ್ ಜಲೀಲ್ ಅಲಿಯಾಸ್. ಕುದ್ರೋಳಿಯ ಜಲೀಲ್ (28), ಬೋಳೂರಿನ ರೋಷನ್ ಕಿಣಿ (18), ಕಸಬಾ ಬೆಂಗ್ರೆಯ ಅಹ್ಮದ್ ಸಿನಾನ್ (21), ಕಡೆಕಾರ್ ನಿವಾಸಿ ನಿತೇಶ್ ಕುಮಾರ್ (28), ಕುತ್ತಡ್ಕದ ಗುರುಪ್ರಸಾದ್ (38), ಕುತ್ತಡ್ಕದ ಭರತ್ ಪೂಜಾರಿ (31) ಇಷ್ಟು ಮಂದಿಯನ್ನು ಗಡಿಪಾರು ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular