Tuesday, October 21, 2025
Flats for sale
Homeಜಿಲ್ಲೆಮಂಗಳೂರು : ರಾಜ್ಯದಲ್ಲಿ ಯುವಕರಲ್ಲಿನ ಹಠಾತ್ ಹೃದಯಾಘಾತಗಳ ಪ್ರಕರಣಗಳ ಏರಿಕೆ-ಮುನ್ನೆಚ್ಚರಿಕೆ ತಪಾಸಣೆ ಅಗತ್ಯ ; ಹಿರಿಯ...

ಮಂಗಳೂರು : ರಾಜ್ಯದಲ್ಲಿ ಯುವಕರಲ್ಲಿನ ಹಠಾತ್ ಹೃದಯಾಘಾತಗಳ ಪ್ರಕರಣಗಳ ಏರಿಕೆ-ಮುನ್ನೆಚ್ಚರಿಕೆ ತಪಾಸಣೆ ಅಗತ್ಯ ; ಹಿರಿಯ ಹೃದಯ ತಜ್ಞ ಡಾ. ಯೂಸುಫ್ ಕುಂಬ್ಳೆ ಸಲಹೆ..!

ಮಂಗಳೂರು ; ಇತ್ತೀಚಿನ ತಿಂಗಳುಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಹಠಾತ್ ಹೃದಯಾಘಾತಗಳಿಂದ ಯುವ ಜನರಲ್ಲಿ ಸಾವಿನ ಸಂಖ್ಯೆ ಆತಂಕಕಾರಿ ರೀತಿಯಲ್ಲಿ ಹೆಚ್ಚಾಗಿದೆ. ಆರೋಗ್ಯವಾಗಿರುವಂತೆ ಕಾಣುತ್ತಿದ್ದ ಅನೇಕರು ಏಕಾಏಕಿ ಸಾವನ್ನಪ್ಪುತ್ತಿರುವ ಈ ಘಟನೆಯ ಬಗ್ಗೆ ಚಿಂತಿತರಾದ ದಕ್ಷಿಣ ಭಾರತದ ಪ್ರಮುಖ ಹೃದಯ ತಜ್ಞರೂ, ಮಂಗಳೂರು ಇಂಡಿಯಾನಾ ಆಸ್ಪತ್ರೆಗೆ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಡಾ. ಯೂಸುಫ್ ಕುಂಬ್ಳೆ, ಈ ಬಗ್ಗೆ, ಸಾರ್ವಜನಿಕರ ಜಾಗೃತಿ ಮತ್ತು ಮುನ್ನೆಚ್ಚರಿಕೆಯ ಅಗತ್ಯವನ್ನು ಇಂಡಿಯನ್ ಆಸ್ಪಿಟನ್ ನ ಡಾ. ಯೂಸಿಫ್ ಆಲಿ ಕುಂಬಳೆಯವರು ತಿಳಿಸಿದ್ದಾರೆ.

“ಇತ್ತೀಚೆಗೆ ಕಿರಿಯ ವಯಸ್ಸಿನವರಲ್ಲಿ ಹಠಾತ್ ಹೃದಯಾಘಾತದಿಂದ ಸಾವಿನ ಪ್ರಕರಣಗಳು ಹೆಚ್ಚುತ್ತಿವೆ. ಸರ್ಕಾರ ಇಂತಹ ಪ್ರಕರಣಗಳನ್ನು ದಾಖಲಿಸಲು ಕ್ರಮ ಕೈಗೊಂಡಿದ್ದು, ಈ ತೀವ್ರತೆಯು ಮಾಪನೀಯವಾಗಿ ಏರಿಕೆಯಾಗುತ್ತಿರುವದೆಯೇ ಎಂಬುದನ್ನು ಅಧ್ಯಯನ ಮಾಡಲು ಮುಂದಾಗಿದೆ. ಆದರೆ ಈ ಏರಿಕೆಗೆ ನಿಖರವಾದ ಕಾರಣಗಳು ಇನ್ನೂ ಸ್ಪಷ್ಟವಾಗಿಲ್ಲ.” ಎಂದರು.

ಮುಖ್ಯ ಕಾರಣಗಳು ಮತ್ತು ಜೀವನಶೈಲಿ ಸಂಬಂಧಿತ ಸಮಸ್ಯೆಗಳು.

ಡಾ. ಕುಂಬ್ಳೆ, ಅವರು, ಈ ಸ್ಥಿತಿಗೆ ಕಾರಣವಾಗಿರುವ ಪ್ರಮುಖ ಅಂಶಗಳ ಬಗ್ಗೆ ವಿವರಿಸಿದರು.

ನಿದ್ರೆ ಕೊರತೆ : “ಯುವಕರು ರಾತ್ರಿಯವರೆಗೂ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿರುವ ಕಾರಣ ಉತ್ತಮ ನಿದ್ರೆ ಇಲ್ಲ. ದಿನಕ್ಕೆ ಕನಿಷ್ಠ 7-8 ಗಂಟೆಗಳ ಗುಣಮಟ್ಟದ ನಿದ್ದೆ ಅತ್ಯವಶ್ಯ,” ಎಂದು ಎಚ್ಚರಿಸಿದರು.

ನಿರ್ಜಲಿತ ಸ್ಥಿತಿ : “ಎಸಿ ಹಾಗೂ ಕೃತಕ ಪರಿಸರದಲ್ಲಿ ದಿನಕಳೆಯುತ್ತಿರುವವರು ನೀರಿನ ಅವಶ್ಯಕತೆಯ ಅರಿವಿಲ್ಲದೆ ಕಡಿಮೆ ನೀರು ಕುಡಿಯುತ್ತಾರೆ. ಇದು ರಕ್ತದ ಹೆಪ್ಪುಗಟ್ಟುವಿಕೆಯನ್ನು ಉಂಟುಮಾಡಿ ಹೃದಯಾಘಾತ ಅಥವಾ ಸ್ತಂಭನಕ್ಕೆ ಕಾರಣವಾಗಬಹುದು.”

ಶಾರೀರಿಕ ಚಟುವಟಿಕೆ ಕೊರತೆ: “ಇಂದಿನ ಯುವ ಜನರು ದೀರ್ಘ ಕಾಲ ಕುಳಿತು

ಕೆಲಸ ಮಾಡುತ್ತಿದ್ದಾರೆ, ವ್ಯಾಯಾಮ ಇಲ್ಲದ ಜೀವನಶೈಲಿಯು ಅಪಾಯಕಾರಿಯಾಗಿದೆ. 50 ವರ್ಷದ ನಂತರ ವ್ಯಾಯಾಮ ಪ್ರಾರಂಭಿಸುವ ಬದಲು, ಆ ಅಭ್ಯಾಸ ಬಾಲ್ಯದಿಂದಲೇ ಆರಂಭವಾಗಬೇಕು,’ ಎಂದು ಸಲಹೆ ನೀಡಿದರು.

ಆಹಾರದ ವ್ಯತ್ಯಾಸ : ಫಾಸ್ಟ್ ಫುಡ್ ಸೇವನೆಯು ತೀವ್ರವಾಗಿ ಹೆಚ್ಚಾಗಿದ್ದು, ಇದರಲ್ಲಿ ಕೃತಕ ಪದಾರ್ಥಗಳು ಇದ್ದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು ಎಂದು ಅವರು ಎಚ್ಚರಿಸಿದರು. ಮನೆಯ ಅಡುಗೆ ಕಡಿಮೆಯಾಗಿದೆ, ಹೊರಗಿನ ಆಹಾರದ ಅವಲಂಬನೆ ಹೆಚ್ಚು.

ಇತರೆ ಅಪಾಯಕಾರಿ ಅಂಶಗಳು:

ಧೂಮಪಾನ, ಮದ್ಯಪಾನ, ಮಾದಕ ವಸ್ತು ಸೇವನೆ

ಕೆಲಸದ ಒತ್ತಡ, ವೈಯಕ್ತಿಕ ಜೀವನದ ಉದ್ವಿಗ್ನತೆ (stress)

ಸಕ್ಕರೆ, ರಕ್ತದೊತ್ತಡ, ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಕುಟುಂಬದಲ್ಲಿ ಹೃದಯ ಸಂಬಂಧಿ ಸಮಸ್ಯೆಗಳ ಇತಿಹಾಸ

ಮುನ್ನೆಚ್ಚರಿಕೆ ಮತ್ತು ತಪಾಸಣೆ ಅವಶ್ಯಕತೆ:

“ಹೃದಯ ಸಂಬಂಧಿ ಸಮಸ್ಯೆಗಳ ಅಪಾಯದ ಸೂಚನೆಗಳು ಇರುವವರು-ಕುಟುಂಬ ಇತಿಹಾಸ, ತಡವಾಗಿ ವ್ಯಾಯಾಮ ಪ್ರಾರಂಭ, ಜಡ ಜೀವನಶೈಲಿ ಹೊಂದಿರುವವರು -ಪ್ರತಿವರ್ಷ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು,” ಎಂದು ಡಾ. ಕುಂಬ್ಳೆ ಸಲಹೆ ನೀಡಿದರು.

ತಪಾಸಣೆಯಲ್ಲಿ’ ಈ ಪರೀಕ್ಷೆಗಳು ಸೇರಿರಬೇಕು:

(Random Blood Sugar/RBS),

ಕ್ರಿಯಾಟಿನಿನ್,

ಲಿಪಿಡ್ ಪ್ರೊಫೈಲ್.

ಎಕೋಕಾರ್ಡಿಯೋಗ್ರಾಂ,

ట్రిడామిలా టెన్షా (TMT),

ಹಾಗೂ ಹೃದಯ ತಜ್ಞರ ಸಮಾಲೋಚನೆ.

ಹೃದಯ ತಪಾಸಣಾ ಶಿಬಿರ:

ಮಂಗಳೂರು ಇಂಡಿಯಾನಾ ಆಸ್ಪತ್ರೆಯು ಜನರಲ್ಲಿ ಜಾಗೃತಿ ಮೂಡಿಸಲು ‘ಲವ್ ಯೂವರ್ ಹಾರ್ಟ್’ ಪ್ಯಾಕೇಜ್ ಅನ್ನು ರೂ. 1999/-ಗೆ ನೀಡುತ್ತಿದೆ (ಸಾಧಾರಣ ಶುಲ್ಕ ರೂ. 4500/-). ಈ ವಿಶೇಷ ತಪಾಸಣಾ ಅವಕಾಶ ಜುಲೈ 15 ರಿಂದ 31, 2025 ರವರೆಗೆ ಲಭ್ಯವಿದೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular