Wednesday, February 25, 2026
Flats for sale
Homeಜಿಲ್ಲೆಮಂಗಳೂರು ; ರೈಲ್ವೇ ಟ್ರ್ಯಾಕ್ ನಲ್ಲಿ ಕುಳಿತ್ತಿದ್ದ ವಿಧ್ಯಾರ್ಥಿಗಳ ವಿಡಿಯೋ ತೆಗೆದು ನೈತಿಕ ಪೋಲಿಸ್ ಗಿರಿ...

ಮಂಗಳೂರು ; ರೈಲ್ವೇ ಟ್ರ್ಯಾಕ್ ನಲ್ಲಿ ಕುಳಿತ್ತಿದ್ದ ವಿಧ್ಯಾರ್ಥಿಗಳ ವಿಡಿಯೋ ತೆಗೆದು ನೈತಿಕ ಪೋಲಿಸ್ ಗಿರಿ ,ಇಬ್ಬರ ಬಂಧನ.

ಮಂಗಳೂರು ; ನಗರದ ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ. ಮಂಗಳೂರು ನಗರ ಮಂಗಳೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಕೇಂದ್ರ ರೈಲು ನಿಲ್ದಾಣದಲ್ಲಿ ಫೆ.24 ರಂದು ಕೇಂದ್ರ ರೈಲ್ವೆ ನಿಲ್ದಾಣದ ರೈಲ್ವೆ ಟ್ರ್ಯಾಕ್ ನಲ್ಲಿ ಮಂಗಳೂರು ನಗರದ ಕಾಸ್ಸಿಯಾ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳು ರೈಲ್ವೆ ಟ್ರ್ಯಾಕ್ ನಲ್ಲಿ ಕುಳಿತು ಕೊಂಡು ಇದ್ದು, ಕುಳಿತಿದ್ದನ್ನು ವಿಚಾರಿಸಿ ಅಲ್ಲಿಗೆ ಇಬ್ಬರು ಸ್ಟೀಫನ್ ಮೊಂತೆರೋ (56 ವರ್ಷ) ಮತ್ತು ಆತನ ಮಗ ಅವಿಲ್ ಮೊಂತೆರೋ (21 ವರ್ಷ) ಬಂದಿದ್ದು ಕುಳಿತಿದ್ದ ಇಬ್ಬರನ್ನು ಪ್ರಶ್ನಿಸಿ,ಇಲ್ಲಿ ಯಾಕ ಕುಳಿತಿದ್ದೀರಿ,ಎಂದು ಸ್ಟೀಪನ್ ಮೊಂತೆರೋ ಮೊಬೈಲ್ ನಿಂದ ಅವರಿಬ್ಬರ ಫೋಟೋ ತೆಗೆದು ನಂತರ ವಿಡಿಯೋ ಮಾಡಿದ್ದಾನೆಂದು ತಿಳಿದುಬಂದಿದೆ.

ಈ ಬಗ್ಗೆ ವಿಧ್ಯಾರ್ಥಿ ನಮ್ಮ ಫೋಟೋ ಯಾಕೆ ತೆಗಿತಿರಿ ಎಂದು ಕೇಳಿದ್ದು ಅದಕ್ಕೆ ಸ್ಟೀಫನ್ ಮೊಂತೆರೋ ಇವರುಗಳಿಗೆ ಬೈದಿದ್ದಾನೆ.ಬಳಿಕ ತನ್ನ ಮನೆಯಲ್ಲಿ ತಂದೆಯೊಂದಿಗೆ ತಿಳಿಸಿದ್ದು ವಿದ್ಯಾರ್ಥಿ ತಂದೆ ಜನಾರ್ಧನ್ ರವರು ಇಂದು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ನನ್ನ ಮಗನ ಮತ್ತು ಆತನ ಸ್ನೇಹಿತೆ ಹುಡುಗಿಯ ವಿಡಿಯೋ ಫೋಟೋ ತೆಗೆದು ಅದನ್ನು ವೈರಲ್ ಮಾಡಿದ್ದು ಈ ಬಗ್ಗೆ ಅವರಿಗೆ ಮಾನಹಾನಿಯಾಗಿರುತ್ತದೆ ಎಂಬುದಾಗಿ ದಕ್ಷಿಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೋಲಿಸರು ವಿಡಿಯೋ ಮಾಡಿದ ಸ್ಟೀಫನ್ ಮೊಂಟೆರೋ ಮತ್ತು ಅವಿಲ್ ಮೊಂಟೆರೋ ಇವರನ್ನು ಬಂಧಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular