ಮಂಗಳೂರು : ತಾಂತ್ರಿಕ ದೋಷದಿಂದ ಸೋಮವಾರ ರಾತ್ರಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಜುಲೈ 11, ಮಂಗಳವಾರ ಮಧ್ಯಾಹ್ನ ದುಬೈಗೆ ಹೊರಟಿದೆ. ವಿಮಾನದ ಪ್ರಯಾಣಿಕರು ಇಡೀ ರಾತ್ರಿ ವಿಮಾನ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದರಿಂದ ತೊಂದರೆಯಾಯಿತು. ರಾತ್ರಿ 11 ಗಂಟೆಗೆ ಟೇಕಾಫ್ ಆಗಬೇಕಿದ್ದ ವಿಮಾನ ಮಂಗಳವಾರ ಮಧ್ಯಾಹ್ನ 12.20ಕ್ಕೆ ಟೇಕಾಫ್ ಆಗಿತ್ತು. ಒಟ್ಟು 161 ಪ್ರಯಾಣಿಕರು ವಿಮಾನದಲ್ಲಿದ್ದರು ಮತ್ತು ಏಳು ಪ್ರಯಾಣಿಕರು ಇತರ ವಿಮಾನಗಳಲ್ಲಿ ಹೊರಟಿದ್ದರು. ವಿಮಾನ ಹೊರಡಲು ಆಗುತ್ತಿರುವ ವಿಳಂಬಕ್ಕೆ ಪ್ರಯಾಣಿಕರು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.