ಮಂಗಳೂರು : ಗುರುವಾರ ಮಧ್ಯರಾತ್ರಿ ಯೆಯ್ಯಾಡಿ ಬಳಿ ಬೈಕ್ ಸ್ಕಿಡ್ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಮೃತರು ಶಕ್ತಿನಗರದ ಚಾಲುಕ್ಯ ಬಾರ್ನಲ್ಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಬೆಳಗಿನ ಜಾವ 2:30ರ ಸುಮಾರಿಗೆ ಈ ಘಟನೆ ನಡೆದಿದೆ.
ಮೃತರನ್ನು ರಾಮಕುಂಜ ನಿವಾಸಿ ಚೇತನ್ (21) ಮತ್ತು ಉರ್ವ ಸ್ಟೋರಿನ ಕಾಶಿ (17) ಎಂದು ಗುರುತಿಸಲಾಗಿದೆ.
ಅವರು ಮೂರು ಪ್ರತ್ಯೇಕ ಬೈಕ್ಗಳಲ್ಲಿ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದರು. ಯೆಯ್ಯಾಡಿ ಸಮೀಪಕ್ಕೆ ಬರುತ್ತಿದ್ದಂತೆ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.
ಚೇತನ್ ಮತ್ತು ಕಾಶಿ ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ರಸ್ತೆ ಮಧ್ಯೆ ಮೃತಪಟ್ಟಿದ್ದಾರೆಂದು ತಿಳಿದಿದೆ. ಮೃತದೇಹಗಳನ್ನು ಆಸ್ಪತ್ರೆಯಲ್ಲಿ ರವಾನಿಸಲಾಗಿದ್ದು ,ದಕ್ಷಿಣ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.