Saturday, December 13, 2025
Flats for sale
Homeಜಿಲ್ಲೆಮಂಗಳೂರು : ರಿಷಬ್ ಶೆಟ್ಟಿ ಹರಕೆ ಕೋಲದ ಅಪಪ್ರಚಾರ,ವಾರಾಹಿ ಪಂಜುರ್ಲಿ,ಜಾರಂದಾಯ ದೈವವೇ ನೋಡಿಕೊಳ್ಳಲಿ ಎಂದ ದೈವಸ್ಥಾನದ...

ಮಂಗಳೂರು : ರಿಷಬ್ ಶೆಟ್ಟಿ ಹರಕೆ ಕೋಲದ ಅಪಪ್ರಚಾರ,ವಾರಾಹಿ ಪಂಜುರ್ಲಿ,ಜಾರಂದಾಯ ದೈವವೇ ನೋಡಿಕೊಳ್ಳಲಿ ಎಂದ ದೈವಸ್ಥಾನದ ಆಡಳಿತ ಮಂಡಳಿ.

ಮಂಗಳೂರು : ಮಂಗಳೂರಿನ ಬಾರೆಬೈಲ್ ನಲ್ಲಿರುವ ದೈವಸ್ಥಾನದಲ್ಲಿ ಮಗನ ಹುಟ್ಟು ಹಬ್ಬದ ಹಿನ್ನಲೆ ಕಳೆದ ವರ್ಷವೂ ರಿಷಬ್ ಶೆಟ್ಟಿ ಕುಟುಂಬ ನೇಮೋತ್ಸವ ಸೇವೆ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಎಲ್ಲಿಯೂ ನಡೆಯದ ಚಮತ್ಕಾರ ಈ ಕ್ಷೇತ್ರದಲ್ಲಿ ಆಗಿದೆ ಎಂದು ರಿಷಬ್ ಹೇಳಿಕೊಂಡಿದ್ದರು. ಈ ವರ್ಷದ ದೀಪಾವಳಿ ಸಂದರ್ಭದಲ್ಲಿ ದೈವದ ಅನುಮತಿ ಕೇಳಿ ಹರಕೆ ನೇಮಕ್ಕೆ ಒಪ್ಪಿಗೆ ಪಡೆಯಲಾಗಿದ್ದು, ಪಂಜುರ್ಲಿ ನೇಮ,ಜಾರಾಂದಾಯಗೆ ತುಡರ ಬಲಿ ನೀಡಲು ದೈವ ಒಪ್ಪಿಗೆ ನೀಡಿತ್ತು. ಈ ಸೇವೆ ನೆರವೇರಿದ್ದು, ದೈವಗಳು ಒಳ್ಳೆಯ ರೀತಿ ಸ್ವೀಕಾರ ಮಾಡಿವೆ. ಆದರೆ ಈ ಕ್ಷೇತ್ರ ಬೆಳೆಯಬಾರದೆಂಬ ಕಾರಣಕ್ಕೆ ವಿವಾದ ಹುಟ್ಟು ಹಾಕಿದ್ದಾರೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಮುಖರಾದ ರವಿಪ್ರಸನ್ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಕಾಂತಾರ ಚಾಪ್ಟರ್ ಒನ್ ಸಿನಿಮಾದ ನಿರ್ಮಾಪಕರಾದ ವಿಜಯ್ ಕಿರಗಂದೂರು, ರಿಷಬ್ ಶೆಟ್ಟಿ ಸೇರಿದಂತೆ ಚಿತ್ರತಂಡದ ಹಲವರು ಭಾಗಿಯಾಗಿದ್ದರು.ಮಂಗಳೂರಿನ ಬಾರೇಬೈಲ್ ಎನ್ನುವ ಬಳಿ ಇರುವ ದೈವಸ್ಥಾನದಲ್ಲಿ ರಿಷಬ್ ಶೆಟ್ಟಿ ಕೋಲ ಸೇವೆಯನ್ನು ನೀಡಿದ್ದರು. ವಾರಾಹಿ ಪಂಜುರ್ಲಿ, ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಕೋಲ/ನೇಮವನ್ನು ಹರಕೆಯ ರೂಪದಲ್ಲಿ ನೀಡಲಾಗಿತ್ತು. ಇದರಲ್ಲಿ ರಿಷಬ್ ಶೆಟ್ಟಿ ಕುಟುಂಬವೂ ಭಾಗಿಯಾಗಿತ್ತು.ಈ ಹರಕೆಯ ಕೋಲದ ವೇಳೆ, ದೈವ ನರ್ತಕ ನಡೆದುಕೊಂಡಿದ್ದ ರೀತಿ, ಈಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು,ಇನ್ನೊಂದು ಕಡೆ, ತುಳುನಾಡಿನ ದೈವಾರಾಧಕರು, ಸಂಪೂರ್ಣವಾಗಿ ಕೋಲ ನಡೆದ ಪ್ರಕ್ರಿಯೆಯೇ ಸರಿಯಿರಲಿಲ್ಲ ಎನ್ನುವ ಅಸಮಾಧಾನವನ್ನು ವ್ಯಕ್ತ ಪಡಿಸಿದ್ದರು.ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಹಲವಾರು ಆಕ್ರೋಶ ಹೊರಹಾಕಿದ್ದರು.ಈ ವಿಚಾರಕ್ಕೆ ಸಂಬಂಧಿಸಿದಂತೆ ದೈವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಇಲ್ಲಿ ಕೆಲವು ವ್ಯಕ್ತಿಗಳು ಬಿಟ್ಟಿ ಪ್ರಚಾರಕ್ಕಾಗಿ ದೈವಾರಾಧನೆಯ ಮೇಲೆ ಅವಮಾನ ಮಾಡುತ್ತಿದ್ದಾರೆ . ಇದು ಸಾವಿರಾರು ವರ್ಷಗಳಿಂದ ಬಂದಂತಹ ನಂಬಿಕೆ ಈ ನಂಬಿಕೆಯ ಮೇಲೆ ಅವಮಾನವೆಸಗಿದರೆ ಅದಕ್ಕೆ ದೈವವೇ ಉತ್ತರ ನೀಡುತ್ತೆ ಎಂದರು.ಈ ಬಗ್ಗೆ ದೈವಸ್ಥಾನದಲ್ಲಿ ಆಡಳಿತ ಮಂಡಳಿ ಹಾಗೂ ಸ್ಥಳೀಯರು ಪ್ರಾರ್ಥನೆ ಸಲ್ಲಿಸಿದ್ದು ದೈವದ ಬಗ್ಗೆ ಅಪಪ್ರಚಾರ ಮಾಡುವವರನ್ನು ನೀವೇ ನೋಡಿಕೊಳ್ಳಿ ಎಂದು ಬೇಡಿಕೊಂಡಿದ್ದಾರೆ.

ಇನ್ನು ದೈವನರ್ತಕ ಮುಕೇಶ್ ರವರು ಮಾತನಾಡಿದ್ದು ದೈವ ನುಡಿದಂತೆ ನಡೆಯುವುದು ನನ್ನ ಕರ್ತವ್ಯ ನನಗೆ ದೈವವೇ ಸರಕಾರ,ಸಹಕಾರ ,ನ್ಯಾಯಾಲಯ ಕೂಡ ಅದರಂತೆ ನಾನು ನಡೆಯುತ್ತಿರುವುದು ಎಂದರು.

ನಮ್ಮ ದೈವ ಅಪವಾದದಿಂದ ಮುಕ್ತವಾಗಿದೆ- ರವಿಪ್ರಸನ್ನ ಮಂಗಳೂರಿನ ಬಾರೆಬೈಲ್ ನಲ್ಲಿರುವ ದೈವಸ್ಥಾನದಲ್ಲಿ ಮಗನ ಹುಟ್ಟು ಹಬ್ಬದ ಹಿನ್ನಲೆ ಕಳೆದ ವರ್ಷವೂ ರಿಷಬ್ ಶೆಟ್ಟಿ ಕುಟುಂಬ ನೇಮೋತ್ಸವ ಸೇವೆ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಎಲ್ಲಿಯೂ ನಡೆಯದ ಚಮತ್ಕಾರ ಈ ಕ್ಷೇತ್ರದಲ್ಲಿ ಆಗಿದೆ ಎಂದು ರಿಷಬ್ ಹೇಳಿಕೊಂಡಿದ್ದರು. ಈ ವರ್ಷದ ದೀಪಾವಳಿ ಸಂದರ್ಭದಲ್ಲಿ ದೈವದ ಅನುಮತಿ ಕೇಳಿ ಹರಕೆ ನೇಮಕ್ಕೆ ಒಪ್ಪಿಗೆ ಪಡೆಯಲಾಗಿದ್ದು, ಪಂಜುರ್ಲಿ ನೇಮ,ಜಾರಾಂದಾಯಗೆ ತುಡರ ಬಲಿ ನೀಡಲು ದೈವ ಒಪ್ಪಿಗೆ ನೀಡಿತ್ತು. ಈ ಸೇವೆ ನೆರವೇರಿದ್ದು, ದೈವಗಳು ಒಳ್ಳೆಯ ರೀತಿ ಸ್ವೀಕಾರ ಮಾಡಿವೆ. ಆದರೆ ಈ ಕ್ಷೇತ್ರ ಬೆಳೆಯಬಾರದೆಂಬ ಕಾರಣಕ್ಕೆ ವಿವಾದ ಹುಟ್ಟು ಹಾಕಿದ್ದಾರೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಮುಖರಾದ ರವಿಪ್ರಸನ್ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular