Saturday, November 23, 2024
Flats for sale
Homeದೇಶಮಂಗಳೂರು : ರಾಜ್ಯದ ಮದರಸಾ ಮಸೀದಿಗಳಿಗೆ ದಾಳಿ ಮಾಡಿದರೆ ರಾಮೇಶ್ವರಂ ಕೆಫೆ ಬಾಂಬರ್ ಸಿಗುತ್ತಾನೆ :...

ಮಂಗಳೂರು : ರಾಜ್ಯದ ಮದರಸಾ ಮಸೀದಿಗಳಿಗೆ ದಾಳಿ ಮಾಡಿದರೆ ರಾಮೇಶ್ವರಂ ಕೆಫೆ ಬಾಂಬರ್ ಸಿಗುತ್ತಾನೆ : ಶರಣ್ ಪಂಪ್‌ವೆಲ್.

ಮಂಗಳೂರು : NIA ರಾಷ್ಟ್ರೀಯ ತನಿಖಾ ದಳ ಸಿಬ್ಬಂದಿಗಳು ರಾಜ್ಯದ ಮಸೀದಿ ಹಾಗೂ ಮದರಸಾಗಳಲ್ಲಿ ಹುಡುಕಿದರೆ ರಾಮೇಶ್ವರಂ ಕೆಫೆ ಬಾಂಬರ್ ಸಿಗುತ್ತಾನೆ ಎಂದು ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಪ್ರಸಾರ ಮಾಡುವ ಮದರಸಾಗಳೇ ಭಯೋತ್ಪಾದಕರ ಅಡಗು ತಾಣಗಳಾಗಿದ್ದು ಭಯೋತ್ಪಾದಕರಿಗೆ ಮೌಲ್ವಿಗಳು ಶಿಕ್ಷಣ ನೀಡುತ್ತಿದ್ದಾರೆ ಎಂದು ಹಿಂದೂ ಮುಖಂಡ ಶರಣ್ ಪಂಪ್ ವೆಲ್ ಹೇಳಿದ್ದಾರೆ.

ಯಾಕೆಂದರೆ ಬಾಂಬರ್ ಮಸೀದಿಗೆ ಹೋಗಿ ನಮಾಜ್ ಮಾಡಿ ಬಟ್ಟೆ ಬದಲಿಸಿದ್ದಾನೆ ದಿನಕ್ಕೊಂದು ಕಡೆ ತಿರುಗಾಟ ನಡೆಸುತ್ತಿದ್ದಾನೆ ಭಟ್ಕಳ ,ಬಳ್ಳಾರಿ ,ಬೆಂಗಳೂರು ಎಲ್ಲ ಕಡೆ ಸುತ್ತಾಟ ನಡೆಸಿದ್ದಾನೆ ಇವನ ಹಿಂದೆ ಉಗ್ರರ ತಂಡವೇ ಇದೆ ಎಂದು ಬಾಂಬ್ ಬ್ಲಾಸ್ಟ್ ಮಾಡಿದ ಶಂಕಿತ ಉಗ್ರನನ್ನು ಬಂಧಿಸಬೇಕಾದರೆ ರಾಷ್ಟ್ರೀಯ ತನಿಖಾ ದಳದ (NIA) ಪೊಲೀಸರು ರಾಜ್ಯದಲ್ಲಿರುವ ಎಲ್ಲ ಮದರಸಾಗಳನ್ನು ಶೋಧನೆ ಮಾಡಬೇಕು ಎಂದು ಹೇಳಿಕೆ ನೀಡಿದ್ದಾರೆ.

ರಾಮೇಶ್ವರಂ ಹೆಸರಿನ ಕೆಫೆಯನ್ನು ಟಾರ್ಗೆಟ್ ಮಾಡಿದ್ದಾನೆ. ಹಿಂದೂಗಳನ್ನು ಟಾರ್ಗೆಟ್ ಮಾಡಿ ಆ ಬಾಂಬರ್ ಬ್ಲಾಸ್ಟ್ ಮಾಡಿದ್ದಾನೆ. ಬಾಂಬರ್ ಬಳ್ಳಾರಿ, ಭಟ್ಕಳಕ್ಕೆ ಹೋಗಿರುವ ವಿಡಿಯೋವನ್ನು ರಾಷ್ಟ್ರೀಯ ತನಿಖಾ ದಳ, ಪೊಲೀಸರು ಆತನ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಬಾಂಬ್ ಬ್ಲಾಸ್ಟ್ ಮಾಡಿದ ಬಳಿಕ ಆತ ಮಸೀದಿಗೆ ಹೋಗಿ ಬಟ್ಟೆ ಬದಲಾಯಿಸಿರುವ ಮಾಹಿತಿ ಮಾಧ್ಯಮದ ಮೂಲಕ ಗೊತ್ತಾಗಿದೆ. ಭಯೋತ್ಪಾದನಾ ಕೃತ್ಯಗಳಿಗೆ ಸಾಕಷ್ಟು ಮದರಸಗಳಿಗೆ ಸಂಪರ್ಕ ಇದ್ದ ಬಗ್ಗೆ NIA ದಾಖಲೆ ಬಿಡುಗಡೆ ಮಾಡಿದೆ. ಹೀಗಾಗಿ ಕರ್ನಾಟಕದ ಮದರಸಗಳಲ್ಲಿ ಈತ ಯಾಕಿರಬಾರದು? ಇಲ್ಲಿವರೆಗೂ ಮಸೀದಿ ಮದರಸಗಳಲ್ಲಿ ತನಿಖೆ ಆಗಿಲ್ಲ. ಅಲ್ಲಿಗೆ ಹೋಗಿ ವಿಚಾರಣೆ ಮಾಡಿಲ್ಲ. ಕರ್ನಾಟಕದ ಮದರಸಗಳಿಗೆ NIA ಅಧಿಕಾರಿಗಳು ದಾಳಿ ಮಾಡಲಿ ಎಂದು ಒತ್ತಾಯಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular