ಮಂಗಳೂರು ; ಕರಾವಳಿ ಬಿಜೆಪಿಗೆ ಮತ್ತೋಮ್ಮೆ ಬಂಡಾಯದ ಬಿಸಿ ಬಿಸುತ್ತೋ ಎಂಬ ಸುದ್ದಿ ದಿನದಿಂದ ದಿನಕ್ಕೆ ಹರಿದಾಡುತ್ತಿದೆ.ಹಾಲಿ ಸಂಸದರಾದ ನಳೀನ್ ಕುಮಾರ್ ಕಟೀಲ್ ರವರ ಮೇಲೆ ಯುವ ಕಾರ್ಯಕರ್ತರು ಅಸಮಾಧಾನ ತೊರುತ್ತಿದ್ದು,ಹಿರಿಯ ಬಿಜೆಪಿ ಮುಖಂಡರನ್ನು ಮೂಲೆಗುಂಪು ಮಾಡಿದ ಹೆಸರು ಇವರ ಮೇಲಿದೆ ಈ ಬಾರಿ ಸಂಘ ಪರಿವಾರ ಕೂಡ ಅಭ್ಯರ್ಥಿ ಬದಲಾವಣೆಗೆ ಉತ್ಸಾಹತೋರುತ್ತಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ.
ಕರಾವಳಿಯ ಹಿಂದುತ್ವದ ಪ್ರಭಾವಿ ಮುಖಂಡ ಸತ್ಯಜಿತ್ ಸುರತ್ಕಲ್ ಮತ್ತೆ ಅಖಾಡಕ್ಕೆ ಇಳಿದಿದ್ದು ಈ ಬಾರಿ ಸತ್ಯಜಿತ್ ಸುರತ್ಕಲ್ ಗೆ ಟಿಕೆಟ್ ನೀಡಬೇಕು ಎಂದು ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಮಠ ಎಂಬಲ್ಲಿ ಗೌಪ್ಯ ಸಭೆ ಸಭೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಪ್ರಮುಖನೋರ್ವನ ಮನೆಯಲ್ಲಿ ಸಭೆ ನಡೆದಿದ್ದು ಈ ಸಭೆಯಲ್ಲಿ ಟಿಕೆಟ್ ಅಕಾಂಕ್ಷಿ, ಬಿಲ್ಲವ ಸಮಾಜದ ನಾಯಕ ಸತ್ಯಜಿತ್ ಸುರತ್ಕಲ್ ಭಾಗಿಯಾಗಿದ್ದರು .
ಈ ಸಭೆಯಲ್ಲಿ ದ.ಕ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರದ ಪ್ರಮುಖರು ಹಾಜರಿದ್ದು ಹಲವು ನಾಯಕರ ಮುಂದಿನ ನಡೆಯ ಬಗ್ಗೆ ಹಲವು ವಿಚಾರಗಳು ಇಲ್ಲಿ ಚರ್ಚೆಯಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಫೆ. 25 ರಂದು ಜಿಲ್ಲೆಯಲ್ಲಿ ಸತ್ಯಜಿತ್ ಪರವಾಗಿ ಬೃಹತ್ ಸಮಾವೇಶ ನಡೆಸಲು ಕಸರತ್ತು ನಡೆಸುತ್ತಿದ್ದು,ರಾಜ್ಯ ಬಿಜೆಪಿ ಹಾಗೂ ದೆಹಲಿಯ ಹೈಕಮಾಂಡ್ ಗೆ ಬೇಡಿಕೆ ಇಡಲು ನಿರ್ಧಾರಿಸಿದ್ದಾರೆ.
ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ತಾಲೂಕು ಹಾಗೂ ವಾರ್ಡ್ ಕಮಿಟಿಗಳ ರಚನೆಯಾಗಿದ್ದು ಬಳಿಕ ಜಿಲ್ಲಾ ವಾರ್ಡ್, ತಾಲೂಕು ವಾರ್ಡ್ ಮತ್ತು ಗ್ರಾಮ ಮಟ್ಟದ ವಾರ್ಡ್ ಗಳಿಗೆ ಸಂಚಾಲಕರ ನೇಮಕವಾಗಿದೆ.
ಅ ಮೂಲಕ ಸಭೆಗಳನ್ನು ನಡೆಸಿ ಕಾರ್ಯಕರ್ತರ ಸಂಘಟನೆ ಮಾಡುವ ಬಗ್ಗೆ ತೀರ್ಮಾನಿಸಿದ್ದು ಹಿಂಜಾವೇ ಕಾರ್ಯಕರ್ತರು, ಬೇರೆ ಬೇರೆ ಸಂಘಟನೆಯ ಕಾರ್ಯಕರ್ತರು, ಬಿಲ್ಲವ ಪ್ರಮುಖರನ್ನು ಗುರುತಿಸಿ ಕಮಿಟಿ ರಚನೆ ಮಾಡಲಾಗಿದೆ.
ಪ್ರಚಾರದ ದೃಷ್ಟಿಯಿಂದ ಸೋಷಿಯಲ್ ಮೀಡಿಯಾ ತಂಡ ರಚಸಿದ್ದು ದ.ಕ ಜಿಲ್ಲೆಯ ಬಿಜೆಪಿ ಟಿಕೆಟ್ ಗಾಗಿ ಮತ್ತೆ ಅಖಾಡಕ್ಕೆ ಹಿಂದುತ್ವದ ಪ್ರಭಾವಿ ನಾಯಕ ಸತ್ಯಜಿತ್ ಸುರತ್ಕಲ್ ತಯಾರಾಗುತ್ತಿದ್ದಾರೆ.
ಬಿಲ್ಲವ ಸಮಾಜದ ಪ್ರಭಾವಿ ಹಿಂದೂ ನಾಯಕರಾದ ಸತ್ಯಜಿತ್ ಸುರತ್ಕಲ್ ಕಳೆದ ವಿಧಾನಸಭೆ ಚುನಾವಣೆ ಹೊತ್ತಲ್ಲೇ ಮಂಗಳೂರು ಉತ್ತರ ಕ್ಷೇತ್ರದ ಟೀಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿ ಜೊತೆ ಮುನಿಸಿಕೊಂಡಿದ್ದರು
ಈ ಬಾರಿ ಮತ್ತೆ ಲೋಕಸಭಾ ಟಿಕೆಟ್ ಗಾಗಿ ಸತ್ಯಜಿತ್ ಸುರತ್ಕಲ್ ಫೈಪೋಟಿ ನಡೆಸುತ್ತಿದ್ದುವ ಇದರಜೊತೆ ಪುತ್ತೂರಿನ ಹಿಂದೂ ಮುಖಂಡ ಅರುಣ್ ಪುತ್ತಿಲ ರವರ ಹೆಸರು ಕೇಳಿಬಂದಿದೆ.
ಈ ಬಾರಿ ಕರಾವಳಿಯ ಬಿಜೆಪಿಗೆ ನುಂಗಲಾರದ ತುತ್ತಾದ ಹಿಂದೂ ನಾಯಕರ ಟಿಕೆಟ್ ಫೈಟ್ ಆಗಿದ್ದು ಇಬ್ಬರ ಜಗಳದಲ್ಲಿ ಮೂರನೆಯವನು ಲಾಭ ಪಡೆಯುವುದಂತೂ ನಿಜವಾದ ವಿಚಾರವಾಗಿದೆ. ಸಂಸದ ನಳೀನ್ ಕುಮಾರ್ ಕಟೀಲ್ ಮೇಲೆ ಹಿಂದೂ ಕಾರ್ಯಕರ್ತರು ಒಲವು ತೋರದೆ ಇರುವುದು ಮುಖ್ಯಕಾರಣವಾಗಿದ್ದು ಮುಂದಿನ ದಿನಗಳಲ್ಲಿ ಯಾವ ರೀತಿಯ ಕಸರತ್ತು ನಡೆಯುತ್ತದೆ ಎಂದು ಕಾದು ನೋಡಬೇಕಾಗಿದೆ..