ಮಂಗಳೂರು : ಕರ್ನಾಟಕ ಯುವ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಕರ್ನಾಟಕ ಮಾಜಿ ಮುಖ್ಯಸ್ಥ ಮಂಜುನಾಥ ಎಚ್‌ಎಸ್ ಶುಕ್ರವಾರ ಆಯ್ಕೆಯಾಗಿದ್ದಾರೆ. ಮಂಜುನಾಥ ಅವರು 5.67 ಲಕ್ಷ ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಒಟ್ಟು 10.81 ಲಕ್ಷ ಮತ ಚಲಾವಣೆಯಾಗಿದೆ. ಕರ್ನಾಟಕ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಮೊಹಮ್ಮದ್ ಹಾರಿಸ್ ನಲಪಾಡ್ ಸ್ಥಾನಕ್ಕೆ ಮಂಜುನಾಥ ನೇಮಕವಾಗಲಿದ್ದಾರೆ.
ಅಂತೆಯೇ ರಾಜ್ಯ ಕಾರ್ಯದರ್ಶಿಯಾಗಿ ಬೆಳ್ತಂಗಡಿ ತಾಲೂಕಿನ ಅಭಿನಂದನ್ ಹರೀಶ್ ಕುಮಾರ್ ಅವರು ಆಯ್ಕೆಯಾಗಿದ್ದಾರೆ. ಅದೇ ರೀತಿ ಜಿಲ್ಲಾ ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ತಂಗಡಿಯ ಗುರುರಾಜ್ ಕೆ.ಕಿಲ್ಲೂರು ಅವರು ಆಯ್ಕೆಯಾಗಿದ್ದಾರೆ. ಚುನಾವಣೆ ಫಲಿತಾಂಶವನ್ನು ರಾಜ್ಯ ಯುತ್ ಕಾಂಗ್ರೆಸ್ ಪ್ರಕಟಿಸಿದ್ದು , ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಲ್ಲಿಗೆ ಕಾಂಗ್ರೆಸ್ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.