Saturday, January 17, 2026
Flats for sale
Homeಜಿಲ್ಲೆಮಂಗಳೂರು : ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಿಂತು ಹೋಗಿದೆ,ಸರಕಾರದ ವಿರುದ್ಧ ಪ್ರಶ್ನಿಸಿದರೆ ಹಿಂದುಗಳನ್ನು ಟಾರ್ಗೆಟ್ ಮಾಡಿ...

ಮಂಗಳೂರು : ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಿಂತು ಹೋಗಿದೆ,ಸರಕಾರದ ವಿರುದ್ಧ ಪ್ರಶ್ನಿಸಿದರೆ ಹಿಂದುಗಳನ್ನು ಟಾರ್ಗೆಟ್ ಮಾಡಿ ಎಫ್ಐಆರ್ ಹಾಕ್ತಾರೆ : ಸಂಸದ ಕೋಟ ಶ್ರೀನಿವಾಸ್ ಪೂಜಾರಿ ..!

ಮಂಗಳೂರು : ಧರ್ಮ ದ್ವೇಷ ಮಾಡುವುದು, ಕೇಂದ್ರ ಸರ್ಕಾರವನ್ನು ದೂರುವುದು, ಪ್ರಧಾನಿಯ ಡ್ರೆಸ್ ಬಗ್ಗೆ ಮಾತಾಡುವಂತಹ ಬಾಲಿಶ ಕೆಲಸವನ್ನು ಸಂತೋಷ್ ಲಾಡ್ ಮಾಡಿದ್ದಾರೆ. ಶುದ್ಧ ನೀರು ನೀಡುವ ಜಲಜೀವನ್ ಯೋಜನೆ ಸಂಪೂರ್ಣ ವಿಫಲವಾಗಿದೆ. ಕೋಟ್ಯಂತರ ರೂಪಾಯಿ ಕೇಂದ್ರ ಅನುದಾನವನ್ನು ನೀಡುವುದಕ್ಕೂ ವಿಫಲ, ರಾಜ್ಯದ 54 ಲಕ್ಷ ಜನರಿಗೆ ಹತ್ತು ಸಾವಿರ ನೀಡುವ ಯಡಿಯೂರಪ್ಪ ಅವರ ಕಿಸಾನ್ ಸಮ್ಮಾನ್ ನಿಧಿಯನ್ನು ನಿಲ್ಲಿಸಿದರು, ಸಣ್ಣ ಸಮುದಾಯಕ್ಕೆ ಸಭಾಭವನ ಒದಗಿಸುವ ಅನುದಾನಕ್ಕೂ ನಿಲ್ಲಿಸಿದ್ದಾರೆ, ಎಸ್ಸಿ ಎಸ್ಟಿಗಳ 34 ಸಾವಿರ ಕೋಟಿ ಅನುದಾನವನ್ನು ಗ್ಯಾರಂಟಿಗೆ ಬಳಸಿದ್ದಾರೆ,ನಾನು ಕೊಟ್ಟೆ ಎನ್ನುವ ಸಿದ್ದರಾಮಯ್ಯ ಎಸ್ಸಿ ಎಸ್ಟಿಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಉಡುಪಿ – ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಯವರು ಆಕ್ರೋಶಹೊರಹಾಕಿದ್ದಾರೆ.

ಖರ್ಗೆಯವರು ಚಟ್ ಪಟ್ ಯುದ್ಧ ನಡೀತು, ನಮ್ಮ ಪಾಕಿಸ್ತಾನ ಅಂತ ಹೇಳ್ತಾರೆ,ಭಾರತೀಯ ಸೇನೆಯ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ, ಇಂದಿರಾ ಗಾಂಧಿ ಹತ್ಯೆಯಾದಾಗ ಭದ್ರತಾ ವೈಫಲ್ಯ ಅಂತೀರಾ, ರಾಜೀವ ಗಾಂಧಿಯನ್ನು ಹತ್ಯೆ ಮಾಡಿದಾಗ, ತಾಜ್ ಹೋಟೆಲ್ ಮೇಲೆ ದಾಳಿಯಾದಾಗ, ಕಾಶ್ಮೀರ ಪಂಡಿತರ ಮಾರಣ ಹೋಮ ಆದಾಗ ಭದ್ರತಾ ವೈಫಲ್ಯ ಅಂತ ಹೇಳುತ್ತೀರಾ ಎಂದರು.

ಭದ್ರತಾ ವೈಫಲ್ಯ, ಸೈನಿಕರಿಗೆ ಅಪಮಾನ ಮಾಡುವುದು ಬಿಟ್ಟು ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ನಿಂತು ಹೋಗಿದೆ, ಮಂಗಳೂರಿನಲ್ಲಿ ಶ್ಚೇತಾ ಪೂಜಾರಿ, ಬುರ್ಖಾಧಾರಿಗಳನ್ನು ಯಾಕೆ ಬಂಧಿಸಿಲ್ಲ ಅಂತ ಎಫ್ಐಆರ್ ಹಾಕುತ್ತಾರೆ, ಚಕ್ರವರ್ತಿ ಸೂಲಿಬೆಲೆ, ಹರೀಶ್ ಪೂಂಜ ಮೇಲೆ, ಶರಣ್ ಪಂಪ್ವೆಲ್, ಯಶಪಾಲ್ ಸುವರ್ಣ, ಶ್ರೀಕಾಂತ್ ಶೆಟ್ಟಿ ಮೇಲೆ ಕೇಸು ದಾಖಲಿಸುತ್ತಾರೆ ಈ ಸರಕಾರ ರಾಜ್ಯದಲ್ಲಿ ಪ್ರಶ್ನಿಸಲು ಸಾಧ್ಯವೇ ಇಲ್ಲ ಎನ್ನುವಂತಹ ಸ್ಥಿತಿ ತಂದಿದ್ದಾರೆ.

ಮೂರು ಕೋಟಿ ಜನರಿಗೆ ಯುವ ನಿಧಿಯನ್ನು ಕೊಡ್ತೇವೆ ಅಂತ ರಾಹುಲ್ ಹೇಳಿಸಿದ್ದಾರೆ, ಒ‌ಂದೂವರೆ ಲಕ್ಷ ಜನಕ್ಕೂ ಸಿಕ್ಕಿಲ್ಲ ಆದರೆ ಎರಡು ವರ್ಷ ಸಾಧನೆಯನ್ನು ವೈಭವೀಕರಣ ಮಾಡುವುದೇ ಕಾಂಗ್ರೆಸ್ ಸರ್ಕಾರ ವೈಫಲ್ಯಗಳ ಚಾರ್ಚ್ ಶೀಟ್,ಸರ್ಕಾರದ 2 ವರ್ಷದ ಸಾಧನಾ ಸಮಾವೇಶ ಹಿನ್ನೆಲೆ ನೋಡಿದರೆ ಏನು ಇಲ್ಲ.ಇವರು ಕೇಂದ್ರ ಸರ್ಕಾರದ ವಿರುದ್ಧ ಇಲ್ಲದ ಸಲ್ಲದ ಆರೋಪ ಮಾಡುತ್ತಿದ್ದು ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ,ಪರಿಶಿಷ್ಟ ಪಂಗಡಕ್ಕೆ ರಾಜ್ಯ ಸರ್ಕಾರ ಅನ್ಯಾಯ ಮಾಡುತ್ತಿದೆ ಹಿಂದೂ ಪರವಾಗಿ ಮಾತನಾಡಿದ್ರೆ, ಎಫ್ಐಆರ್ ದಾಖಲುವಾಗುತ್ತೆ ಸುಳ್ಳಿನ ಭರವಸೆಯನ್ನ ನೀಡುತ್ತಿದ್ದಾರೆಂದು ಕಾಂಗ್ರೆಸ್ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ .

RELATED ARTICLES

LEAVE A REPLY

Please enter your comment!
Please enter your name here

Most Popular