Friday, November 22, 2024
Flats for sale
Homeಕ್ರೈಂಮಂಗಳೂರು : ಲವ್ ಜಿಹಾದ್ ಆರೋಪ: ಬಜರಂಗಿಗಳಿಂದ ಜ್ಯುವೆಲ್ಲರಿ ಶಾಪ್‌ಗೆ ಅಟ್ಯಾಕ್.

ಮಂಗಳೂರು : ಲವ್ ಜಿಹಾದ್ ಆರೋಪ: ಬಜರಂಗಿಗಳಿಂದ ಜ್ಯುವೆಲ್ಲರಿ ಶಾಪ್‌ಗೆ ಅಟ್ಯಾಕ್.

ಮಂಗಳೂರು : ಅನ್ಯಕೋಮಿನ ಯುವಕನಿಂದ ಲವ್ ಜಿಹಾದ್ ನಡೆಯುತ್ತಿದೆ ಎಂದು ಆರೋಪಿಸಿ ಬಜರಂಗದಳದ ಕಾರ್ಯಕರ್ತರು ಜ್ಯುವೆಲ್ಲರಿ ಶಾಪ್ ಒಳಗೆ ನುಗ್ಗಿ ಯುವಕನಿಗೆ ಥಳಿಸಿದ ಘಟನೆ ಮಂಗಳೂರಿನ ಕಂಕನಾಡಿ ಬಳಿಯ ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ನಡೆದಿದ್ದು, ಇದೊಂದು ನೈತಿಕ ಪೊಲೀಸ್‌ಗಿರಿ ಎಂಬ ಆರೋಪ ಕೇಳಿಬಂದಿದೆ.

ಸುಲ್ತಾನ್ ಗೋಲ್ಡ್ ಜ್ಯುವೆಲ್ಲರಿಯಲ್ಲಿ ಶೃಂಗೇರಿ ಮೂಲದ ಯುವತಿ ಮತ್ತು ಮಂಗಳೂರಿನ ಮುಸ್ಲಿಂ ಯುವಕ ಜೊತೆಯಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಆದರೆ ಇವರಿಬ್ಬರು ಬೈಕ್ ನಲ್ಲಿ ಸುತ್ತಾಡಿದ್ದನ್ನ ಕಂಡಿದ್ದ ಸಂಘಟನೆಯ ಯುವಕರು ಈ ಬಗ್ಗೆ ಯುವತಿಯ ಪೋಷಕರ ಗಮನಕ್ಕೆ ತಂದಿದ್ದರು ಎನ್ನಲಾಗಿದೆ.

ಆದರೆ ಇಂದು ಬಜರಂಗದಳದ ಕಾರ್ಯಕರ್ತರು ಹಾಗೂ ಪೊಲೀಸರ ಜೊತೆಗೆ ಪೋಷಕರು ಜ್ಯುವೆಲ್ಲರಿ ಶಾಪ್‌ಗೆ ಬಂದಿದ್ದು ಈ ವೇಳೆ ಪರಿಸ್ಥಿತಿ ಕೈ ಮೀರಿತ್ತು ಎನ್ನಲಾಗಿದೆ. ಪೊಲೀಸರ ಎದುರೇ ಬಜರಂಗದಳದ ಕಾರ್ಯಕರ್ತರು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ಯುವತಿಯ ಪೋಷಕರೂ ಸ್ಥಳದಲ್ಲಿದ್ದು, ಆಕೆಗೂ ಅವರು ಥಳಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕದ್ರಿ ಪೊಲೀಸರು ಯುವತಿ, ಯುವಕ ಮತ್ತು ಪೋಷಕರನ್ನ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿದ್ದು, ಎರಡೂ ಕಡೆಗಳಿಂದಲೂ ದೂರು ಸ್ವೀಕರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular