ಮಂಗಳೂರು : ಜಿಲ್ಲೆಯಲ್ಲಿ ‘ಮತೀಯವಾದ ಭಿತ್ತುವ ಪರಕೀಯ ಮತಗ್ರಂಥಗಳನ್ನ ನಿಷೇಧಿಸಿ’ ಗೋ ಹತ್ಯೆ ,ಮತಾಂತರ ,ಲವ್ ಜಿಹಾದ್ ನಂತಹ ಸಂಘರ್ಷದ ಮೂಲವನ್ನು ನಿಲ್ಲಿಸಿದ್ರೆ ಕೋಮು ದ್ವೇಷ ಚರ್ಚೆಯಲ್ಲಿ ಇರಲ್ಲ ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.

ಸೋಮವಾರ ದ.ಕ ಜಿಲ್ಲೆಗೆ ಬಿಜೆಪಿ ನಿಯೋಗ ಬರಲಿದ್ದು ಸುಹಾಸ್ ಶೆಟ್ಟಿ ಹತ್ಯೆ, ರೆಹಮಾನ್ ಹತ್ಯೆ ಹಾಗೂ ಸರಣಿ ಘಟನೆಗಳ ಅಧ್ಯಯನ ಮಾಡಲಿದೆ ಎಂದರು. ಜಿಲ್ಲೆಯಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ವಿಪಕ್ಷ ನಿಯೋಗ ಬರಲಿದ್ದು ಜಿಲ್ಲೆಯಲ್ಲಿ ಶಾಂತಿ ನೆಲೆಸಬೇಕೆಂದು ಇತ್ತೀಚೆಗೆ ಕಾಂಗ್ರೆಸ್ ನ ಹರಿಪ್ರಸಾದ್ ರ ನಿಯೋಗ ಕೂಡ ಪ್ರಸ್ತಾಪನೆ ಮಾಡಿದ್ದಾರೆಂದು ತಿಳಿಸಿದರು. ಪೊಲೀಸ್ ಇಲಾಖೆ ಕೂಡ ಶಾಂತಿಗಾಗಿ ಕೆಲ ಕ್ರಮಗಳನ್ನು ಕೈಗೊಳ್ತಾ ಇದ್ದು ಹಾಗಾಗಿ ಪೊಲೀಸರಿಗೆ ನನ್ನ ಕೆಲವು ಸಲಹೆಗಳನ್ನು ಕೊಡ್ತಾ ಇದೀನಿ ಎಂದರು.
ಮೊದಲು ಜಿಲ್ಲೆಯಲ್ಲಿನ ಸಂಘರ್ಷದ ಮೂಲ ಗೋ ಹತ್ಯೆ, ಲವ್ ಜಿಹಾದ್, ಮತಾಂತರ ದಂತಹ ಸಂಘರ್ಷದ ಮೂಲ ಪತ್ತೆಮಾಡಿ ಇದನ್ನ ನಿಲ್ಲಿಸಿದ್ರೆ ಕೋಮು ದ್ವೇಷ ಚರ್ಚೆಯಲ್ಲಿ ಇರಲ್ಲ ಅನಿಸ್ತಿದೆ ಎಂದರು. ಗೋ ಹತ್ಯೆ ಮಾಡೋರು ಮತ್ತು ತಡೆಯೋರನ್ನ ಒಂದೇ ತಕ್ಕಡಿಯಲ್ಲಿ ಇಟ್ಟು ನೋಡಲಾಗ್ತಿದೆ ಪೊಲೀಸ್ ಇಲಾಖೆ ಅಂಥ ಕೆಲಸ ಮಾಡಬಾರದು, ಗೋ ಹತ್ಯೆ ಮಟ್ಟ ಹಾಕಿ ಲವ್ ಜಿಹಾದ್ ಸಂಘಟಿತ ಕೃತ್ಯವನ್ನು ಸಂಪೂರ್ಣ ತಡೆಯಿರಿ ಅವರಿಗೆ ಸಂಘಟಿತ ಬೆಂಬಲ ಸಿಗ್ತಾ ಇದೆ, ಮತಾಂತರ ವ್ಯವಸ್ಥೆ ಮಟ್ಟ ಹಾಕಿ ಇದೆಲ್ಲಾ ಮಾಡಿದರೆ ಜಗಳ ಮತ್ತು ಸಂಘರ್ಷ ನಿಂತು ಹೋಗಲಿದೆ ಎಂದರು.
ಜಿಲ್ಲೆಯಲ್ಲಿ ಇವರಿಗೆ ಸುಲಭದ ಹಣದ ಮೂಲ ಯಾವುದು?ಮತೀಯ ಕಾರಣಕ್ಕಾಗಿ ಕೆಲವರು ಇವರಿಗೆ ಹಣ ಪೂರೈಸ್ತಾರೆ,ಗಾಂಜಾ, ಮರಳು ದಂಧೆ, ಬೆಟ್ಡಿಂಗ್ ದಂಧೆ ಅನೈತಿಕ ಕಾರ್ಯಕ್ಕೆ ಹಣಕಾಸು ಸಹಾಯ ಮಾಡುತ್ತದೆ,ಎಸ್ಪಿ ಮತ್ತು ಕಮಿಷನರ್ ನಿಮ್ಮ ಇಲಾಖೆಯ ಕೆಲವರು ಇಂಥದರ ಭಾಗವಾಗಿರೋದನ್ನ ತಪ್ಪಿಸಿ,ಸಜ್ಜನರು ಮತ್ತು ದುರ್ಜನರನ್ನ ಒಂದೇ ತಕ್ಕಡಿಯಲ್ಲಿ ಇಟ್ಟು ತೂಗ್ತಾ ಇದೀರಿ.ಇದು ವರ್ತಮಾನ ಮತ್ತು ಭವಿಷ್ಯಕ್ಕೆ ಬಹಳ ಮಾರಕವಾಗುತ್ತೆ,80 ವರ್ಷದ ಪೂವಪ್ಪ, ರಾಷ್ಟ್ರ ಭಕ್ತಿ ಉಸಿರಾಡೋ ಸಂಘದ ಸೀತಾರಾಮ್ ಮನೆಗೆ ಹೋಗ್ತಿರಿ ಎಸ್ಪಿಯರು ಕಮ್ಯೂನಲ್ ಆರ್ಗನೈಸೇಶನ್ ಮತ್ತು ಕಮ್ಯುನಲ್ ವ್ಯಕ್ತಿಗಳು ಅಂದಿದ್ದೀರಿ,ಎಸ್ಪಿ ಭಜರಂಗದಳ ಕಮ್ಯುನಲ್ ಅಂತ ಹೇಗೆ ಹೇಳ್ತೀರಿ, ನಾವು ಹಿಂದೂ ಪರ ಸಂಘಟನೆ ಅಂತ ಹೇಳಿ ಒಪ್ಪಿಕೊಳ್ತೀವಿ.ಹಿಂದೂ ವಿಚಾರಧಾರೆಗಳೇ ಕಮ್ಯುನಲ್ ಅಲ್ಲ, ಹೇಗೆ ಕಮ್ಯುನಲ್ ಅಂತೀರಿ ಎಂದರು.
ಬಳಿಕ ಮಾತನಾಡಿದ ಅವರು ಅನ್ಯಮತದಲ್ಲಿ ದೇವರಲ್ಲ, ಪ್ರವಾದಿ ಅಂತ ಹೇಳಿದ್ರು ಕೊಂದು ಬಿಡ್ತಾರೆ,ಸಾಮಾಜಿಕ ತಾಣಗಳಲ್ಲಿ ಪ್ರಚೋದನೆ ಮಾಡೋರ ಮೇಲೆ ಕ್ರಮ ಕೈಗೊಳ್ತಾ ಇದೀರಿ ಆದರೆ ಕೋಮುವಾದ ಭಿತ್ತುವ ಮತಗ್ರಂಥಗಳ ಮೇಲೆ ಯಾವಾಗ ಆಕ್ಷನ್ ತೆಗೋತಿರಿ, ಮತಗ್ರಂಥಗಳಲ್ಲಿ ಕಾಫಿರರನ್ನ ಕೊಲ್ಲಿ ಅಂತಾರೆ, ಅದರ ಮೇಲೆ ಕ್ರಮ ತೆಗೊಂಡರೆ ಜಗತ್ತಿನಲ್ಲೇ ಶಾಂತಿ ನೆಲೆಸುತ್ತೆ,ಕಾಂಗ್ರೆಸ್ ನವರು ಮತ ಬ್ಯಾಂಕ್ ರಾಜಕಾರಣ ಮಾಡಬೇಡಿ,ಮತೀಯ ಭಾವ ಭಿತ್ತುವ ಮತ ಗ್ರಂಥಗಳನ್ನು ನಿಷೇಧಿಸಿ, ಆ ಧೈರ್ಯ ಇದ್ಯಾ? ಸುಹಾಸ್ ಹತ್ಯೆಯಾದಾಗ ಕಾಂಗ್ರೆಸ್ ಶೂನ್ಯ ಸಂವೇದನೆ ವ್ಯಕ್ತಪಡಿಸಿತು,ಸುಹಾಸ್ ಕುಟುಂಬ ಐದಾರು ದಶಗಳ ಕಾಲ ಕಾಂಗ್ರೆಸ್ಸನ್ನೇ ಸಮರ್ಥಿಸಿದ ಕುಟುಂಬ ಇಂದಿರಾ ಗಾಂಧಿ ಹತ್ಯೆಯಾದಾಗ ಅಂತಿಮ ದರ್ಶನಕ್ಕೆ ಅವರ ಅಜ್ಜ ದೆಹಲಿಗೆ ಹೋಗಿದ್ರು,ರೆಹಮಾನ್ ಹತ್ಯೆಯಾಗಿ ಕಂಡಾಗ ಸುಹಾಸ್ ಹತ್ಯೆಯೂ ಹತ್ಯೆಯಾಗಿ ಕಾಣಬೇಕು,ಗೋ ಸಾಗಾಟ ವೇಳೆ ಕ್ರಿಮಿನಲ್ ಕಬೀರ್ ಎನ್ಕೌಂಟರ್ ನಲ್ಲಿ ಸತ್ತ ನಕ್ಸಲ್ ಅಂತ ಶೂಟ್ ಮಾಡಿದವರನ್ನ ಜೈಲಿಗೆ ಕಳಿಸಿದ್ರಿ ,ಆದರೆ ಸರ್ಕಾರ ಕಬೀರ್ ಗೆ ಪರಿಹಾರ ಕೊಟ್ಟಿ ಓಲೈಕೆ ಮಾಡಿಕೈಗೊಳ್ಳಿ ರೆಹಮಾನ್ ಹತ್ಯೆಯಲ್ಲಿ ಕೆಲವು ವ್ಯಕ್ತಿಗತ ಕಾರಣ ಇದೆ, ತನಿಖೆ ಆಗಲಿ ಆದರೆ ಅದಕ್ಕೂ ಮೊದಲೇ ವಿಎಚ್ ಪಿ, ಭಜರಂಗದಳ ಮುಖಂಡರ ಮೇಲೆ ಬೆರಳು ತೋರಿಸ್ತಾ ಇದೀರಿ ಎಂದು ಹೇಳಿದರು.
ಈ ಹತ್ಯೆಯಲ್ಲಿ ಸಂಘಟನೆ ಟಾರ್ಗೆಟ್ ಮತ್ತು ಮುಗಿಸುವ ಕೆಲಸಕ್ಕೆ ನಾವು ಅವಕಾಶ ಕೊಡಲ್ಲ ಮೊದಲು ಪೊಲೀಸ್ ಇಲಾಖೆ ನಾವು ಹೇಳಿದ ವಿಚಾರಗಳ ಬಗ್ಗೆ ಗಮನ ಕೊಡಲಿ,ತಾಕತ್ತಿದ್ದರೆ ಮತಗ್ರಂಥಗಳ ವಿರುದ್ದ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲಿ.ಕಮ್ಯೂನಲ್ ಎನ್ನುವುದು ಭಾರತದ ಗ್ರಂಥಗಳಲ್ಲೇ ಇಲ್ಲ ಎಸ್ಪಿಯವರೇ, ಆದರೆ ಪರಕೀಯ ಮತಗ್ರಂಥಗಳಲ್ಲಿ ಅದರ ಉಲ್ಲೇಖ ಇದೆ, ಅವುಗಳ ಮೇಲೆ ಕ್ರಮ ಕೈಗೊಳ್ಳಿ, ನಾಸೀರ್ ಹುಸೇನ್ ವರದಿ ಎಷ್ಟು ಪ್ರಾಮಾಣಿಕ ವರದಿಯಾಗಿರುತ್ತೆ ಅನ್ನೋದೇ ಸಂಶಯವಾಗಿದೆ, ಅವರು ಆಯ್ಕೆಯಾದಾಗ ವಿಧಾನ ಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಅಂದಿದ್ದರು,ಕ್ರಿಯೆಗೆ ಪ್ರತಿಕ್ರಿಯೆ ಬರಬಾರದು ಅಂದರೆ ಕ್ರಿಯೆ ಆಗದಂತೆ ತಡೆಯಿರಿ,ಪೊಲೀಸರು ಮೊದಲು ಮೂಲಕ್ಕೆ ಹೋಗಿ ಕ್ರಿಯೆ ಆಗೋದನ್ನ ತಡೆಯಿರಿ,ನನಗೆ ಬಂದ ಮಾಹಿತಿ ಆಧಾರದಲ್ಲಿ ಇದನ್ನ ಹೇಳ್ತಾ ಇದೀನಿ ಎಂದರು.
ಕೆಲವು ಮತಗ್ರಂಥಗಳು ದ್ವೇಷ ಭಾವನೆ ಭಿತ್ತುತ್ತಿಲ್ವಾ? ಈಗ ವಿಮರ್ಶೆ ಆಗಲಿ, ಪ್ರಜಾಪ್ರಭುತ್ವದಲ್ಲಿ ಕ್ರಮ ಆಗಲಿ,ಕೇಂದ್ರ, ರಾಜ್ಯ ಸರ್ಕಾರ ಎರಡೂ ಮತಗ್ರಂಥಗಳ ವಿಮರ್ಶೆ ಮಾಡಲಿ ಅವುಗಳಲ್ಲಿ ಮಾನವ ಜೀವನಕ್ಕೆ ಹಿತಕರವಲ್ಲದ ವಿಷಯ ಇದ್ದರೆ ತೆಗೆದು ಹಾಕಲಿ ,ಒಂದು ಮತಗ್ರಂಥ ದ್ವೇಷ ಭಾವನೆ ಬಿತ್ತುದಿದೆ ಅಂದರೆ ಏನು ಮಾಡಬೇಕು? ಭಯೋತ್ಪಾದಕರನ್ನ ಹೊಡೆಯೋ ಬದಲು ದ್ವೇಷ ಭಿತ್ತುವ ಮತಗ್ರಂಥಗಳು ನಿಷೇಧವಾಗಲಿ,ಪೆಹಲ್ಗಾಮ್ ನಲ್ಲಿ ಹತ್ಯೆಯಾದಾಗಲೂ ಆತ ಮತಗ್ರಂಥಗಳ ಆಧಾರದಲ್ಲಿ ಕೊಂದ,ಹಾಗಿದ್ದರೆ ಅಂಥ ದ್ವೇಷ ಭಿತ್ತೋದು ಮತಗ್ರಂಥದಲ್ಲಿ ಏನಿದೆ ಅಂತ ವಿಮರ್ಶೆ ಆಗಲಿ,ನ್ಯಾಯಾಲಯದಲ್ಲೂ ಸಾಬೀತಾದ ಹಿನ್ನೆಲೆಯಲ್ಲಿ ಮತಗ್ರಂಥಗಳ ಬಗ್ಗೆ ಅಧ್ಯಯನ ನಡೆಯಲಿ,ಈ ಚರ್ಚೆಯಿಂದ ಸಂಘರ್ಷ ಆಗಲ್ಲ, ಮತ್ತೊಂದು ಶಾಂತಿಗೂ ಕಾರಣ ಆಗಲಿದೆ ,ಮತಗ್ರಂಥಗಳು ಮತೀಯ ದ್ವೇಷ ಭಿತ್ತಿದ್ರೆ ಸಂಘರ್ಷ ಆಗುತ್ತೆ, ಶಾಂತಿ ಭಿತ್ತಿದ್ರೆ ಶಾಂತಿ ಇರಲಿದೆ ,ನಾನು ಶಾಂತಿ ನೆಲೆಸಲು ಸಕಾರಾತ್ಮಕ ಸಲಹೆ ಪೊಲೀಸರಿಗೆ ಕೊಟ್ಟಿದ್ದೇನೆ ಜನರ ಮನಸ್ಥಿತಿ ಬದಲಾಗಲು ಕಾರಣ ಮತಗ್ರಂಥಗಳು,ವಿಎಚ್ ಪಿ ಹಿಂದೂಗಳ ಸಂಘಟನೆ, ಅದು ಹಿಂದೂಗಳನ್ನ ಒಗ್ಗಟ್ಟು ಮಾಡ್ತಿದ ಯಾವುದೇ ಹತ್ಯೆಯನ್ನು ನಾವು ಸಮರ್ಥನೆ ಮಾಡಲ್ಲ ಎಂದರು.
ಆರ್ ಸಿ ಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಈ ಘಟನೆ ಆದ ಬಳಿಕವೂ ದೋಸೆ ತಿಂದ್ರೆ ಅವರಿಗೆ ಮನುಷ್ಯತ್ವ ಇಲ್ಲ .ಮುಖ್ಯಮಂತ್ರಿ ಆ ಕೆಲಸ ಮಾಡಿದ್ರೆ ಭಗವಂತ ಅವರನ್ನು ಕ್ಷಮಿಸಲ್ಲ,ಮಕ್ಕಳನ್ನು ಕಳೆದುಕೊಂಡ ಹೆತ್ತವರು ಸಮಾಜದ ಶಾಪ ತಟ್ಟುತ್ತದೆ.ಈ ಮಾಹಿತಿ ಸುಳ್ಳು ಆಗಲಿ ಎಂದು ಆಶಿಸುತ್ತೇನೆ ಎಂದರು. ಆದರೆ ಈ ಮಾಹಿತಿ ಸತ್ಯ ಆಗಿದ್ರೆ ಒಂದು ಕ್ಷಣದಲ್ಲೂ ಅವರು ಅಧಿಕಾರದಲ್ಲಿ ಇರಲೇಬಾರದು ವಿಧಾನಸೌಧದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿದ್ದು ಬೆಂಗಳೂರು ಕಮೀಷನರ್ ಸರ್ಕಾರ ರಾಜಕೀಯ ಲಾಭ ತೆಗೆದುಕೊಳ್ಳಬೇಕು ಅನ್ನೋದು ಕಮೀಷನರ್ ಆಸೆಯಾಗಿತ್ತು ಕ್ರಿಕೆಟ್ ಆಟಗಾರರ ಜೊತೆ ಕಾಂಗ್ರೆಸ್ ಪಕ್ಷದ ಮುಖಂಡರ ಮಕ್ಕಳು ಮೊಮ್ಮಕ್ಕಳು ಸೆಲ್ಫಿ ತೆಗೆದುಕೊಳ್ಳಲಿ ಅಂತಾ ಕಮೀಷನರ್ ವ್ಯವಸ್ಥೆ ಮಾಡಿದರು ಎಂದರು.
ಕಾಂಗ್ರೆಸ್ ಸರ್ಕಾರ ದಿನನಿತ್ಯ ಹಗರಣ ಮಾಡುತ್ತಿದ್ದಾರೆ ಒಂದು ಹಗರಣ ಇನ್ನೊಂದು ಹಗರಣವನ್ನು ಬದಿಗೆ ಸರಿಸುತ್ತಿದೆ.ಸಂವೇದನೆ,ನೈತಿಕತೆ ಹೊತ್ತಿಕೊಳ್ಳಬೇಕಾದವರು ಹೊತ್ತಿಕೊಳ್ಳೋದಿಲ್ಲ ಈಗ ಹಗರಣವನ್ನೇ ಜೀರ್ಣಿಸುವಷ್ಟು ಶಕ್ತಿ ಕಾಂಗ್ರೆಸ್ ಗೆ ಇದೆ ಹೊರಗಡೆ ಕಾಲ್ತುಳಿತಕ್ಕೊಳಗಾದ ಗಾಯಾಳುಗಳನ್ನು ಕೈಯಲ್ಲಿ ಹೆಗಲಮೇಲೆ ಹೊತ್ತುಕೊಂಡು ಹೋಗುತ್ತಿದ್ರು,ಒಳಗಡೆ ಉಪಮುಖ್ಯಮಂತ್ರಿ ಟ್ರೋಫಿ ಎತ್ಕೊಂಡುತ್ತಿದ್ರು ಈ ಎಲ್ಲಾ ಘಟನೆಗಳಿಗೆ ಹೊಣೆ ಯಾರು? ಕ್ರೆಡಿಟ್ ವಾರ್ ಮಾಡಿದವರು ಹೊಣೆಗಾರರು ಅಲ್ವಾ ಎಂದು ಮಂಗಳೂರಿನಲ್ಲಿ ಪರಿಷತ್ ಸದಸ್ಯ ಸಿಟಿ ರವಿ ಆಕ್ರೋಶ ಹೊರಹಾಕಿದ್ದಾರೆ.