ಮಂಗಳೂರು : ಮಹಿಳೆ ರಸ್ತೆಯಲ್ಲಿ ಆಟೋರಿಕ್ಷಾ ಬರುವವೇಳೆ ಗಮನಿಸದೆ ತಟ್ಟನೆ ರಸ್ತೆ ದಾಟುತ್ತಿರುವಾಗ ಆಟೋರಿಕ್ಷಾ ಡಿಕ್ಕಿ ಹೊಡೆದು ಮಗುಚಿ ಮಹಿಳೆ ಮೇಲೆ ಬಿದ್ದ ಘಟನೆ ಎರಡು ದಿನಗಳ ಹಿಂದೆ ಮಂಗಳೂರಿನ ಕಿನ್ನಿಗೋಳಿಯ ರಾಮನಗರದಲ್ಲಿ ವರದಿಯಾಗಿತ್ತು.ಆದರೆ ಅಪಘಾತದಲ್ಲಿ ತಾಯಿ ಮೇಲೆ ಬಿದ್ದ ಆಟೋವನ್ನು ಪುಟ್ಟ ಬಾಲಕಿಯೊಬ್ಬಳು ಎತ್ತಿ ಹಾಕಿರುವ ವಿಡಿಯೋ ವೈರಲ್ ಆಗಿದ್ದು ಬಾಲಕಿಯ ದೈರ್ಯಕ್ಕೆ ಎಲ್ಲೆಡೆ ಪ್ರಸಂಶೆ ವ್ಯಕ್ತವಾಗಿದೆ.
ಪಿಗ್ಮಿ ಕಲೆಕ್ಷನ್ ಮುಗಿಸಿ ಟ್ಯೂಶನ್ ಗೆ ತೆರಳಿದ್ದ ಮಗಳನ್ನು ಕರೆತರಲು ಟ್ಯೂಶನ್ ಸೆಂಟರ್ ಬಳಿ ಬಂದ ಚೇತನಾ ಏಕಾಏಕಿ ರಸ್ತೆ ದಾಟಲು ಕಿನ್ನಿಗೋಳಿಯ ರಾಮನಗರದಲ್ಲಿ ಮಹಿಳೆ ರಸ್ತೆ ಮುಂದಾಗಿದ್ದರು. ಈ ವೇಳೆ ವೇಗವಾಗಿ ಬಂದ ಆಟೋ ನಿಯಂತ್ರಣ ತಪ್ಪಿ ಮಹಿಳೆ ಗುದ್ದಿದೆ. ಅಲ್ಲದೆ ಆಕೆಯ ಮೇಲೆ ಉರುಳಿದೆ. ಈ ವೇಳೆ ರಾಜರತ್ನಪುರ ನಿವಾಸಿ ಚೇತನಾ (35 ವರ್ಷ)ಎನ್ನುವ ಮಹಿಳೆಗೆ ತೀವ್ರಗಾಯವಾಗಿದೆ.ಇದನ್ನು ಕಂಡ ಬಾಲಕಿ ಓಡಿ ಬಂದಿದ್ದು, ತಕ್ಷಣ ಆಟೋವನ್ನೇ ಮೇಲೆಕ್ಕೆ ಎತ್ತಿ ಹಾಕಿದ್ದಾಳೆ. ಇವಿಷ್ಟೂ ದೃಶ್ಯವಳಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.


